ವಿಜಯಪುರ: ಮೂಲವ್ಯಾದಿಗೆ ಹೊಸ ಚಿಕಿತ್ಸೆಗಳು ಲಭ್ಯವಿದ್ದು ರೋಗಿಗಳನ್ನು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿ.ಎಲ್.ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.
ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಮತ್ತು ವಿಜಯಪುರ ಶಸ್ತ್ರಚಿಕಿತ್ಸಕರ ಸಂಘದ ವತಿಯಿಂದ ಇಂದು ಶನಿವಾರ ಆಯೋಜಿಸಲಾಗಿದ್ದ ಮೂಲವ್ಯಾದಿ ಮತ್ತು ಚಿಕಿತ್ಸೆ ಕ್ರಮದಲ್ಲಿ ಹೊಸತೇನು? ಕುರಿತ ಒಂದು ದಿನದ ಕಾರ್ಯಕ್ರಮವನ್ನು ಡಿಜಿಟಲ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮೂಲವ್ಯಾದಿಗೆ ಈಗ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿವೆ. ಈ ಚಿಕಿತ್ಸೆಗಳನ್ನು ಪಡೆಯುವ ಮೂಲಕ ಕಡಿಮೆ ನೋವು ಮತ್ತು ಅತೀ ಕಡಿಮೆ ಸಮಯದಲ್ಲಿ ಗುಣಮುಖರಾಗಬಹುದಾಗಿದೆ ಎಂದು ಅವರು ಹೇಳಿದರು.
ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಮೂಲವ್ಯಾದಿ ಸಾಮಾನ್ಯ ಕಾಯಿಲೆಯಾಗಿದ್ದು, ಸಾಕಷ್ಟು ಜನರಿಗೆ ಈ ಸಮಸ್ಯೆ ಇರುತ್ತದೆ. ಆದರೆ, ಸಂಕೋಚ ಸ್ವಭಾವದಿಂದ ವೈದ್ಯರನ್ನು ಕಾಣದೆ ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿಯೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ಬಿ. ಎಲ್. ಡಿ. ಇ ಆಸ್ಪತ್ರೆಯಲ್ಲಿ ಮೂಲವ್ಯಾದಿ ರೋಗಕ್ಕೆ ಎಲ್ಲ ತರಹದ ಆಧುನಿಕ ಶಸ್ತ್ರಚಿಕಿತ್ಸೆಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಧಾರವಾಡದ ಸಂಪನ್ಮೂಲ ವೈದ್ಯ ಡಾ. ಅಮೃತಬಸವ ಅವರು ಸ್ಟ್ರ್ಯಾಪ್ಲರ್ ಹೆಮೊರೈಡಕ್ಟವಿ, ಸಾಂಗಲಿಯ ಡಾ. ಮಧುರಾ ಕಿಲ್ಲೆದಾರ ಅವರು ಚಿವಟೆ ಹೇಮರೈಡಕ್ಟಮಿ, ವಿಜಯಪುರದ ಡಾ. ಜಸ್ಪಲಸಿಂಗ್ ತಾಹೇಲಿಯಾ ಅವರು ಬೈಪೋಲಾರ ಸೀಜರ ಹೇಮರೈಡಕ್ಟಮಿ, ಬಿ. ಎಲ್. ಡಿ. ಇ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ದೀಪಕ ಆರ್. ಚವ್ಹಾಣ ಅವರು ಲೇಜರ ಹೇಮರೈಡಕ್ಟಿಮಿ ಹಾಗೂ ಡಾ. ರಮಾಕಾಂತ ಬಳೂರಕರ ಅವರು ಮಿಲಗನ ಮಾರ್ಗನ ಹೆಮರೈಡೆಕ್ಟಮಿ ಶಸ್ತ್ರ ಚಿಕಿತ್ಸೆಗಳನ್ನು ಶಸ್ತ್ರಚಿಕಿತ್ಸಾ ಕೊಠಡಿಯಿಂದ ನೇರ ಪ್ರಸಾರದಲ್ಲಿ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಬಿ. ಎಲ್. ಡಿ. ಇ ಡೀಮ್ಡ್ ವಿವಿಯ ರಜಿಸ್ಟ್ರಾರ ಡಾ. ರಾಘವೇಂದ್ರ ವಿ. ಕುಲಕರ್ಣಿ, ವಿಜಯಪುರದ ಶಸ್ತ್ರಚಿಕಿತ್ಸಕರ ಸಂಘದ ಅಧ್ಯಕ್ಷ ಡಾ. ಅಶೋಕ ಜಾಧವ, ಹಿರಿಯ ಶಸ್ತ್ರಚಿಕಿತ್ಸಕ ಡಾ. ಬಿ. ಸಿ. ಉಪ್ಪಿನ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಘಟನಾ ಅಧ್ಯಕ್ಷ ಮತ್ತು ಕಾಲೇಜಿನ ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ವಿಕ್ರಂ ಸಿಂಧೂರಕರ ನಿರೂಪಿಸಿದರು. ಸಂಘಟನಾ ಉಪಾಧ್ಯಕ್ಷ ಮತ್ತು ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ತೇಜಸ್ವಿನಿ ವಲ್ಲಭ, ಡಾ. ಅಶೋಕ ತರಡಿ, ಡಾ. ಸಂಜೀವ ಮುಧೋಳ, ಡಾ. ಜಿಲಾನಿ ಅವಟಿ, ಡಾ. ಆನಂದ ಝಳಕಿ, ಡಾ. ಬಸವರಾಜ ನರಸಣಗಿ, ಡಾ. ವಿಜಯಾ ಪಾಟೀಲ, ಡಾ. ದಯಾನಂದ ಬಿರಾದಾರ ಸೇರಿದಂತೆ ವಿಜಯಪುರ ಮತ್ತು ನಾನಾ ಕಡೆಗಳಿಂದ ಸುಮಾರು 100ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸಕರು, ಸುಮಾರು 200 ಸ್ನಾತಕ ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೋಂಡಿದ್ದರು.
Related Posts
Add A Comment