ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಮಳೆ ಇಲ್ಲದ ಕಂಗೆಟ್ಟು ಹೋಗಿದ್ದ ರೈತ ಬಾಂದವರು ಶನಿವಾರರಂದು ಸಾಯಂಕಾಲ ಸುರಿದ ರಬಸದ ಕೂಡಿದ ಗುಡುಗು ಸಹೇತ ಭಾರಿ ಮಳೆಯಿಂದ ತಾಳಿಕೋಟೆ ಭಾಗದ ರೈತರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಸಾಯಂಕಾಲ ೫ ಗಂಟೆಯಿಂದ ೬ ಗಂಟೆಯವರೆಗೆ ಎಡಬಿಡದೇ ಸುರಿದ ಭಾರಿ ಮಳೆಯು ಎಲ್ಲರಲ್ಲಿಯೂ ಸಂತಸವನ್ನು ಮೂಡಿಸಿದೆ ಅಲ್ಲದೇ ಕೆಲವೆಡೆ ಒಣ ಭೂಮಿಯಲ್ಲಿ ಬಿತ್ತನೆ ಮಾಡಿದ್ದ ರೈತರಿಗೆ ಆಶ್ಲೇಸಾ ಮಳೆಯು ಖುಷಿ ತಂದುಕೊಟ್ಟಿದ್ದರೆ ಇನ್ನೂ ಕೆಲವು ರೈತರು ಬೀಜ ಗೊಬ್ಬರ ಖರೀದಿಯೊಂದಿಗೆ ಮುಗಿಲೆತ್ತರ ಮುಖ ಮಾಡಿದ್ದವರಿಗೆ ಬಿತ್ತನೆಗೆ ಸಜ್ಜಾಗುವಂತೆ ಮಾಡಿದೆ.
ಸುರಿದ ರಭಸದ ಮಳೆಯಿಂದ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳ ಮೇಲೆ ದೊಡ್ಡ ಪ್ರಮಾಣದ ನೀರು ಹರಿಯುತ್ತಿರುವದು ಕಂಡು ಬಂದಿತ್ತಲ್ಲದೇ ಮಳೆ ಇಲ್ಲದೇ ಕೇವಲ ಮೋಡಕವಿದ ವಾತಾವರಣ ನೋಡುತ್ತಿದ್ದ ಜನತೆಗೆ ತಂಪೆರೆದಂತಾಗಿದೆ.
ಕೈಕೊಟ್ಟ ವಿದ್ಯುತ್
ಸುರಿದ ರಭಸದ ಮಳೆಯಿಂದ ವಿಜಯಪುರ ರಸ್ತೆಯ ವಿದ್ಯುತ್ ಕಂಬಗಳು ವಾಲಿದ್ದರಿಂದ ರಾತ್ರಿ ೯ ಗಂಟೆಯವರೆಗೂ ವಿದ್ಯುತ್ ಕೈಕೊಟ್ಟಿದ್ದು ಕಂಡುಬಂದಿತ್ತಲ್ಲದೇ ಸದರಿ ಕಂಬಗಳ ದುರಸ್ಥಿ ಕಾರ್ಯದಲ್ಲಿ ಹೆಸ್ಕಾಂ ಅಧಿಕಾರಿಗಳು ಮುಂದಾಗಿದ್ದು ಕಂಡುಬಂದಿತು.
