ವಿಜಯಪುರ: ಈ ವರ್ಷದ ಬಿಕರ ಬರಗಾಲದಿಂದ ತತ್ತರಿಸಿರುವ ಅನ್ನದಾತರ ಸಂಕಷ್ಟವನ್ನು ಮನಗಂಡ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಮೀಕ್ಷೆ ಮಾಡಿ ರಾಜ್ಯದಲ್ಲಿ ಹಲವಾರು ತಾಲೂಕುಗಳನ್ನು ಬರಗಾಲ ತಾಲ್ಲೂಕು ಎಂದು ಘೋಷಣೆ ಮಾಡಿದ್ದಾರೆ
ಅದರಂತೆ ವಿಜಯಪುರ ಜಿಲ್ಲೆಯಲ್ಲಿರುವ 13 ತಾಲೂಕುಗಳ ಪೈಕಿ ತಿಕೋಟಾ ಹೋರತುಪಡಿಸಿ ಎಲ್ಲಾ ತಾಲೂಕುಗಳನ್ನು ಬರಪಿಡಿತ ಎಂದು ಘೋಷಣೆ ಮಾಡಿರುವ ಸರಕಾರದ ವಿರುದ್ಧ ತಿಕೋಟಾ ಬಂದ್ ಗೆ ಕರೆ ನೀಡಲಾಗಿದೆ.
ನಾಳೆ ಬುಧವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ಎಲ್ಲಾ ರೈತರು ಹಾಗೂ ಎಲ್ಲಾ ಪ್ರಗತಿಪರ ಸಂಘಟನೆ ವತಿಯಿಂದ ತಿಕೋಟಾ ತಾಲ್ಲೂಕನ್ನು ಸಂಪೂರ್ಣ ಬಂದ್ ಮಾಡಿ ಬರಗಾಲ ಘೋಷಣೆ ಮಾಡಬೇಕು ಎಂದು ಆಗ್ರಹಿಸಲಾಗುವುದು ಎಂದು ತಾಲೂಕಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ ಪತ್ರಿಕೆಗೆ ತಿಳಿಸಿದ್ದಾರೆ
Related Posts
Add A Comment