ಮುದ್ದೇಬಿಹಾಳ: ಅ.೬ ರಂದು ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧೨ರವರೆಗೆ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ದೇವಸ್ಥಾನದ ಸಮುದಾಯ ಭವನದ ಮೇಲೆ ನಿರ್ಮಿಸಿರುವ ನೂತನ ಯಾತ್ರಿನಿವಾಸ, ಹೊಸ ಕಟ್ಟಡದ ಕಾರ್ಯಾಲಯ, ಸಭಾಮಂಟಪದ ಉದ್ಘಾಟನೆ, ಧರ್ಮಸಭೆ ಹಾಗೂ ದಾನಿಗಳ ಸನ್ಮಾನ ಸಮಾರಂಭ, ಮಂಗಲ ವಾದ್ಯಘೋಷ, ಧ್ವಜಾರೋಹಣ, ೧೦೦೮ ಪಾಶ್ವನಾಥ ಭಗವಾನರಿಗೆ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ಷೋಡೋಪಚಾರ ಪೂಜೆ, ಕುಂಕುಮಾರ್ಚನೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದ್ದು ಭಕ್ತಾದಿಗಳು ಭಾಗಿಯಾಗುವಂತೆ ದೇವಸ್ಥಾನ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮದ್ಯಾಹ್ನ ೨ ಗಂಟೆಗೆ ಶುರುವಾಗುವ ಉದ್ಘಾಟನೆ, ಧರ್ಮಸಭೆ ಮತ್ತು ದಾನಿಗಳಿಗೆ ಸನ್ಮಾನ ಸಮಾರಂಭದ ಪಾವನ ಸಾನಿಧ್ಯ ಹಾಗೂ ಉದ್ಘಾಟನೆಯನ್ನು ಶಿವಮೊಗ್ಗದ ಹೊಂಬುಜ ಜೈನಮಠದ ಪ.ಪೂ ಸ್ವಸ್ತಿಶ್ರೀ ಯವರು ಹಾಗೂ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ನೆರವೇರಲಿಸಲಿದ್ದು, ಅಭಿನಂದನ ಪಾಶ್ವನಾಥ ಗೋಗಿ, ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಪದ್ಮರಾಜ ದಂಡಾವತಿ, ಗಣಪತರಾವ್ ಹಜಾರೆ, ಬಾಹುಬಲಿ ಮುತ್ತಿನ, ಅಪ್ಪಾಸಾಹೇಬ ಮುತ್ತಿನ, ಬಾಹುಬಲಿ ಹೂಲಿ, ಬಾಬುಲಾಲ ಓಸ್ವಾಲ ಆಗಮಿಸಲಿದ್ದು ಗದಗ ನ ದಿಗಂಬರ ಜೈನ ಸಂಘದ ಅಧ್ಯಕ್ಷ ಪಿ.ಎ.ಕುಲಕರ್ಣಿ ಅಲ್ಪ ಸಂಖ್ಯಾತರಿಗಾಗಿ ಸರಕಾರ ನೀಡುವ ಸೌಲಭ್ಯ ಹಾಗೂ ಸವಲತ್ತುಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
