Author: editor.udayarashmi@gmail.com

ಮುದ್ದೇಬಿಹಾಳ: ಕೆಪಿಟಿಸಿಎಲ್ ನೌಕರರ ಪತ್ತಿನ ಸಹಕಾರ ಸಂಘಕ್ಕೆ ಅತೀ ಹೆಚ್ಚು ಮತಗಳನ್ನು ಪಡೆದು ೨ನೇ ನಿರ್ದೇಶಕರಾಗಿ ಆಯ್ಕೆಯಾದ ಎಚ್.ಎ.ನಾಯ್ಕೋಡಿ ಅವರನ್ನು ಸ್ನೇಹಿತರ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಸದಾಶಿವ ಮಠ ಅವರ ಹೋಟಲ್ ನಲ್ಲಿ ನಡೆದ ಈ ಸನ್ಮಾನ ಸಮಾರಂಭದಲ್ಲಿ ಪ್ರಮುಖರಾದ ಕಾಮರಾಜ ಬಿರಾದಾರ, ಸಂತೋಷ ಸಜ್ಜನ, ಸೋಮು ಮೇಟಿ, ಎಸ್.ಎಂ.ಹಾಲ್ಯಾಳ ಮಾತನಾಡಿ, ಅತ್ಯಂತ ಮೃದು ಸ್ವಭಾವದ ನಾಯ್ಕೋಡಿಯವರು ಇಂದು ಅತೀ ಹೆಚ್ಚು ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿರುವದು ಖುಷಿ ತಂದಿದೆ. ಈ ಮೊದಲು ಇವರು ಸಾಕಷ್ಟು ಜನತೆಯ ಮನಸ್ಸನ್ನು ಗೆದ್ದಿದ್ದಾರೆ. ಇವರಿಗೆ ಈ ಸ್ಥಾನ ಲಭಿಸಿದ್ದು ಮತ್ತಷ್ಟು ಜನಕ್ಕೆ ಸಹಾಯ ಮಾಡುವ ಅವಕಾಶ ಸಿಕ್ಕಿದೆ ಎಂದರೆ ತಪ್ಪಾಗಲಾರದು. ಇದರಿಂದ ಇವರ ಸೇವೆ ಸಾರ್ವಜನಿಕರಿಗೆ ಮಾತ್ರವಲ್ಲದೇ ಇಲಾಕಾ ನೌಕರರಿಗೆ ಖಂಡಿತ ಸಿಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.ಸನ್ಮಾನ ಸ್ವೀಕರಿಸಿದ ನಾಯ್ಕೋಡಿ ಮಾತನಾಡಿದರು.ಈ ವೇಳೆ ಬಳಗದವರಾದ ಸಂಗಣ್ಣ ಮೇಲಿನಮನಿ, ಅಶೋಕ ಚಟ್ಟೇರ, ಟಿ ಭಾಸ್ಕರ, ರವಿ ಅಮರಣ್ಣವರ, ಅಮರೇಶ ಗೂಳಿ,…

Read More

ಮುದ್ದೇಬಿಹಾಳ: ತಾಲೂಕಿನ ನೂತನ ತಹಶೀಲ್ದಾರ ವ, ತಾಲೂಕು ದಂಡಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಲರಾಮ ಕಟ್ಟಿಮನಿ ಅವರನ್ನು ಇಲಾಖೆಯ ಸಿಬ್ಬಂದಿ ಪುಸ್ತಕ ಕಾಣಿಕೆ ನೀಡುವ ಮೂಲಕ ಬರಮಾಡಿಕೊಂಡರು.

Read More

ಸಿಂದಗಿ: ಕಾಂಗ್ರೆಸ್ ಸರಕಾರವು ರಾಜ್ಯದ ಮತದಾರರಿಗೆ ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ನೀಡುವುದರ ಜೊತೆಗೆ ಅಭಿವೃದ್ದಿ ಕಾರ್ಯಗಳಿಗೂ ಸಹಕಾರ ನೀಡುತ್ತಿದೆ. ನಿಮ್ಮ ಮನೆಯ ಮುಂದಿನ ರಸ್ತೆಯನ್ನು ಸಾರ್ವಜನಿಕರು ಗುತ್ತಿಗೆದಾರರಿಗೆ ಸಹಕಾರ ನೀಡಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಸಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದಲ್ಲಿ ಸೋಮವಾರದಂದು ಜಿಲ್ಲಾ ನಗರಾಭಿವೃದ್ದಿ ಕೋಶ ವಿಜಯಪೂರ ಹಾಗೂ ಪುರಸಭೆಯ ಸಹಯೋಗದಲ್ಲಿ ಎಸ್.ಎಫ್.ಸಿ ವಿಶೇಷ ಯೋಜನೆಯ ಅಡಿಯಲ್ಲಿ ೨೦ ಲಕ್ಷ ರೂ. ಅನುದಾನದ ಶಹಾಪೂರ ಮುಖ್ಯ ರಸ್ತೆಯ ಬಡಿಗೇರ ಅಂಗಡಿಯಿಂದ ಮೊಗಲಾಯಿ ಲೇಔಟ್‌ವರೆಗೆ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರು ಯಾವುದೇ ರಿತೀಯ ಭಯ ಪಡುವ ಅವರ್ಶಯಕತೆ ಇಲ್ಲ. ಅಭಿವೃದ್ದಿ ಕಾರ್ಯಗಳು ಆರಂಭವಾಗಿವೆ. ಮುಂಬರುವ ದಿನಮಾನಗಳಲ್ಲಿ ಪಟ್ಟಣ, ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಅಭಿವೃದ್ದಿ ಪರ್ವ ಪ್ರಾರಂಭವಾಗಲಿದೆ ಎಂದರು.ಇದೇ ಸಂದರ್ಭದಲ್ಲಿ ರಾಜಶೇಖರ ಕೂಚಬಾಳ, ಪುರಸಭೆ ಸದಸ್ಯ ಶ್ರೀಶೈಲ ಬಿರಗೊಂಡ, ಗೌಸ ನಾಟೀಕಾರ, ಮುತ್ತು ಮುಂಡೊಡಗಿ, ರಮೇಶ ಹೂಗಾರ, ವೆಂಕಣ್ಣಗೌಡ…

Read More

ಸಿಂದಗಿ: ವಿಶ್ವ ಹಿಂದೂ ಪರಿಷತ್ತಿನ ೬೦ನೆಯ ವರ್ಷಾಚರಣೆ ನಿಮಿತ್ತ ದೇಶದಾದ್ಯಂತ ಶೌರ್ಯ ಜಾಗರಣ ರಥಯಾತ್ರೆ ನಡೆದಿದ್ದು, ಅ.೧೦ ರಂದು ಸಾಯಂಕಾಲ ೫:೦೦ ಗಂಟೆಗೆ ಸಿಂದಗಿ ನಗರದ ಬಸವೇಶ್ವರ ವೃತ್ತದಿಂದ ತೋಂಟದ ಸಿದ್ದಲಿಂಗ ಶ್ರೀಗಳ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಶೋಭಾ ಯಾತ್ರೆ ಜರುಗಲಿದೆ. ಕಾರಣ ಸನಾತನ ಧರ್ಮದ ಬಗ್ಗೆ ನೈಜ ಅರಿವನ್ನು ಮೂಡಿಸುವ ಸಲುವಾಗಿ ಆಯೋಜಿಸಿರುವ ಈ ರಾಷ್ಟ್ರವ್ಯಾಪಿ ರಥಯಾತ್ರೆಯಲ್ಲಿ ಪ್ರತಿಯೊಬ್ಬ ಹಿಂದೂ ಭಾಗವಹಿಸಬೇಕೆಂದು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೇಖರಗೌಡ ಹರನಾಳ ಕರೆ ನೀಡಿದರು.ಈ ಸಂದರ್ಭದಲ್ಲಿ ಹನುಮಗೌಡ, ಶೇಖರಗೌಡ ಪಾಟೀಲ್, ಮಂಡಲ ಅಧ್ಯಕ್ಷ ಈರಣ್ಣ ರಾವುರ, ಗುರು ತಳವಾರ, ಸಿದ್ದಲಿಂಗಯ್ಯ ಹಿರೇಮಠ, ಬಾಗೇಶ ಹೂಗಾರ, ಅಶೋಕ ನೆಗಿನಾಳ, ವಿನೋದ ಬಡಿಗೇರ, ರಾಜಶೇಖರ ಪೂಜಾರಿ, ಸಿದ್ದು ಪೂಜಾರಿ, ಶಿವಕುಮಾರ್ ಬಿರಾದಾರ, ಪ್ರಶಾಂತ ಬಗಲಿ, ಬೌರಮ್ಮ ಕರ್ಪೂರಮಠ ಸೇರಿದಂತೆ ಅನೇಕರಿದ್ದರು.

Read More

ವಿಜಯಪುರ: ಈ ವರ್ಷದ ಬಿಕರ ಬರಗಾಲದಿಂದ ತತ್ತರಿಸಿರುವ ಅನ್ನದಾತರ ಸಂಕಷ್ಟವನ್ನು ಮನಗಂಡ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಮೀಕ್ಷೆ ಮಾಡಿ ರಾಜ್ಯದಲ್ಲಿ ಹಲವಾರು ತಾಲೂಕುಗಳನ್ನು ಬರಗಾಲ ತಾಲ್ಲೂಕು ಎಂದು ಘೋಷಣೆ ಮಾಡಿದ್ದಾರೆಅದರಂತೆ ವಿಜಯಪುರ ಜಿಲ್ಲೆಯಲ್ಲಿರುವ 13 ತಾಲೂಕುಗಳ ಪೈಕಿ ತಿಕೋಟಾ ಹೋರತುಪಡಿಸಿ ಎಲ್ಲಾ ತಾಲೂಕುಗಳನ್ನು ಬರಪಿಡಿತ ಎಂದು ಘೋಷಣೆ ಮಾಡಿರುವ ಸರಕಾರದ ವಿರುದ್ಧ ತಿಕೋಟಾ ಬಂದ್ ಗೆ ಕರೆ ನೀಡಲಾಗಿದೆ.ನಾಳೆ ಬುಧವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ಎಲ್ಲಾ ರೈತರು ಹಾಗೂ ಎಲ್ಲಾ ಪ್ರಗತಿಪರ ಸಂಘಟನೆ ವತಿಯಿಂದ ತಿಕೋಟಾ ತಾಲ್ಲೂಕನ್ನು ಸಂಪೂರ್ಣ ಬಂದ್ ಮಾಡಿ ಬರಗಾಲ ಘೋಷಣೆ ಮಾಡಬೇಕು ಎಂದು ಆಗ್ರಹಿಸಲಾಗುವುದು ಎಂದು ತಾಲೂಕಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ಪತ್ರಿಕೆಗೆ ತಿಳಿಸಿದ್ದಾರೆ

Read More

ತನ್ನದೇ ಅತಿಹೆಚ್ಚು 70 ಪದಕಗಳ ದಾಖಲೆ ಮುರಿದು 107 ಗಳಿಸಿದ ಭಾರತ ತನ್ನದೇ ಅತಿಹೆಚ್ಚು 70 ಪದಕಗಳ ದಾಖಲೆ ಮುರಿದು 107 ಗಳಿಸಿದ ಭಾರತಆದರೆ ಚೀನಾ ಜಪಾನ್ ಕೊರಿಯಾ ದೇಶಗಳಿಗೆ ಹೋಲಿಸಿದಾಗ ಈಗಲೂ ಕಳಪೆ ಗುಣಮಟ್ಟ ಹೊಂದಿರುವುದು ಸಹ ಅಷ್ಟೇ ಸತ್ಯ..ಈಗ ಆ ಏರು ಮುಖ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಾಗಿರುವ ಜವಾಬ್ದಾರಿ ಸರ್ಕಾರ ಮತ್ತು ಮಕ್ಕಳ ಪೋಷಕರಿಗೆ ಇದೆ..ಎಲ್ಲಾ ಮಕ್ಕಳೂ ಕ್ರೀಡಾಸಕ್ತರಾಗಿರುವುದಿಲ್ಲ ಅಥವಾ ಕ್ರೀಡಾ ಪ್ರತಿಭೆ ಹೊಂದಿರುವುದಿಲ್ಲ. ಆದರೆ ಕೆಲವು ಕ್ರೀಡಾ ಪ್ರತಿಭೆಗಳನ್ನು ಕಣ್ಣಿಗೆ ಕಾಣುವಷ್ಟು ಮೇಲ್ನೋಟಕ್ಕೆ ಗುರುತಿಸಬಹುದು. ಅಂತಹ ಮಕ್ಕಳಿಗೆ ತಕ್ಷಣಕ್ಕೆ ಸಹಾಯ, ಪ್ರೋತ್ಸಾಹ, ಅವಕಾಶ, ವೇದಿಕೆ, ಭದ್ರತೆ, ಮಾರ್ಗದರ್ಶನ ಮತ್ತು ಆರ್ಥಿಕ ಸಹಾಯದ ಅವಶ್ಯಕತೆ ನೀಡಬೇಕಾಗುತ್ತದೆ. ನಮ್ಮ ದೇಶದಲ್ಲಿ ಆ ವಿಷಯದಲ್ಲಿ ಸಾಕಷ್ಟು ಕೊರತೆ ಕಾಣುತ್ತಿದೆ..ಭ್ರಷ್ಟಾಚಾರ, ಜಾತಿ, ರಾಜಕೀಯ, ಬಡವರ ನಿರ್ಲಕ್ಷ್ಯ ಮತ್ತು ಅಸೂಯೆ ಬಹುಮುಖ್ಯವಾಗಿ ಇಲ್ಲಿ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಅಧಿಕಾರ ಇರುವವರಲ್ಲಿ ವಿಶಾಲ ಮನೋಭಾವದ ಕೊರತೆ ಕಂಡುಬರುತ್ತದೆ. ಅದರ ನಿರ್ವಹಣೆ ಸರಿಯಾದ ರೀತಿಯಲ್ಲಿ…

Read More

ವಿಜಯಪುರ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಮಷೀನ್ ಲರ್ನಿಂಗ್ (ML) ಆ್ಯನ್ ಅಪ್ಲಿಕೇಶನ್ ಪ್ರಾಸ್ಪೆಕ್ಟಿವ್ ಇನ್ ಹೆಲ್ತಕೇರ್ ಆ್ಯಂಡ್ ಎಜುಕೇಶನ್ ಸೆಕ್ಟರ್ಸ್ ವಿಷಯ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಎಸ್. ಎಂ ಕಾಲೇಜ ಆಪ್ ಪಾರ್ಮಸಿ ಮತ್ತು ರಿಸರ್ಚ ಸೆಂಟರ್‌ನಲ್ಲಿ ಅಕ್ಟೋಬರ್ 11 ರಂದು ನಡೆಯಲಿದೆ.ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಈ ವಿಚಾರ ಸಂಕಿರಣವನ್ನು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜೈರಾಜ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಕಾಲೇಜಿನ ಪ್ರಾಚಾರ್ಯ ಡಾ. ಸಿ. ಸಿ. ಪಾಟೀಲ, ಸಂಯೋಜಕ ಡಾ. ಎಸ್. ಎಂ. ಬಿರಾದಾರ ಉಪಸ್ಥಿತರಿರಲಿದ್ದಾರೆ ಎಂದು ಆಯೋಜಕ ಡಾ. ಬಿ. ಎಸ್. ಹುಣಸಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಂತರ ನಡೆಯಲಿರುವ ಅಧಿವೇಶನದಲ್ಲಿ ಬೆಂಗಳೂರಿನ ನಾರ್ಗಾಜುನ ಕಾಲೇಜ ಆಪ್ ಎಂಜಿನೀಯರಿಂಗ್ ಆ್ಯಂಡ್ ಟೆಕ್ನಾಲಾಜಿ ಮಹಾವಿದ್ಯಾಲಯದ ಡಾ. ಅನಿಲ ಕನ್ನೂರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್…

Read More

ಆಲಮಟ್ಟಿ: ಸೆಲ್ಫಿ ಕಾಲಘಟ್ಟದಲ್ಲಿರುವ ಈಗಿನ ಯುವಕರು ವಿದೇಶದಲ್ಲಿಯೇ ವಾಸ್ತವ್ಯದ ಗತ್ತಿನಿಂದ ಹೊರಬಂದು, ಹೆತ್ತವರನ್ನು ಒಂಟಿ ಮಾಡದೇ, ಅವರನ್ನು ಜೀವಿತದ ಕೊನೆಯ ಹಂತದವರೆಗೂ ಕಾಪಾಡುವುದು ಪ್ರತಿ ಹಳೆ ವಿದ್ಯಾರ್ಥಿಯ ಕರ್ತವ್ಯವಾಗಿದೆ ಎಂದು ನಿವೃತ್ತ ಶಿಕ್ಷಕ ಎಸ್.ಐ. ಹರಣಶಿಕಾರಿ ಅಭಿಪ್ರಾಯಪಟ್ಟರು.ಆಲಮಟ್ಟಿಯ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ 1994 ನೇ ಸಾಲಿನಲ್ಲಿ ಇಲ್ಲಿನ ಎಂಪಿಎಸ್ ಶಾಲೆಯಲ್ಲಿ 7 ನೇ ವರ್ಗ, 1997 ರಲ್ಲಿ ಎಂಎಚ್ ಎಂ ಪ್ರೌಡಶಾಲೆಯಲ್ಲಿ 10 ನೇ ವರ್ಗ ಪಾಸಾದ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಆಲಮಟ್ಟಿಯಲ್ಲಿ ಡಾ ಬಿ.ಎಸ್. ಅಕ್ಕಿಯವರು ಕರುನಾಡ ಗಾಂಧಿ ಮಂಜಪ್ಪ ಹರ್ಡೇಕರ ಹಾಗೂ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಹೆಸರಲ್ಲಿ ಪ್ರೌಡಶಾಲೆ ಆರಂಭಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದರು. 1975 ರ ಕಾಲಘಟ್ಟದಲ್ಲಿ ಆಲಮಟ್ಟಿ ರೈಲು ನಿಲ್ದಾಣಕ್ಕೆ ಬೇರೆ ಗ್ರಾಮದ ಹೆಸರನ್ನಿಡುವ ಹುನ್ನಾರ ನಡೆದು ಅಂತಿಮಗೊಂಡಿತ್ತು. ಬಿ.ಎಸ್. ಅಕ್ಕಿಯವರು ರೂಪಿಸಿದ ಹೋರಾಟ ಹಾಗೂ ಸತತ ಪ್ರಯತ್ನದ ಫಲವಾಗಿ ನಿಲ್ದಾಣಕ್ಕೆ ಆಲಮಟ್ಟಿ ಹೆಸರೇ ಉಳಿಯುವಂತೆ ಮಾಡಿದರು…

Read More

ವಿಜಯಪುರ: ನಗರದ ಖಾದಿ ಗ್ರಾಮೋದ್ಯೋಗ ಆವರಣದಲ್ಲಿನ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಅವರ ಜನಸಂಪರ್ಕ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲರ ಜನ್ಮದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ಮಾತನಾಡಿ, ನೀರಾವರಿ ವಿಷಯದಲ್ಲಿ ಸಚಿವ ಡಾ. ಎಂ ಬಿ ಪಾಟೀಲರು ಸಾಧನೆ ಮಾಡಿ ಜಲಕ್ರಾಂತಿಯ ಮೂಲಕ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ಈಗ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವರಾದ ನಂತರ ಕಾಲಿಗೆ ಚಕ್ರ ಕಟ್ಡಿಕೊಂಡವರಂತೆ ಸಂಚರಿಸಿ ಬಂಡವಾಳ ಹೂಡಿಕೆಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅಧಿಕಾರದಲ್ಲಿದ್ದಾಗ ಇಡೀ ರಾಜ್ಯದ ಜನತೆ ಮೆಚ್ಚುವಂತ ಕೆಲಸ ಮಾಡಿದ್ದಾರೆ. ರಾಜ್ಯದ ತುಂಬ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ ಮುಂಬರುವ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದರು.ಮಹಾನಗರ ಪಾಲಿಕೆ ಸದಸ್ಯರಾದ ಅಬ್ದುಲ್ ರಜಾಕ ಹೋರ್ತಿ, ಕಾಂಗ್ರೆಸ್ ಮುಖಂಡರಾದ ಗಂಗಾಧರ ಸಂಬಣ್ಣಿ, ವೈಜನಾಥ ಕರ್ಪೂರಮಠ, ವಿದ್ಯಾರಾಣಿ ತುಂಗಳ ಮಹಾದೇವಿ ಗೋಕಾಕ ಮಾತನಾಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ…

Read More

ವಿಜಯಪುರ: ಆ್ಯಂಟಿ ಬಯೋಟಿಕ್ಸ್ ಗಳನ್ನು ಹಿತವಾಗಿ ಮತ್ತು ಮಿತವಾಗಿ ಬಳಸದಿದ್ದರೆ ಭವಿಷ್ಯದಲ್ಲಿ ಸೋಂಕುಗಳಿಗೆ ಆ್ಯಂಟಿ ಬಯೋಟಿಕ್ಸ್ ಗಳು ಲಭ್ಯವಾಗುವುದಿಲ್ಲ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.ಶುಕ್ರವಾರ ವಿವಿಯಲ್ಲಿ ನಡೆದ ಉತ್ತಮ ನಾಳೆಗಾಗಿ ಆ್ಯಂಟಿ ಬಯೋಟಿಕ್ಸ್ ಉಳಿಸಿ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಸೋಂಕುಗಳಿಗೆ ಆ್ಯಂಟಿ ಬಯೋಟಿಕ್ಸ್ ಅಗತ್ಯ. ಆದರೆ, ಅವುಗಳ ಸದ್ಬಳಕೆಯಾಗದಿದ್ದರೆ ಮುಂದೆ ಯಾವುದೇ ಸೋಂಕುಗಳಿಗೆ ಅವು ಲಭ್ಯ ಇರುವುದಿಲ್ಲ. ಈ ಬಗ್ಗೆ ಎಲ್ಲರೂ ಜಾಗೃತೆ ವಹಿಸಬೇಕು ಎಂದು ಡಾ. ವೈ. ಎಂ. ಜಯರಾಜ ಹೇಳಿದರು.ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ರೋಗಿಯ ಜೀವನ ಉಳಿಸಲು ಆ್ಯಂಟಿ ಬಯೋಟಿಕ್ಸ್ ಸದುಪಯೋಗಕ್ಕೆ ವೈದ್ಯರು ಮತ್ತು ಸೂಕ್ಷ್ಮ ಜೀವಾಣು ತಜ್ಞರು ಕೈ ಜೋಡಿಸಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.ಆ್ಯಂಟಿ ಬಯೋಟಿಕ್ಸ್ ದುರ್ಬಳಕೆ, ಮಿತಿ ಮೀರಿದ ಬಳಕೆಯಿಂದಾಗುವ ದುಷ್ಪರಿಣಾಮಗಳು ಹಾಗೂ ಸೂಪರ್ ಬಗ್ಸ್ ಎಂದು ಕರೆಯಲಾಗುವ ಮಲ್ಟಿ ಡ್ರಗ್- ನಿರೋಧಕ ಬ್ಯಾಕ್ಟೇರಿಯಾ ಸೃಷ್ಠಿಯ ಬಗ್ಗೆ…

Read More