ಸಿಂದಗಿ: ವಿಶ್ವ ಹಿಂದೂ ಪರಿಷತ್ತಿನ ೬೦ನೆಯ ವರ್ಷಾಚರಣೆ ನಿಮಿತ್ತ ದೇಶದಾದ್ಯಂತ ಶೌರ್ಯ ಜಾಗರಣ ರಥಯಾತ್ರೆ ನಡೆದಿದ್ದು, ಅ.೧೦ ರಂದು ಸಾಯಂಕಾಲ ೫:೦೦ ಗಂಟೆಗೆ ಸಿಂದಗಿ ನಗರದ ಬಸವೇಶ್ವರ ವೃತ್ತದಿಂದ ತೋಂಟದ ಸಿದ್ದಲಿಂಗ ಶ್ರೀಗಳ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಶೋಭಾ ಯಾತ್ರೆ ಜರುಗಲಿದೆ. ಕಾರಣ ಸನಾತನ ಧರ್ಮದ ಬಗ್ಗೆ ನೈಜ ಅರಿವನ್ನು ಮೂಡಿಸುವ ಸಲುವಾಗಿ ಆಯೋಜಿಸಿರುವ ಈ ರಾಷ್ಟ್ರವ್ಯಾಪಿ ರಥಯಾತ್ರೆಯಲ್ಲಿ ಪ್ರತಿಯೊಬ್ಬ ಹಿಂದೂ ಭಾಗವಹಿಸಬೇಕೆಂದು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೇಖರಗೌಡ ಹರನಾಳ ಕರೆ ನೀಡಿದರು.
ಈ ಸಂದರ್ಭದಲ್ಲಿ ಹನುಮಗೌಡ, ಶೇಖರಗೌಡ ಪಾಟೀಲ್, ಮಂಡಲ ಅಧ್ಯಕ್ಷ ಈರಣ್ಣ ರಾವುರ, ಗುರು ತಳವಾರ, ಸಿದ್ದಲಿಂಗಯ್ಯ ಹಿರೇಮಠ, ಬಾಗೇಶ ಹೂಗಾರ, ಅಶೋಕ ನೆಗಿನಾಳ, ವಿನೋದ ಬಡಿಗೇರ, ರಾಜಶೇಖರ ಪೂಜಾರಿ, ಸಿದ್ದು ಪೂಜಾರಿ, ಶಿವಕುಮಾರ್ ಬಿರಾದಾರ, ಪ್ರಶಾಂತ ಬಗಲಿ, ಬೌರಮ್ಮ ಕರ್ಪೂರಮಠ ಸೇರಿದಂತೆ ಅನೇಕರಿದ್ದರು.
Related Posts
Add A Comment