ವಿಜಯಪುರ: ವಿದ್ಯಾರ್ಥಿಗಳು ತರಗತಿ ಚಟುವಟಿಕೆಗಳ ಜೊತೆಗೆ ಕ್ರೀಡೆಗಳಲ್ಲೂ ಉತ್ಸಾಹದಿಂದ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಕ್ರೀಡಾಭಿರುಚಿ ಅಗತ್ಯ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಹೇಳಿದರು.
ಬಂಜಾರಾ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಗುರುವಾರದಂದು ಬೆಳಗಾವಿ ವಿಭಾಗ ಮಟ್ಟದ ೨೦೨೩-೨೪ನೆ ಸಾಲಿನ ದಸರಾ ಕ್ರೀಡಾಕೂಟದ ‘ಬಾಸ್ಕೇಟ್ ಬಾಲ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಟ್ರೋಫಿ ವಿತರಣೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆ ಹೊಂದಿದಾಗ ಮಾತ್ರ ಜೀವನದಲ್ಲಿನ ಗುರಿ ತಲುಪಲು ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಕರು, ಪಾಲಕರು ಇನ್ನಷ್ಟು ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಕ್ರೀಡೆಯಲ್ಲಿ ಸಾಧನೆ ಮಾಡಿದ್ದ ಕೀರ್ತಿ ಚವ್ಹಾಣ್, ಸಾಕ್ಷಿ ವಾಲಿಕಾರ, ಶಿವುಬಾಯಿ ಮಠ, ಶ್ವೇತಾ ಬಡಿಗೇರ, ಮಾಬುಬಿ ಮುಲ್ಲಾ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಿ.ಎಲ್.ಚವ್ಹಾಣ್, ಕಾರ್ಯಾಧ್ಯಕ್ಷ ಕೆ.ಜಿ.ರಾಠೋಡ, ಕಾರ್ಯದರ್ಶಿ ಆರ್.ಡಿ.ಚವ್ಹಾಣ್, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರು ಸಂದೀಪ ರಾಠೋಡ, ಪ್ರಾಥಮಿಕ ಶಾಲೆಯ ಮುಖ್ಯ ಗುರು ಎಂ.ಬಿ.ಪೂಜಾರಿ, ಶಿಕ್ಷಕರಾದ ಎಸ್.ವ್ಹಿ.ದೇಶಪಾಂಡೆ, ಎ.ಎಂ.ನಾಗೊಂಡ, ಜೆ.ಕೆ.ರಾಠೋಡ, ಎಸ್.ಬಿ.ಒಡೆಯರ, ಎಸ್.ಡಿ.ಚವ್ಹಾಣ್, ಆರ್.ಎಸ್.ಹಿರೇಮಠ, ಪಿ.ಎಂ.ಕೌಲಗಿ, ಎಸ್.ಕೆ.ಶಿಂಧೆ, ಬಿ.ಎಸ್.ದ್ಯಾಬೇರಿ, ಆರ್.ವ್ಹಿ.ಭುಜಂಗನವರ, ಎಸ್.ಎಂ.ಮಾಳಿ, ಅಶೋಕ ಚವ್ಹಾಣ್, ಆರ್.ಎನ್.ಬಕಾಟೆ, ರೇಖಾ ರಜಪೂತ, ಅಶೋಕ ಚವ್ಹಾಣ್, ಎಸ್.ಪಿ.ದಢೇಕರ ಹಾಗೂ ಸಿಬ್ಬಂದಿ ವರ್ಗದವರು ಹರ್ಷವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಬಂಜಾರಾ ಪ್ರೌಡಶಾಲೆ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ
Related Posts
Add A Comment