ವಿಜಯಪುರ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಮಷೀನ್ ಲರ್ನಿಂಗ್ (ML) ಆ್ಯನ್ ಅಪ್ಲಿಕೇಶನ್ ಪ್ರಾಸ್ಪೆಕ್ಟಿವ್ ಇನ್ ಹೆಲ್ತಕೇರ್ ಆ್ಯಂಡ್ ಎಜುಕೇಶನ್ ಸೆಕ್ಟರ್ಸ್ ವಿಷಯ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಎಸ್. ಎಂ ಕಾಲೇಜ ಆಪ್ ಪಾರ್ಮಸಿ ಮತ್ತು ರಿಸರ್ಚ ಸೆಂಟರ್‌ನಲ್ಲಿ ಅಕ್ಟೋಬರ್ 11 ರಂದು ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಈ ವಿಚಾರ ಸಂಕಿರಣವನ್ನು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜೈರಾಜ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಕಾಲೇಜಿನ ಪ್ರಾಚಾರ್ಯ ಡಾ. ಸಿ. ಸಿ. ಪಾಟೀಲ, ಸಂಯೋಜಕ ಡಾ. ಎಸ್. ಎಂ. ಬಿರಾದಾರ ಉಪಸ್ಥಿತರಿರಲಿದ್ದಾರೆ ಎಂದು ಆಯೋಜಕ ಡಾ. ಬಿ. ಎಸ್. ಹುಣಸಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂತರ ನಡೆಯಲಿರುವ ಅಧಿವೇಶನದಲ್ಲಿ ಬೆಂಗಳೂರಿನ ನಾರ್ಗಾಜುನ ಕಾಲೇಜ ಆಪ್ ಎಂಜಿನೀಯರಿಂಗ್ ಆ್ಯಂಡ್ ಟೆಕ್ನಾಲಾಜಿ ಮಹಾವಿದ್ಯಾಲಯದ ಡಾ. ಅನಿಲ ಕನ್ನೂರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ಹಾಗೂ ಪುಣೆಯ ಡಾ. ಡಿ. ವೈ. ಪಾಟೀಲ ಇನಸ್ಟಿಟ್ಯೂಟ್ ಆಪ್ ಪಾರ್ಮಾಸ್ಯೂಟಿಕಲ್ ಸೈನ್ಸ್ ಮತ್ತು ರಿಸರ್ಚ ಸೆಂಟರ್‌ನ ಉಪಪ್ರಾಚಾರ್ಯ ಡಾ. ಸಂತೋಷ ಬುಜಬಲ್ ಅವರು ಅನ್‌ಲೈನ್ ಎ ಆ್ಯಂಡ್ ಎ ಮೆಥೊಡಾಲಜಿ ಇನ್ ರೀವೈಸ್ಡ್ ಆಕ್ರಿಡಿಟೆಶನ್ ಪ್ರೇಮವರ್ಕ್ ಕುರಿತು ಮಾತನಾಡಲಿದ್ದಾರೆ.
ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕರ್ನಾಟಕವಷ್ಟೇಲ್ಲ, ನೆರೆಯ ಮಹಾರಾಷ್ಟ್ರ, ಆಂದ್ರ ಪ್ರದೇಶ ಮತ್ತು ತೆಲಂಗಾಣಗಳಿಂದ 300ಕ್ಕೂ ಹೆಚ್ಚು ಔಷಧ ವಿಜ್ಞಾನ ತಜ್ಞರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೋಳಲಿದ್ದಾರೆ. ಎಂದು ಡಾ. ಬಿ. ಎಸ್. ಹುಣಸಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಎಸ್. ಎಂ ಪಾರ್ಮಸಿ ಕಾಲೇಜು ಮತ್ತು ನ್ಯಾಕ್ ಪ್ರಾಯೋಜಿತ ಈ ವಿಚಾರ ಸಂಕಿರಣದಲ್ಲಿ ಔಷಧ ವಿಜ್ಞಾನ ಕ್ಷೇತ್ರದ ಇತ್ತೀಚಿನ ಹೊಸ ಅನ್ವೇಷಣೆಗಳು, ಬದಲಾಗುತ್ತಿರುವ ಸಂಶೋಧನಾ ವಿಧಾನಗಳು ಹಾಗೂ ಇದರಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ ಕುರಿತು ನಾನಾ ಗೋಷ್ಠಿಗಳು ನಡೆಯಲಿವೆ ಎಂದು ಡಾ. ಬಿ. ಎಸ್. ಹುಣಸಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment