ನಿಡಗುಂದಿ: ಕ್ಯಾಂಟರ್ ಹಾಗೂ ಬೈಕ್ ಡಿಕ್ಕಿ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50 ರ ಮುದ್ದೇಬಿಹಾಳ ಕ್ರಾಸ್ ಬಳಿ ಶನಿವಾರ ಜರುಗಿದೆ.
ಮೃತ ಯುವಕ ಚಡಚಣ ತಾಲ್ಲೂಕಿನ ನಂದರಗಿ ಗ್ರಾಮದ ವಿಕಾಸ ಮಲಕಪ್ಪ ಜಾಲವಾದಿ (2) ಎಂದು ತಿಳಿದುಬಂದಿದೆ.
ಬೈಕ್ ಹಿಂಬದಿ ಸವಾರ ರವಿಕುಮಾರ ಪರಮಾನಂದ ಪಾಟೀಲ ತೀವ್ರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Posts
Add A Comment