ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದಲ್ಲಿ ಎಬಿವಿಪಿ ವತಿಯಿಂದ ಬಂಕಿಮ್ ಚಂದ್ರ ಚಟರ್ಜಿ ಅವರು ರಚಿಸಿದ ವಂದೇ ಮಾತರಂ ಗೀತೆಗೆ ೧೫೦ ವರ್ಷಗಳು ಹಾಗೂ ಭಾರತಕ್ಕೆ ೭೯ ನೇ ಸ್ವಾತಂತ್ರ್ಯ ಸಂಭ್ರಮದ ಹಿನ್ನೆಲೆಯಲ್ಲಿ ಶ್ರೀ ಶಾಂತೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಕಾರ್ಯಕರ್ತರು ಸೇರಿ ೪೦೦ ಮೀಟರ್ ಉದ್ದದ ತಿರಂಗಾ ಯಾತ್ರೆ ನಡೆಸಿದರು.
ಯಾತ್ರೆಯು ಶ್ರೀ ಶಾಂತೇಶ್ವರ ಪದವಿಪೂರ್ವ ಮಹಾವಿದ್ಯಾಲಯದಿಂದ ವಿಜಯಪುರ ರಸ್ತೆ, ನಂತರ ಬಸವೇಶ್ವರ ವೃತ್ತ , ಅಂಬೇಡ್ಕರ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮೇರವಣೆಗೆ ನಡೆಸಿದರು.
ಎನ್.ಸಿ.ಸಿ, ಎನ್.ಎಸ್.ಎಸ್ ಮತ್ತು ಮಹಿಳಾ ಎಬಿವಿಪಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮೆರವಣೆಗೆಯಲ್ಲಿ ದೇಶದ ಪರ ಮತ್ತು ಸ್ವಾತಂತ್ರö್ಯ ಹೋರಾಟಗಾರರ ಬಂಕಿಮ ಚಂದ್ರ ಚಟರ್ಜಿ ಸೇರಿದಂತೆ ಅನೇಕ ದೇಶ ಭಕ್ತರ ಜಯಘೋಷ ಹಾಕಿದರು.
ಎಬಿವಿಪಿ ಮುಖಂಡರಾದ ರಾಹುಲ ಜಾಧವ, ಹಣಮಂತ ಹಳ್ಳುರ, ಸಚಿನ ಧನಗೊಂಡ ಸತೀಶ ಹೊಟಗಿ, ಸೋಮನಾಥ ಕಟಗೇರಿ ನಿರ್ಮಲಾ, ಸ್ನೇಹಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

