ದೇವರಹಿಪ್ಪರಗಿ: ಸದೃಡ ಭಾರತ ನಿರ್ಮಾಣಕ್ಕಾಗಿ ನಾವೆಲ್ಲ ಯುವಕರು ಒಗ್ಗೂಡಿ ಮೋದಿಯವರನ್ನು ಇನ್ನೊಂದು ಬಾರಿ ಪ್ರಧಾನಿ ಮಾಡೋಣ ಎಂದು ನಮೋ ಬ್ರಿಗೇಡ್ ಅಧ್ಯಕ್ಷ ಹಾಗೂ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣಕ್ಕೆ ಶುಕ್ರವಾರ ಜನ ಗಣ ಮನ ಯಾತ್ರೆಯ ಅಂಗವಾಗಿ ಬೈಕ್ರ‍್ಯಾಲಿ ಮೂಲಕ ಆಗಮಿಸಿ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪವೃಷ್ಠಿ ನೆರವೇರಿಸಿ ಅವರು ಮಾತನಾಡಿದರು.
ಭಾರತಕ್ಕೆ ಅದ್ಭುತ ಗೌರವ ತಂದುಕೊಟ್ಟ ಪ್ರಧಾನಿ ಮೋದಿಯವರೆಗೆ ಇನ್ನೊಂದು ಬಾರಿ ಅವಕಾಶ ನೀಡುವ ನಿಟ್ಟಿನಲ್ಲಿ ಈ ಯಾತ್ರೆ ಆರಂಭಿಸಲಾಗಿದೆ. ಮೋದಿಯವರ ನೇತೃತ್ವದಲ್ಲಿ ಭಾರತ ಅತೀ ಹೆಚ್ಚು ಡಿಜಿಟಲ್ ವಹಿವಾಟು ಮಾಡುವ ರಾಷ್ಟçವಾಗಿ ಗುರುತಿಸಿಕೊಂಡಿದೆ. ದೇಶದ ೫೦ಕೋಟಿ ಜನ ಬ್ಯಾಂಕಿಗೆ ಬಂದಿರಲ್ಲಿಲ್ಲ. ಅದಕ್ಕಾಗಿ ಮೋದಿ ತಮ್ಮ ೬ ವರ್ಷಗಳ ಅಧಿಕಾರಾವಧಿಯಲ್ಲಿ ಜನಧನ ಖಾತೆಯ ಮೂಲಕ ಬ್ಯಾಂಕಿಗೆ ಬರುವಂತೆ ಮಾಡಿದರು. ಎಲ್ಲರಿಗೂ ಆಯುಷ್ಮಾನ ಕಾರ್ಡ ನೀಡಿ ಉಚಿತ ಚಿಕಿತ್ಸೆಗೆ ನೆರವು ನೀಡಿದರು.
ಜನೌಷಧಿ ಅಂಗಡಿಗಳ ಮೂಲಕ ಕಡಿಮೆ ದರದಲ್ಲಿ ಔಷಧಿ ದೊರೆಯುವಂತ ಅವಕಾಶ ಕಲ್ಪಿಸಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದರು. ಮಹಿಳೆಯರಿಗೆ ಗ್ಯಾಸ್ ಸಿಲೆಂಡರ್ ಅವಕಾಶ, ತರುಣರಿಗೆ ಸ್ಕಿಲ್ ಇಂಡಿಯಾ ಮೂಲಕ ಉದ್ಯೋಗದ ಅವಕಾಶ, ಮುದ್ರಾಯೋಜನೆಯಡಿ ಸಾಲದ ಸದಾವಕಾಶ ಒದಗಿಸಿದರು.
ಹಿಂದುಳಿದ ವರ್ಗಗಳ ದ್ರೌಪದಿ ಮುರ್ಮು, ರಾಮನಾಥ ಕೋವಿಂದ್‌ರಂತಹ ಪ್ರಮುಖರನ್ನು ರಾಷ್ಟçಪತಿ ಹುದ್ದೆಯಲ್ಲಿ ಅಲಂಕರಿಸಲು ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರರ್ ಜನ್ಮತಾಳಿದ, ಅಧ್ಯಯನ ಮಾಡಿದ ಪ್ರಮುಖ ಸ್ಥಳಗಳನ್ನು ಗುರುತಿಸಿ ಪಂಚತೀರ್ಥಗಳೆಂದೂ ಕರೆದರು. ಮುಖ್ಯವಾಗಿ ಅವುಗಳನ್ನು ಅಭಿವೃದ್ಧಿ ಪಡಿಸಿದರು ಎಂದು ಹೇಳುತ್ತಾ, ೨ ಸಾವಿರ ರೂ. ಉಚಿತ ಪ್ರಯಾಣ ಗಳಂತಹ ಆಮೀಷಗಳಿಗೆ ಒಳಗಾಗಿ ಮತ ನೀಡುವ ಜನರು ಮತ್ತೇ ಇಂತಹ ಆಮಿಷಗಳಿಗೆ ಒಳಗಾಗದೇ ಇರುವಂತೆ ನೋಡಿಕೊಂಡು ಇನ್ನೊಂದು ಬಾರಿ ಮೋದಿಯವರೆಗೆ ಅವಕಾಶ ನೀಡೊಣ ಎಂದರು.
ಚಿದಾನಂದ ಕುಂಬಾರ, ಪಿಂಟೂ ಭಾಸುತ್ಕರ್, ಕಲ್ಮೇಶ ಬುದ್ನಿ, ಗುರುರಾಜ್ ದೇಸಾಯಿ, ಶ್ರೀಶೈಲ ಯಂಭತ್ನಾಳ, ರಮೇಶ ಮಸಬಿನಾಳ, ಸೋಮು ಹಿರೇಮಠ, ಸೋಮು ದೇವೂರ, ಮಂಜುನಾಥ ಮಲ್ಲಿಕಾರ್ಜುನಮಠ, ಶಂಕರ ಜಮಾದಾರ, ರವಿ ಮಸಬಿನಾಳ, ಪವನ ವಂದಾಲ, ಸಿದ್ದು ಬೋರಗಿ, ಚೇತನ ಇಂಡಿ, ಪೀರು ಪೂಜಾರಿ, ಶಿವಪದ್ಮ ಕೂಟನೂರ, ಅಮರೇಶ ಮಶಾನವರ, ಪವನ ಹೊನವಾಡ, ವಿನಾಯಕ ಹಿರೇಮಠ ಸೇರಿದಂತೆ ಇತರರು ಇದ್ದರು.
Related Posts
Add A Comment