ಮುದ್ದೇಬಿಹಾಳ: ಕೆಪಿಟಿಸಿಎಲ್ ನೌಕರರ ಪತ್ತಿನ ಸಹಕಾರ ಸಂಘಕ್ಕೆ ಅತೀ ಹೆಚ್ಚು ಮತಗಳನ್ನು ಪಡೆದು ೨ನೇ ನಿರ್ದೇಶಕರಾಗಿ ಆಯ್ಕೆಯಾದ ಎಚ್.ಎ.ನಾಯ್ಕೋಡಿ ಅವರನ್ನು ಸ್ನೇಹಿತರ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಸದಾಶಿವ ಮಠ ಅವರ ಹೋಟಲ್ ನಲ್ಲಿ ನಡೆದ ಈ ಸನ್ಮಾನ ಸಮಾರಂಭದಲ್ಲಿ ಪ್ರಮುಖರಾದ ಕಾಮರಾಜ ಬಿರಾದಾರ, ಸಂತೋಷ ಸಜ್ಜನ, ಸೋಮು ಮೇಟಿ, ಎಸ್.ಎಂ.ಹಾಲ್ಯಾಳ ಮಾತನಾಡಿ, ಅತ್ಯಂತ ಮೃದು ಸ್ವಭಾವದ ನಾಯ್ಕೋಡಿಯವರು ಇಂದು ಅತೀ ಹೆಚ್ಚು ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿರುವದು ಖುಷಿ ತಂದಿದೆ. ಈ ಮೊದಲು ಇವರು ಸಾಕಷ್ಟು ಜನತೆಯ ಮನಸ್ಸನ್ನು ಗೆದ್ದಿದ್ದಾರೆ. ಇವರಿಗೆ ಈ ಸ್ಥಾನ ಲಭಿಸಿದ್ದು ಮತ್ತಷ್ಟು ಜನಕ್ಕೆ ಸಹಾಯ ಮಾಡುವ ಅವಕಾಶ ಸಿಕ್ಕಿದೆ ಎಂದರೆ ತಪ್ಪಾಗಲಾರದು. ಇದರಿಂದ ಇವರ ಸೇವೆ ಸಾರ್ವಜನಿಕರಿಗೆ ಮಾತ್ರವಲ್ಲದೇ ಇಲಾಕಾ ನೌಕರರಿಗೆ ಖಂಡಿತ ಸಿಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ನಾಯ್ಕೋಡಿ ಮಾತನಾಡಿದರು.
ಈ ವೇಳೆ ಬಳಗದವರಾದ ಸಂಗಣ್ಣ ಮೇಲಿನಮನಿ, ಅಶೋಕ ಚಟ್ಟೇರ, ಟಿ ಭಾಸ್ಕರ, ರವಿ ಅಮರಣ್ಣವರ, ಅಮರೇಶ ಗೂಳಿ, ಮಹಾಂತೇಶ ಬೆವೂರ, ಬಬಲು ಹುಣಚಗಿ, ಶ್ರೀಶೈಲ ಪೂಜಾರಿ, ಹುಸೇನ ಮುಲ್ಲಾ, ಮಹೆಬೂಬ ಗೊಳಸಂಗಿ, ಸಾಹೇಬಲಾಲ ದೇಸಾಯಿ, ಸುರೇಶ ಸಿಂಧೆ, ರಂಜಾನ, ಬಾಬರ, ನಜೀರ ಸೇರಿದಂತೆ ಮತ್ತೀತರರು ಇದ್ದರು.
Related Posts
Add A Comment