ಇಂಡಿ: ಪರಿಸರ ಹಾನಿಗೆ ಕಾರಣವಾಗುವ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಪಟ್ಟಣದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಂತಿಲ್ಲ. ಇದನ್ನರಿತ ಆಡಳಿತ ಅಧಿಕಾರಿ, ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಹಾಗೂ ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ ಅಂಗಡಿಗಳ ಮೇಲೆ ದಾಳಿ ಮಾಡಿ ವ್ಯಾಪಾರಸ್ಥರಿಗೆ ದಂಡ ಹಾಕಿದ್ದಾರೆ.
ಪಟ್ಟಣದ ವಿಜಯಪುರ ಮುಖ್ಯ ರಸ್ತೆಯಲ್ಲಿ ಟಿಪ್ಪು ಸುಲ್ತಾನ್ ವೃತ್ ಹಾಗೂ ಇತರೆ ಕಡೆ ಪ್ಲಾಸ್ಟಿಕ್ ಮಾರುವ ಅಂಗಡಿಗಳ ಮೇಲೆ ದಾಳಿ ಸುಮಾರು 65 ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆದು 10 ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಅದಲ್ಲದೇ ಪಟ್ಟಣದ ವ್ಯಾಪ್ತಿಯ ವ್ಯಾಪಾರ ಮಳಿಗೆಗಳು, ರಸ್ತೆ ಬದಿ ವ್ಯಾಪಾರಸ್ಥರು, ಎಗ್‌ರೈಸ್ ಅಂಗಡಿಗಳು, ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದರು. ಒಂದು ವೇಳೆ ಕೆಟ್ಟ ಅಭ್ಯಾಸ ಮುಂದುವರೆಸಿದ್ರೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತೆದೆ ಎಂದು ಹೇಳಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಕೆ ಮಾಡಿದರೆ ದಂಡ ಕೊಡಬೇಕಾಗುತ್ತದೆ. ಕಿರಿಯ ಆರೋಗ್ಯ ನಿರೀಕ್ಷ ಎಲ್ ಎಸ್ ಸೋಮನಾಯಕ, ಶ್ರೀಶೈಲ ಹಾದಿಮನಿ, ಕಿರಣ ಸಿಂದೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಮತ್ತು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
Related Posts
Add A Comment