ವಿಜಯಪುರ: ನಗರ ಮತಕ್ಷೇತ್ರದ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಅಭಿವೃದ್ಧಿ ಕಾರ್ಯದಿಂದ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೇಶಕ್ಕೆ ವಿಜಯಪುರ ನಗರ 6ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಕ್ಲೆöಮೆಟ್ ಟ್ರೇಂಡ್ಸ್, ರೆಸ್ಪೆರರ್ ಲಿವಿಂಗ್ ಸೈನ್ಸ್ ಹಾಗೂ ರೆಸ್ಪೆರರ್ ವರದಿ ಮಾಡಿ ಪ್ರಕಟಿಸಿದೆ.
ನಗರ ಶಾಸಕರ ಅಭಿವೃದ್ಧಿ ಕಾಳಜಿಯಿಂದ ಧೂಳಾಪುರವಾಗಿದ್ದ ವಿಜಯಪುರ ನಗರ ಸದ್ಯ ಮಾದರಿ ನಗರವಾಗಿ ರೂಪುಗೊಂಡಿದೆ. ಅಸ್ತಮಾ ಮತ್ತಿತರೆ ಅನಾರೋಗ್ಯ ಸಮಸ್ಯೆ ಅನುಭವಿಸುತ್ತಿದ್ದ ಜನರಿಗೆ ಮುಕ್ತಿ ಸಿಕ್ಕಿದ್ದು. ಆರೋಗ್ಯಯುತವಾದ ವಾತಾವರಣ ನಿರ್ಮಾಣಗೊಂಡಿದೆ. ಇದರಿಂದಾಗಿ ದೇಶದಲ್ಲಿ ವಿಜಯಪುರ ನಗರ ಉತ್ತಮ ವಾತಾವರಣದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಾರ್ವಜನಿಕರು ನಗರ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಗರದಲ್ಲಿ ಗುಣಮಟ್ಟದ ರಸ್ತೆಗಳು ಅಭಿವೃದ್ಧಿಗೊಂಡಿರುವುದು, ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿರುವುದು, ಎಲ್ಲೆಂದರಲ್ಲಿದ್ದ ಗಲೀಜು ಮಾಯವಾಗಿರುವುದು, ವಿದ್ಯುತ್ ಅವಘಡ ಆಗದೆ ಇರುವುದು ಹೀಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದನ್ನು ತಪ್ಪಿಸಲು ಕ್ರಮ ಕೈಗೊಂಡಿದ್ದರಿಂದ ಉತ್ತಮ ವಾತಾವರಣ ನಗರದಲ್ಲಿ ಮೂಡಿದೆ. ಹೀಗಾಗಿ ಶುದ್ಧ ಗಾಳಿ ಬಿಸುವ ನಗರದ ಪಟ್ಟಿಯಲ್ಲಿ ದೇಶದಲ್ಲಿ ವಿಜಯಪುರ ನಗರ ೬ನೇ ಸ್ಥಾನಕ್ಕೆ ಬಂದಿದೆ. ಇದು ಎಲ್ಲರಿಗೂ ಸಂತೋಷದ ವಿಚಾರ ಎಂದು ಮಹಾನಗರ ಪಾಲಿಕೆ ಎಂಜಿನಿಯರ್ ವಿಭಾಗದವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

