ವಿಜಯಪುರ: ವಿಶ್ವ ವಾಸ್ತುಶಿಲ್ಪ ದಿನದ ಅಂಗವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ ವತಿಯಿಂದ ಅವಸಾನದ ಅಂಚಿನಲ್ಲಿರುವ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಅವುಗಳ ನಿರ್ಮಾಣದ ಇತಿಹಾಸವನ್ನು ಬಿಂಬಿಸುವ ಚಿತ್ರಬಿಡಿಸುವ ಸ್ಪರ್ಧೆ ನಗರದ ಇಬ್ರಾಹಿಂ ರೋಜಾದಲ್ಲಿ ಇಂದು ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ ಅಧ್ಯಕ್ಷ ರಾಜೇಶ ಕತ್ತಿ, ನಮ್ಮೆಲ್ಲರ ಮಧ್ಯೆ ಇರುವ ಐತಿಹಾಸಿಕ ಸ್ಮಾರಕಗಳು ನಿಧಾನವಾಗಿ ಅಳವಿನ ಅಂಚಿನಲ್ಲಿ ಸಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಗೆ ಇವುಗಳ ಕುರುಹುಗಳು ಸಿಗುವುದಿಲ್ಲ. ಆದ್ದರಿಂದ ಈ ಸ್ಮಾರಕಗಳ ಐತಿಹಾಸಿಕ ಮಹತ್ವ ನಿರ್ಮಾಣದ ಹಿಂದಿರುವ ಪುರಾತನ ತಂತ್ರಜ್ಞಾನಗಳ ಮಹತ್ವದ ಕುರಿತು ಜನಜಾಗೃತಿ ಮೂಡಿಸಲು 1985ರಲ್ಲಿ ಅಂತರಾಷ್ಟ್ರೀಯ ಸಂಘಟನೆಗಳ ಒಕ್ಕೂಟ ವಾಸ್ತುಶಿಲ್ಪ ದಿನಾಚರಣೆಯನ್ನು ಪ್ರಾರಂಭಿಸಿತ್ತು ಎಂದು ತಿಳಿಸಿದರು.
ಈ ಸ್ಪರ್ಧೆಯಲ್ಲಿ 65 ಕ್ಕೂ ಹೆಚ್ಚು ಎಂಜನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕ ಮನೀಶ ದೇವಗಿರಿಕರ, ಸತೀಶ ದೇಶಮುಖ ಸೇರಿದಂತೆ ಮತ್ತಿತರರು ಇದ್ದರು.
ಪುರಾತನ ತಂತ್ರಜ್ಞಾನಗಳ ಮಹತ್ವದ ಕುರಿತು ಜನಜಾಗೃತಿ ಕಾರ್ಯಕ್ರಮ
Related Posts
Add A Comment