ವಿಜಯಪುರ: ವಿಜಯಪುರ ಜಿಲ್ಲೆಯ ೧೧೦/೧೧ ಕೆ.ವಿ ಮಟ್ಟಿಹಾಳ & ಮಲಘಾಣ ಟ್ಯಾಪ್ ಮಾರ್ಗದ ಕಾಮಗಾರಿಯು ಪ್ರಗತಿಯಲ್ಲಿದ್ದು, ಸದರಿ ಕಾಮಗಾರಿಗೆ ಸಂಭಂದಿಸಿದಂತೆ ದಿನಾಂಕ: ೦೮.೧೦.೨೦೨೩ ರಂದು ಬೆಳಿಗ್ಗೆ ೦೯.೦೦ ಗಂಟೆಯಿಂದ ಸಾಯಂಕಾಲ ೬.೦೦ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಆದ್ದರಿಂದ ಸದರಿ ದಿನದಂದು ೧೧೦/೧೧ ಕೆ.ವಿ ಮಟ್ಟಿಹಾಳ & ಮಲಘಾಣ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಬರುವ ಎಲ್ಲಾ ೧೧ಕೆ.ವಿ ವಿದ್ಯುತ್ ಮಾರ್ಗಗಳಿಗೆ, ೩೩ಕೆ.ವಿ ವಿಜಯಪೂರ ನಗರ ಕುಡಿಯುವ ನೀರಿನ ಸ್ಥಾವರಗಳಿಗೆ & ೩೩ಕೆ.ವಿ ಕಾರಜೋಳ ಎಲ್.ಆಯ್.ಎಸ್ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
Related Posts
Add A Comment