ಸಿಂದಗಿ: ಕಾಂಗ್ರೆಸ್ ಸರಕಾರವು ರಾಜ್ಯದ ಮತದಾರರಿಗೆ ಕೊಟ್ಟ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ನೀಡುವುದರ ಜೊತೆಗೆ ಅಭಿವೃದ್ದಿ ಕಾರ್ಯಗಳಿಗೂ ಸಹಕಾರ ನೀಡುತ್ತಿದೆ. ನಿಮ್ಮ ಮನೆಯ ಮುಂದಿನ ರಸ್ತೆಯನ್ನು ಸಾರ್ವಜನಿಕರು ಗುತ್ತಿಗೆದಾರರಿಗೆ ಸಹಕಾರ ನೀಡಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಸಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದಲ್ಲಿ ಸೋಮವಾರದಂದು ಜಿಲ್ಲಾ ನಗರಾಭಿವೃದ್ದಿ ಕೋಶ ವಿಜಯಪೂರ ಹಾಗೂ ಪುರಸಭೆಯ ಸಹಯೋಗದಲ್ಲಿ ಎಸ್.ಎಫ್.ಸಿ ವಿಶೇಷ ಯೋಜನೆಯ ಅಡಿಯಲ್ಲಿ ೨೦ ಲಕ್ಷ ರೂ. ಅನುದಾನದ ಶಹಾಪೂರ ಮುಖ್ಯ ರಸ್ತೆಯ ಬಡಿಗೇರ ಅಂಗಡಿಯಿಂದ ಮೊಗಲಾಯಿ ಲೇಔಟ್‌ವರೆಗೆ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರು ಯಾವುದೇ ರಿತೀಯ ಭಯ ಪಡುವ ಅವರ್ಶಯಕತೆ ಇಲ್ಲ. ಅಭಿವೃದ್ದಿ ಕಾರ್ಯಗಳು ಆರಂಭವಾಗಿವೆ. ಮುಂಬರುವ ದಿನಮಾನಗಳಲ್ಲಿ ಪಟ್ಟಣ, ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಅಭಿವೃದ್ದಿ ಪರ್ವ ಪ್ರಾರಂಭವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ರಾಜಶೇಖರ ಕೂಚಬಾಳ, ಪುರಸಭೆ ಸದಸ್ಯ ಶ್ರೀಶೈಲ ಬಿರಗೊಂಡ, ಗೌಸ ನಾಟೀಕಾರ, ಮುತ್ತು ಮುಂಡೊಡಗಿ, ರಮೇಶ ಹೂಗಾರ, ವೆಂಕಣ್ಣಗೌಡ , ಅಜರ ನಾಟೀಕಾರ, ನಬಿರಸೂಲ ಉಸ್ತಾದ, ಶಾಂತೂ ರಾಣಾಗೋಳ ಸೇರಿದಂತೆ ಇತರರು ಇದ್ದರು
ಸಿಂದಗಿ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವ ಆರಂಭ :ಶಾಸಕ ಮನಗೂಳಿ
Related Posts
Add A Comment