ಬರದ ನಾಡು ಬಂಗಾರದ ನಾಡಾಗಿಸಿದ ಧೀಮಂತ
ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅದರಲ್ಲೂ ವಿಶೇಷವಾಗಿ ಪಂಚನದಿಗಳ ಬೀಡಾಗಿದ್ದು ಬರಗಾಲದ ಹಣೆ ಪಟ್ಟಿಯನ್ನು ಶಾಶ್ವತವಾಗಿ ಅಂಟಿಸಿಕೊಂಡಿದ್ದ ವಿಜಯಪುರ ಜಿಲ್ಲೆಯ ಇತಿಹಾಸದಲ್ಲಿ 2013 ರಿಂದ 2018 ರ 5 ವರ್ಷಗಳ ಅವಧಿ ಅಭಿವೃದ್ಧಿ ದೃಷ್ಟಿಯಿಂದ ಸುವರ್ಣ ಯುಗವೆಂದರೆ ಅತಿಶಯೋಕ್ತಿಯಾಗಲಾರದು. ಬರದ ನಾಡನ್ನು ಬಂಗಾರದ ನಾಡನ್ನಾಗಿಸಿದ 2013ರಲ್ಲಿ ಜಲಸಂಪನ್ಮೂಲ ಸಚಿವರಾಗಿ ಎಂ ಬಿ ಪಾಟೀಲರು ಮಾಡಿದ ಸಾಧನೆ ನಿಜಕ್ಕೂ ಅನನ್ಯವಾದದ್ದು.
ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಒಂದು ಹೋಬಳಿಗೆ 1300ಕೋಟಿ ರೂಪಾಯಿಗಳ ರೈತರ ಬದುಕನ್ನು ಹಸನಾಗಿಸಿದ ಜೊತೆಗೆ ಜಿಲ್ಲೆಯ ಬಹುತೇಕ ಕೆರೆಗಳನ್ನು, ಕೆರೆ ತುಂಬಿಸುವ ಯೋಜನೆಯನ್ನು ತಂದು ನೀರು ತುಂಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನೀರಾವರಿಗೆ ಒಳಪಡಿಸಲು ಸಾಧ್ಯವೇ ಇಲ್ಲ ಎಂದು ನೀರಾವರಿ ತಜ್ಞರು ಅಭಿಪ್ರಾಯಪಟ್ಟಿದ್ದ ಅತಿ ಎತ್ತರದ ಪ್ರದೇಶವಾದ ನಮ್ಮ ಕ್ಷೇತ್ರದ ಕನಮಡಿ ಗ್ರಾಮದವರೆಗೆ ನೀರು ತರುವುದು ಭಗೀರಥ ಪ್ರಯತ್ನವೇ.. ಅಂತ ಸಾಹಸವನ್ನು ಮಾಡಿ ಶಾಶ್ವತವಾಗಿ ಜನರ ಹೃದಯದಲ್ಲಿ ಆಧುನಿಕ ಭಗೀರಥ ಎನ್ನುವ ಬಿರುದನ್ನು ಪಡೆದವರು ನಮ್ಮ ಹೆಮ್ಮೆಯ ಎಂಬಿ ಪಾಟೀಲರು.
ಕರ್ನಾಟಕ ರಾಜ್ಯದ ನೀರಾವರಿ ಇಲಾಖೆಯಲ್ಲಿಯೇ ಮೊದಲ ಬಾರಿಗೆ 3.2 ಮೀಟರ ಅತಿ ದೊಡ್ಡ ಪೈಪ್ಗಳನ್ನು ಬಳಸಿ ಕೃಷ್ಣೆಯ ಒಡಲಿಂದ ಭೂಮಾತೆಯ ಮಡಿಲಿಗೆ ನೀರು ತರೋದರ ಮೂಲಕ ರೈತನ ಮುಖದಲ್ಲಿ ಶಾಶ್ವತವಾಗಿ ನಗು ಮೂಡಿಸಿದರು. ಏಷ್ಯಾದಲ್ಲಿ ಅತಿ ಉದ್ದದ 15.7 ಕಿಲೋಮೀಟರ್ ತಿಡಗುಂಡಿಯ ವಯಾಡೆಕ್ಟ್ ನಿರ್ಮಾಣ ಮಾಡಿರುವುದು ಅಷ್ಟೇ ಅಲ್ಲದೆ ಕೆಲವು ಕಡೆ ಒಂದು ನೂರು ಅಡಿ ಎತ್ತರದ ಪಿಲ್ಲರ್ ಗಳ ಮೇಲೆ ನಿರ್ಮಾಣವಾಗಿರುವ ಈ ವಯಾಡೆಕ್ಟ್ ನ ವಿಶೇಷತೆ ಎಂದರೆ ಒಳಗಡೆ ನೀರು ಹರಿಯುತ್ತಿದ್ದರೆ ಮೇಲ್ಗಡೆ ವಾಹನಗಳು ಸಂಚರಿಸಬಹುದಾದ ವಿನೂತನವಾದ ಅಪರೂಪದ ಕೆಲಸವನ್ನು ಅವರ ಅಧಿಕಾರ ಅವಧಿಯಲ್ಲಿ ಮಾಡಿದ್ದಾರೆ. ರಾಜ್ಯದ ನೀರಾವರಿ ಇಲಾಖೆ ಇತಿಹಾಸದಲ್ಲಿ ಮೊದಲ ಬಾರಿಗೆ ಮೆಟಾಲಿಕ್ ವ್ಯಾಲ್ಯುಟ್ ಪಂಪನ್ನು ಬಳಸಿದ ಕೀರ್ತಿ ಎಂ ಬಿ ಪಾಟೀಲರಿಗೆ ಸಲ್ಲುತ್ತದೆ.
46 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ರಾಜ್ಯದ ನೀರಾವರಿ ಯೋಜನೆಗಳಿಗೆ ಸಮರ್ಪಕವಾಗಿ ಬಳಸಿ ಅವುಗಳಿಗೆ ಟೆಂಡರ್ ಕರೆದು 2013 ರಿಂದ 2018ರ ಅವಧಿಯ ಒಳಗಾಗಿ ಈ ಸಂಪೂರ್ಣ ಹಣವನ್ನು ವಿನಿಯೋಗಿಸಿ ತಮ್ಮ ಅಧಿಕಾರ ಅವಧಿಯಲ್ಲಿಯೇ ಗುದ್ದಲಿ ಪೂಜೆ ಮಾಡಿ ಅವುಗಳನ್ನು ಲೋಕಾರ್ಪಣೆ ಮಾಡಿದ ಕೀರ್ತಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ ಬಿ ಪಾಟೀಲರಿಗೆ ಸಲ್ಲುತ್ತದೆ. ಅದಕ್ಕಾಗಿಯೇ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಬಬಲೇಶ್ವರಕ್ಕೆ ಬಂದಾಗಲೋಮ್ಮೆ ” ಎಂ ಬಿ ಪಾಟೀಲರಂತವರು ವಿಧಾನಸೌಧದಲ್ಲಿದ್ದರೆ ವಿಧಾನಸೌಧಕ್ಕೂ ಒಂದು ಗೌರವ ನಿಮ್ಮ ಮತಕ್ಷೇತ್ರಕ್ಕೂ ಒಂದು ಗೌರವ “ಎಂದು ಸದಾ ಹೇಳುತ್ತಿರುತ್ತಾರೆ. ಈ ಶತಮಾನದ ಸಂತ ಜ್ಞಾನ ಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳು ” ಎಂ ಬಿ ಪಾಟೀಲ್ ಎಂದರೆ ನೀರು, ನೀರು ಎಂದರೆ ಎಂ.ಬಿ ಪಾಟೀಲ ಎಲ್ಲಿಯವರೆಗೆ ನೀರು ಇರುತ್ತದೆ ಅಲ್ಲಿವರೆಗೆ ಎಂಬಿ ಪಾಟೀಲರ ಹೆಸರು ಶಾಶ್ವತವಾಗಿರುತ್ತದೆ ” ಎಂದು ಸಮಾರಂಭವೊಂದರಲ್ಲಿ ಹೇಳಿದ್ದರು.
ಎಂದೂ ಯಾರ ಬಗೆಗೂ ಮುಖಸ್ತುತಿ ಮಾಡದ ಈ ಶತಮಾನದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದ ಈ ಮಾತು ನಮ್ಮ ಕರುನಾಡ ಜನತೆಗೆ ನೋಬೆಲ್ ಪಾರಿತೋಷಕ್ಕಿಂತಲೂ ದೊಡ್ಡದಾದ ಬಹುಮಾನವನ್ನು ಈ ನಾಡಿನ ಜನತೆಗೆ ದೇವರೇ ಆಗಿದ್ದ ಸಿದ್ಧೇಶ್ವರ ಮಹಾಸ್ವಾಮಿಗಳು ನೀಡಿರುವುದರಿಂದ ಅದಕ್ಕಿಂತ ದೊಡ್ಡ ಬಹುಮಾನ, ಬಿರುದು ಬಾವಲಿಗಳ ಅಗತ್ಯ ನಮ್ಮ ಜನನಾಯಕ ಎಂ ಬಿ ಪಾಟೀಲರಿಗೆ ಇರಲಾರದು ಅಲ್ಲವೇ? ಒಬ್ಬ ವ್ಯಕ್ತಿಯ ಜೀವನದಲ್ಲಿ ಇದಕ್ಕಿಂತ ದೊಡ್ಡ ಸಾರ್ಥಕ್ಯ ಮತ್ತೇನಿದೆ?
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಮಹಾಜನತೆ ಕೊಟ್ಟ ಅಧಿಕಾರವನ್ನು ಅತ್ಯಂತ ಪ್ರಾಮಾಣಿಕವಾಗಿ ಈ ರಾಜ್ಯದ ರೈತರ ಬದುಕನ್ನು ಹಸನಾಗಿಸುವ ಪ್ರಯತ್ನ ಮಾಡಿದ ನಮ್ಮೆಲ್ಲರ ಪ್ರೀತಿಯ ಎಂ.ಬಿ.ಪಾಟೀಲ ರ ಜನ್ಮದಿನದಂದು ನಾಡಿನ ಜನತೆಯ ಪರವಾಗಿ ವಿಶೇಷವಾಗಿ ವಿಜಯಪುರ ಜಿಲ್ಲೆಯ ಜನತೆ ಪರವಾಗಿ ನಾನು ತುಂಬು ಹೃದಯದ ಅಭಿನಂದನೆಗಳನ್ನು ಜನ್ಮದಿನದ ಶುಭಾಶಯಗಳು ಕೋರುತ್ತೇನೆ.
ಅಂದು ಅವರು ನೀರಾವರಿ ಸಚಿವರಾಗಿದ್ದಾಗ ನಮ್ಮ ಜಿಲ್ಲೆಯ ಹೆಮ್ಮೆಯ ಅನುಭಾವ ಕವಿಗಳಾಗಿದ್ದ ಮಧುರ ಚೆನ್ನರ ವಂಶಸ್ಥರಾದ ಶ್ರೇಷ್ಠ ಅಭಿಯಂತರರು ನೀರಾವರಿ ತಜ್ಞರು ಆಗಿರುವ ಅರವಿಂದ ಗಲಗಲಿ ಸರ್ ಅವರ ಪರಿಶ್ರಮ ಕಾಳಜಿ ಕಕ್ಕುಲತೆಯು ಅನನ್ಯವಾದದ್ದು. ಗಲಗಲಿ ಸರ್ ಅವರನ್ನು ಒಳಗೊಂಡಂತೆ ರಾಜ್ಯದ ನೀರಾವರಿ ಇಲಾಖೆಯ ಎಲ್ಲಾ ಅಧಿಕಾರಿಗಳ ಸಮಸ್ತ ಅಭಿಯಂತರ ಶ್ರಮವನ್ನು ಹಾಗೂ ಇಂಥ ಅವಕಾಶವನ್ನು ಕಲ್ಪಿಸಿ ಕೊಟ್ಟ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಜನರನ್ನು ಸದಾ ಕೃತಜ್ಞತೆಯಿಂದ ಸ್ಮರಿಸುವ ತಾಯಿ ಹೃದಯದ ಜನನಾಯಕ ಎಂ ಬಿ ಪಾಟೀಲರ ಸರಳ ಸಹೃದಯತೆಯಿಂದ ಕೂಡಿದ ಸಜ್ಜನಿಕೆಯ ವ್ಯಕ್ತಿತ್ವ ಅವರದು. ನಮ್ಮ ಭಾಗದ ಅತ್ಯಂತ ಪ್ರಭಾವಿ ಪರಮ ಪೂಜ್ಯರಾದ ಕತ್ನಳ್ಳಿಯ ಶ್ರೀ ಶಿವಯ್ಯ ಮಹಾಸ್ವಾಮೀಜಿಯವರು ಎಂ ಬಿ ಪಾಟೀಲರ ಕೋಟಿ ವೃಕ್ಷ ಅಭಿಯಾನದ ಸಾರ್ಥಕ ಕಾರ್ಯಕ್ರಮವನ್ನು ಅರಿತು ಅವರನ್ನು ಅಭಿನಂದಿಸಿ ಒಂದು ಸಮಾರಂಭದಲ್ಲಿ ಹೇಳಿದ ಮಾತು” ಒಂದು ಸಸಿಯನ್ನ ರಕ್ಷಿಸಿದರೆ 15 ಅನಾಥ ಶಿಶುವನ್ನ ರಕ್ಷಿಸಿದ ಪುಣ್ಯ ಸಸಿಯನ್ನು ರಕ್ಷಿಸಿದವರಿಗೆ ಬರುತ್ತದೆ ಕೋಟಿ ವೃಕ್ಷಗಳನ್ನ ನೆಡುವ ನಿಮ್ಮ ಸಂಕಲ್ಪಕ್ಕೆ ಅದೆಷ್ಟು ಲಕ್ಷ ಶಿಶುಗಳನ್ನು ಸಂರಕ್ಷಿಸಿದ ಪುಣ್ಯ ನಿಮ್ಮದಾಗಬಲ್ಲದು ಅಲ್ಲವೇ? ಪುಣ್ಯ ಕಾರ್ಯ ಮಾಡಿದ ಎಂ ಬಿ ಪಾಟೀಲರಿಗೆ ನನ್ನ ಹೃದಯಪೂರ್ವಕ ಆಶೀರ್ವಾದಗಳು ಎಂದು ಹೇಳಿ ಅಭಿನಂದಿಸಿದ್ದು ಈಗಲೂ ನನ್ನ ನೆನಪಿನಂಗಳದಲ್ಲಿದೆ ” ಅವರು ಮಾಡುವ ಸಮಾಜಮುಖಿ ಕೆಲಸಗಳ ಬಗ್ಗೆ ಹೇಳುತ್ತಾ ಹೋದರೆ ದಿನಗಳು ಸಾಲಲಾರವು. ಅವರು ಶತಾಯುಷಿಗಳಾಗಬೇಕು. ಮುಂಬರುವ ದಿನಗಳಲ್ಲಿ ಈ ನಾಡಿನ ಮುಖ್ಯಮಂತ್ರಿ ಆಗಬೇಕು ಎನ್ನುವುದು ಬಸವ ನಾಡಿನ ಹಾಗೂ ಸಮಸ್ತ ಜನತೆಯ ಅಭಿಲಾಷೆಯಾಗಿದೆ. ಅಂತಹ ಬಹುದೊಡ್ಡ ನಿರೀಕ್ಷೆಯೊಂದಿಗೆ ಇಂದು ನಾಡಿನಾದ್ಯಂತ ಹಾಗೂ ಮತಕ್ಷೇತ್ರದ ಪ್ರತಿ ದೇವಾಲಯಗಳಲ್ಲಿ ಅವರನ್ನು ಪ್ರೀತಿಸುವ ರೈತರು ತಾಯಂದಿರು ಅಭಾಲವೃದ್ಧರಾಗಿ ಎಲ್ಲರೂ ಬಸವಾದಿ ಶರಣರಲ್ಲಿ ಅವರ ಜನ್ಮದಿನದಂದು ಪ್ರಾರ್ಥಿಸಿ ಎಮ್ ಬಿ ಪಾಟೀಲರಿಗೆ ಶುಭವನ್ನು ಹಾರೈಸಿದ್ದಾರೆ.
- ಸಂಗಮೇಶ ಬಬಲೇಶ್ವರ
ಮುಖ್ಯ ವಕ್ತಾರರು,
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ.