Author: editor.udayarashmi@gmail.com

ವಿಜಯಪುರ: ನಗರ ಮತಕ್ಷೇತ್ರದ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಅಭಿವೃದ್ಧಿ ಕಾರ್ಯದಿಂದ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೇಶಕ್ಕೆ ವಿಜಯಪುರ ನಗರ 6ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಕ್ಲೆöಮೆಟ್ ಟ್ರೇಂಡ್ಸ್, ರೆಸ್ಪೆರರ್ ಲಿವಿಂಗ್ ಸೈನ್ಸ್ ಹಾಗೂ ರೆಸ್ಪೆರರ್ ವರದಿ ಮಾಡಿ ಪ್ರಕಟಿಸಿದೆ.ನಗರ ಶಾಸಕರ ಅಭಿವೃದ್ಧಿ ಕಾಳಜಿಯಿಂದ ಧೂಳಾಪುರವಾಗಿದ್ದ ವಿಜಯಪುರ ನಗರ ಸದ್ಯ ಮಾದರಿ ನಗರವಾಗಿ ರೂಪುಗೊಂಡಿದೆ. ಅಸ್ತಮಾ ಮತ್ತಿತರೆ ಅನಾರೋಗ್ಯ ಸಮಸ್ಯೆ ಅನುಭವಿಸುತ್ತಿದ್ದ ಜನರಿಗೆ ಮುಕ್ತಿ ಸಿಕ್ಕಿದ್ದು. ಆರೋಗ್ಯಯುತವಾದ ವಾತಾವರಣ ನಿರ್ಮಾಣಗೊಂಡಿದೆ. ಇದರಿಂದಾಗಿ ದೇಶದಲ್ಲಿ ವಿಜಯಪುರ ನಗರ ಉತ್ತಮ ವಾತಾವರಣದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಾರ್ವಜನಿಕರು ನಗರ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ನಗರದಲ್ಲಿ ಗುಣಮಟ್ಟದ ರಸ್ತೆಗಳು ಅಭಿವೃದ್ಧಿಗೊಂಡಿರುವುದು, ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿರುವುದು, ಎಲ್ಲೆಂದರಲ್ಲಿದ್ದ ಗಲೀಜು ಮಾಯವಾಗಿರುವುದು, ವಿದ್ಯುತ್ ಅವಘಡ ಆಗದೆ ಇರುವುದು ಹೀಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದನ್ನು ತಪ್ಪಿಸಲು ಕ್ರಮ ಕೈಗೊಂಡಿದ್ದರಿಂದ ಉತ್ತಮ ವಾತಾವರಣ ನಗರದಲ್ಲಿ ಮೂಡಿದೆ. ಹೀಗಾಗಿ ಶುದ್ಧ ಗಾಳಿ ಬಿಸುವ ನಗರದ ಪಟ್ಟಿಯಲ್ಲಿ ದೇಶದಲ್ಲಿ…

Read More

ವಿಜಯಪುರ: ಮೂಲವ್ಯಾದಿಗೆ ಹೊಸ ಚಿಕಿತ್ಸೆಗಳು ಲಭ್ಯವಿದ್ದು ರೋಗಿಗಳನ್ನು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿ.ಎಲ್.ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಮತ್ತು ವಿಜಯಪುರ ಶಸ್ತ್ರಚಿಕಿತ್ಸಕರ ಸಂಘದ ವತಿಯಿಂದ ಇಂದು ಶನಿವಾರ ಆಯೋಜಿಸಲಾಗಿದ್ದ ಮೂಲವ್ಯಾದಿ ಮತ್ತು ಚಿಕಿತ್ಸೆ ಕ್ರಮದಲ್ಲಿ ಹೊಸತೇನು? ಕುರಿತ ಒಂದು ದಿನದ ಕಾರ್ಯಕ್ರಮವನ್ನು ಡಿಜಿಟಲ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಮೂಲವ್ಯಾದಿಗೆ ಈಗ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿವೆ. ಈ ಚಿಕಿತ್ಸೆಗಳನ್ನು ಪಡೆಯುವ ಮೂಲಕ ಕಡಿಮೆ ನೋವು ಮತ್ತು ಅತೀ ಕಡಿಮೆ ಸಮಯದಲ್ಲಿ ಗುಣಮುಖರಾಗಬಹುದಾಗಿದೆ ಎಂದು ಅವರು ಹೇಳಿದರು.ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಮೂಲವ್ಯಾದಿ ಸಾಮಾನ್ಯ ಕಾಯಿಲೆಯಾಗಿದ್ದು, ಸಾಕಷ್ಟು ಜನರಿಗೆ ಈ ಸಮಸ್ಯೆ ಇರುತ್ತದೆ. ಆದರೆ, ಸಂಕೋಚ ಸ್ವಭಾವದಿಂದ ವೈದ್ಯರನ್ನು ಕಾಣದೆ ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿಯೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಯನ್ನು…

Read More

ವಿಜಯಪುರ: 2023 ನೇ ವರ್ಷದ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ನಗರದ ಬಿ.ಎಲ್. ಡಿ. ಇ. ವಿಶ್ವವಿದ್ಯಾಲಯದ ಮೂರು ಜನ ಸಂಶೋಧಕ ರನ್ನು ಆಯ್ಕೆ ಮಾಡಲಾಗಿದೆ.ವಿಜಯಪುರದ ಬಿ. ಎಲ್. ಡಿ. ಇ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ಡಾ.  ಕುಸಾಲ ದಾಸ ಹಾಗೂ ಡಾ. ರಘು ಎ. ವಿ. ಅಇವರಿಗೆ ಔಷಧ ವಿಜ್ಞಾನ, ಶರೀರ ಶಾಸ್ತ್ರ ಹಾಗೂ ಪಾಲಿಮರ್ ಕ್ಷೇತ್ರದಲ್ಲಿನ ಸಂಶೋಧನೆಗಾಗಿ 2023 ನೇ ವರ್ಷದ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ. ಅಮೇರಿಕಾದ ಸ್ಟ್ಯಾನಫೋರ್ಡ್ ವಿಶ್ವವಿದ್ಯಾಲಯ ಮತ್ತು ನೆದರಲ್ಯಾಂಡಿನ ಎಲ್ಸವಿಯರ್ ಪ್ರಕಾಶನ ಸಂಸ್ಥೆ ಪ್ರತಿ ವರ್ಷ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ, ಶ್ರೇಷ್ಠ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುತ್ತದೆ.  ಡಾ. ರಾಘವೇಂದ್ರ ಕುಲಕರ್ಣಿ ಅವರು ಸತತ 3 ನೇ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.  ಅವರು ಪಾಲಿಮರ್ ಆಧಾರಿತ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೈದ ಭಾರತದ…

Read More

ವಿಜಯಪುರ: ವಿಶ್ವ ವಾಸ್ತುಶಿಲ್ಪ ದಿನದ ಅಂಗವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ ವತಿಯಿಂದ ಅವಸಾನದ ಅಂಚಿನಲ್ಲಿರುವ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಅವುಗಳ ನಿರ್ಮಾಣದ ಇತಿಹಾಸವನ್ನು ಬಿಂಬಿಸುವ ಚಿತ್ರಬಿಡಿಸುವ ಸ್ಪರ್ಧೆ ನಗರದ ಇಬ್ರಾಹಿಂ ರೋಜಾದಲ್ಲಿ ಇಂದು ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ ಅಧ್ಯಕ್ಷ ರಾಜೇಶ ಕತ್ತಿ, ನಮ್ಮೆಲ್ಲರ ಮಧ್ಯೆ ಇರುವ ಐತಿಹಾಸಿಕ ಸ್ಮಾರಕಗಳು ನಿಧಾನವಾಗಿ ಅಳವಿನ ಅಂಚಿನಲ್ಲಿ ಸಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಗೆ ಇವುಗಳ ಕುರುಹುಗಳು ಸಿಗುವುದಿಲ್ಲ. ಆದ್ದರಿಂದ ಈ ಸ್ಮಾರಕಗಳ ಐತಿಹಾಸಿಕ ಮಹತ್ವ ನಿರ್ಮಾಣದ ಹಿಂದಿರುವ ಪುರಾತನ ತಂತ್ರಜ್ಞಾನಗಳ ಮಹತ್ವದ ಕುರಿತು ಜನಜಾಗೃತಿ ಮೂಡಿಸಲು 1985ರಲ್ಲಿ ಅಂತರಾಷ್ಟ್ರೀಯ ಸಂಘಟನೆಗಳ ಒಕ್ಕೂಟ ವಾಸ್ತುಶಿಲ್ಪ ದಿನಾಚರಣೆಯನ್ನು ಪ್ರಾರಂಭಿಸಿತ್ತು ಎಂದು ತಿಳಿಸಿದರು.ಈ ಸ್ಪರ್ಧೆಯಲ್ಲಿ 65 ಕ್ಕೂ ಹೆಚ್ಚು ಎಂಜನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕ ಮನೀಶ ದೇವಗಿರಿಕರ, ಸತೀಶ ದೇಶಮುಖ ಸೇರಿದಂತೆ ಮತ್ತಿತರರು ಇದ್ದರು.

Read More

ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಆಯೋಜಿಸಿದ ಸಚಿವ ಎಂ.ಬಿ.ಪಾಟೀಲ ಜನ್ಮದಿನಾಚರಣೆ ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಅವರ ಆಶಯದಂತೆ ಅಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಬಿ.ಎಲ್.ಡಿ.ಇ ಆರೋಗ್ಯ ಯೋಜನೆಯಡಿ ಕುಟುಂಬದ ಆರೋಗ್ಯ ಕಾರ್ಡ್(Family Health Card) ವಿತರಿಸಲಾಗುತ್ತಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವತಿಯಿಂದ ಇಂದು ಶನಿವಾರ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಶ್ರೀ ಎಂ. ಬಿ. ಪಾಟೀಲ ಅವರ ಜನ್ಮದಿನಾಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಸವನಾಡಿನ ಬಡ ಮತ್ತು ಮಧ್ಯಮ ವರ್ಗದ ಜನರು ಚಿಕಿತ್ಸೆಗಾಗಿ ದೂರದ ಊರುಗಳಿಗೆ ಹೋಗವುದನ್ನು ತಪ್ಪಿಸಲು ಮತ್ತು ಅವರಿಗೆ ಸುಲಭದಲ್ಲಿ ಉತ್ತಮ ಓರೋಗ್ಯ ಸೇವೆ ಹಾಗೂ ಚಿಕಿತ್ಸೆ ಒದಗಿಸಲು ಎಂ. ಬಿ. ಪಾಟೀಲರು ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಎಲ್ಲ ಅತ್ಯಾಧುನಿಕ…

Read More

ನಿಡಗುಂದಿ: ಕ್ಯಾಂಟರ್ ಹಾಗೂ ಬೈಕ್ ಡಿಕ್ಕಿ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50 ರ ಮುದ್ದೇಬಿಹಾಳ ಕ್ರಾಸ್ ಬಳಿ ಶನಿವಾರ ಜರುಗಿದೆ.ಮೃತ ಯುವಕ ಚಡಚಣ ತಾಲ್ಲೂಕಿನ ನಂದರಗಿ ಗ್ರಾಮದ ವಿಕಾಸ ಮಲಕಪ್ಪ ಜಾಲವಾದಿ (2) ಎಂದು ತಿಳಿದುಬಂದಿದೆ.ಬೈಕ್ ಹಿಂಬದಿ ಸವಾರ ರವಿಕುಮಾರ ಪರಮಾನಂದ ಪಾಟೀಲ ತೀವ್ರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಸಿಂದಗಿ: ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕಪೋರ್ಸ ಸಮಿತಿ ಸಭೆಯನ್ನು ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತಾಲೂಕಾ ನೂಡಲ್ ಅಧಿಕಾರಿ ಪುಂಡಲೀಕ ಮಾನವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು.ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕಪೋರ್ಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೦೨೩-೨೪ನೆಯ ಸಾಲಿನಲ್ಲಿ ಸಿಂದಗಿ ತಾಲೂಕನ್ನು ತೀವ್ರ ಬರಪೀಡಿತ ತಾಲೂಕು ಅಂತಾ ಘೋಷಣೆಯಾದ ಹಿನ್ನೆಲೆಯಲ್ಲಿ ಪ್ರತಿವಾರ ಸಭೆ ನಡೆಸಬೇಕು ಎಂದು ತಿಳಿಸಿದರು.ತಾಲೂಕಿನಲ್ಲಿರುವ ಕುಡಿಯುವ ನೀರು, ಉತ್ತಮ ನೀರಿನ ಇಳುವರಿ ಹೊಂದಿರುವ ಖಾಸಗಿ ಕೊಳವೆ ಭಾವಿಗಳನ್ನು ಗುರುತಿಸುವದು. ಬೆಳೆ ಹಾನಿ, ಜಂಟಿ ಸಮೀಕ್ಷೆ ಕಾರ್ಯದ ಪ್ರಗತಿ ಬಗ್ಗೆ ಪರಶೀಲನೆ, ಅಗತ್ಯವಿದ್ದಲ್ಲಿ ಮೇವು ಬ್ಯಾಂಕ/ಗೋಶಾಲೆ ಸ್ಥಾಪಿಸುವುದು. ಜನರು ಗುಳೆ ಹೋಗದಂತೆ ತಡೆಯಲು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಪರಿಶೀಲನೆ ಮಾಡಲು ಸೂಚಿಸಿದರು. ಪ್ರತಿವಾರ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ಹಾಗೂ ಗ್ರಾಮಗಳಿಗೆ ತಾಲೂಕಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಕುರಿತು ಕ್ರಮ…

Read More

ಬರದ ಕರಿ ನೆರಳು | ನೀರಿಲ್ಲದೇ ಕಮರುತ್ತಿರುವ ಬೆಳೆ | ಬಾಡುತ್ತಿರುವ ಅನ್ನದಾತರ ಮುಖ ಆಲಮಟ್ಟಿ: ವಿಜಯಪುರ ಜಿಲ್ಲೆಯಾದ್ಯಂತ ಪ್ರಸ್ತುತ ಭೀಕರ ಬರದ ಕರಿ ನೆರಳಿನ ಕಾರ್ಮೋಡ ಆವರಿಸಿದ್ದು ಅನ್ನದಾತರು ತತ್ತರಗೊಂಡಿದ್ದಾರೆ. ಆಶಾಭಾವದಿಂದ ಭೂಮಿಯಲ್ಲಿ ಬಿತ್ತಿದ್ದ ಬೆಳೆಗಳು ನೀರಿಲ್ಲದೇ ಸೊರಗಿ ಕಮರಿ ಬೆಂಡಾಗುತ್ತಿವೆ. ಮೆಲ್ಲಗೆ ನಿತ್ರಾಣಾವಸ್ಥೆಯಲ್ಲಿ ನರಳಾಡಿ ಬಾಗಿ ಬಾಡುತ್ತಿವೆ. ಬೆಳೆಗಳ ಈ ದಯನೀಯ ಸ್ಥಿತಿಯನ್ನು ಕಣ್ಣಾರೆ ಕಂಡು ರೈತರ ಮೊಗಗಳು ಕಳಾಹೀನಗೊಂಡಿವೆ. ಕೂಡಲೇ ಸರ್ಕಾರ ಬೆಳೆಗಳ ನೆರವಿಗೆ ಧಾವಿಸಿ ಅನ್ನದಾತರನ್ನು ಉಳಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಒತ್ತಾಯಿಸಿದರು.      ರೈತರ ಜಮೀನುಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಆಲಮಟ್ಟಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಕೃಷ್ಣಾ ಭಾಗ್ಯ ಜಲನಿಗಮ ಮುಖ್ಯ ಅಭಿಯಂತರರ ಕಚೇರಿಯವರೆಗೂ ತಮಟೆ ವಾದ್ಯದೊಂದಿಗೆ ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.    ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆಗಳು ಸಮರ್ಪಕವಾಗಿ ಆಗದೇ ಇರುವದರಿಂದ ಭೀಕರ ಬರಗಾಲಕ್ಕೆ…

Read More

ವಿಜಯಪುರ: ವಿಜಯಪುರ ಜಿಲ್ಲೆಯ ೧೧೦/೧೧ ಕೆ.ವಿ ಮಟ್ಟಿಹಾಳ & ಮಲಘಾಣ ಟ್ಯಾಪ್ ಮಾರ್ಗದ ಕಾಮಗಾರಿಯು ಪ್ರಗತಿಯಲ್ಲಿದ್ದು, ಸದರಿ ಕಾಮಗಾರಿಗೆ ಸಂಭಂದಿಸಿದಂತೆ ದಿನಾಂಕ: ೦೮.೧೦.೨೦೨೩ ರಂದು ಬೆಳಿಗ್ಗೆ ೦೯.೦೦ ಗಂಟೆಯಿಂದ ಸಾಯಂಕಾಲ ೬.೦೦ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.ಆದ್ದರಿಂದ ಸದರಿ ದಿನದಂದು ೧೧೦/೧೧ ಕೆ.ವಿ ಮಟ್ಟಿಹಾಳ & ಮಲಘಾಣ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಬರುವ ಎಲ್ಲಾ ೧೧ಕೆ.ವಿ ವಿದ್ಯುತ್ ಮಾರ್ಗಗಳಿಗೆ, ೩೩ಕೆ.ವಿ ವಿಜಯಪೂರ ನಗರ ಕುಡಿಯುವ ನೀರಿನ ಸ್ಥಾವರಗಳಿಗೆ & ೩೩ಕೆ.ವಿ ಕಾರಜೋಳ ಎಲ್.ಆಯ್.ಎಸ್ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

Read More

ಬರ ಪರಿಸ್ಥಿತಿಯ ಅಧ್ಯಯನಕ್ಕೆ ವಿಜಯಪುರಕ್ಕೆ ಆಗಮಿಸಿದ ಕೇಂದ್ರ ತಂಡ | ಜಿಲ್ಲೆಯ ವಾಸ್ತವ ಸ್ಥಿತಿ ಮನವರಿಕೆ ವಿಜಯಪುರ: ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಆಗಮಿಸಿದ ಕೇಂದ್ರ ತಂಡಕ್ಕೆ ಜಿಲ್ಲೆಯ ಬರ ಪರಿಸ್ಥಿತಿಯ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಐ.ಎ.ಎಸ್ ಅಧಿಕಾರಿಗಳಾದ ಅಜಿತ್ ಕುಮಾರ್ ಸಾಹು ಅವರ ನೇತೃತ್ವದಲ್ಲಿ ಎಣ್ಣೆ ಬೀಜಗಳ ಅಭಿವೃದ್ದಿ ಇಲಾಖೆಯ ನಿರ್ದೇಶಕರಾದ ಡಾ. ಜೆ ಪೊನ್ನುಸ್ವಾಮಿ, ವೆಚ್ಚ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹೇಂದ್ರ ಚಂಡೇಲಿಯ, ನೀತಿ ಆಯೋಗದ ಸಂಶೋಧನಾಧಿಕಾರಿ ಶಿವಚರಣ್ ಮೀನಾ, ರಾಜ್ಯ ಕೃಷಿ ಆಯುಕ್ತರಾದ ವೈ.ಎಸ್ ಪಾಟೀಲ್‌ರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡ ಶುಕ್ರವಾರ ವಿಜಯಪುರ ಜಿಲ್ಲೆಯ ಬಬಲೇಶ್ವರ ಹಾಗೂ ಇಂಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ ತೀವ್ರ ಬರದಿಂದ ಹಾನಿಗೊಳಗಾದ ಕೃಷಿ ಹಾಗೂ ತೊಟಗಾರಿಕೆ ಬೆಳೆಗಳ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.ಕೇಂದ್ರ…

Read More