ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮದ ಯುವ ರೈತ ಶಿವಾನಂದ ಅಯ್ಯಪ್ಪ ಕೋಟ್ಯಾಳ ಇವರು ಎತ್ತುಗಳಿಂದ ಗುರುವಾರ ನಿರಂತರ 10 ಗಂಟೆಗಳ ಕಾಲ ಗಳೆ ಹೊಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ. ಗ್ರಾಮದ ಹಸನ್ ಸಾಬ ಇವರ ಜಮೀನಿನಲ್ಲಿನ 20 ಎಕರೆ ವಿಸ್ತೀರ್ಣದ ಹತ್ತಿ ಬೆಳೆಯಲ್ಲಿ ಎತ್ತುಗಳ ಗಳೆಯಿಂದ ಬದು ಕಟ್ಟಿ ಯುವ ರೈತ ಶಿವಾನಂದ ತನ್ನ ರಾಸುಗಳೊಂದಿಗೆ ಸಾಹಸ ಮೆರೆದಿದ್ದಾನೆ.
ಗ್ರಾಮದ ಪ್ರಗತಿಪರ ರೈತ ರಾಜೇಸಾಬ ಮನಿಯಾರ, ಮುಖಂಡ ಖತಾಲ್ ಸಾಬ್ ಬಗರೀಕಾರ, ಮುದುಕಪ್ಪ ಪ್ರಕಾಶ ವಾಲೀಕಾರ, ಸುರೇಶ್ ನಾಟೀಕಾರ ಸಾಹಸವನ್ನು ಮೆಚ್ಚಿ ರಾಸುಗಳಿಗೆ ಬೆಳ್ಳಿ ಕಡೆ ಬಹುಮಾನ ನೀಡಿದರು.
ಗ್ರಾಮಸ್ಥರಿಂದ ಮೆಚ್ಚುಗೆ: ಯುವ ರೈತ ಆತನ ರಾಸುಗಳ ಈ ಸಾಹಸಕ್ಕೆ ಗ್ರಾಪಂ ಅಧ್ಯಕ್ಷೆ ಖಾದರಬಿ ರಾಜೇಸಾಬ ಗುಡಿಮನಿ, ಉಪಾಧ್ಯಕ್ಷ ಬಸನಗೌಡ ಮಾಲಿಪಾಟೀಲ್, ಗ್ರಾಪಂ ಸದಸ್ಯರು ಹಾಗೂ ರೈತರಾದ ನಿಂಗನಗೌಡ ಲಕ್ಕೊಂಡ, ಮಲ್ಲಿಕಾರ್ಜುನ ಸಾಲಿ, ಅರವಿಂದಗೌಡ ಪೊಲೀಸ್ ಪಾಟೀಲ, ದೇವು ಮಡಿವಾಳರ, ಧರೆಪ್ಪ ಭಾವಿಕಟ್ಟಿ, ಸುನೀಲ ಕೊಂಡಗೂಳಿ, ಮೋನುದ್ದೀನ್ ಗುಡಿಮನಿ, ಸುರೇಶ ಮಾಳಳ್ಳಿ, ಶಿವಯ್ಯ ಹಿರೇಮಠ, ದೇವು ಸಜ್ಜನ್, ಅನೀಲ ಕೊಂಡಗೂಳಿ, ಚಿಕ್ಕು ಪೂಜಾರಿ, ಕೇದು ಕೆಂಭಾವಿ, ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Related Posts
Add A Comment