ವಿಜಯಪುರ: ನಗರದ ಖಾದಿ ಗ್ರಾಮೋದ್ಯೋಗ ಆವರಣದಲ್ಲಿನ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಅವರ ಜನಸಂಪರ್ಕ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲರ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್
ಮಾತನಾಡಿ, ನೀರಾವರಿ ವಿಷಯದಲ್ಲಿ ಸಚಿವ ಡಾ. ಎಂ ಬಿ ಪಾಟೀಲರು ಸಾಧನೆ ಮಾಡಿ ಜಲಕ್ರಾಂತಿಯ ಮೂಲಕ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ಈಗ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವರಾದ ನಂತರ ಕಾಲಿಗೆ ಚಕ್ರ ಕಟ್ಡಿಕೊಂಡವರಂತೆ ಸಂಚರಿಸಿ ಬಂಡವಾಳ ಹೂಡಿಕೆಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅಧಿಕಾರದಲ್ಲಿದ್ದಾಗ ಇಡೀ ರಾಜ್ಯದ ಜನತೆ ಮೆಚ್ಚುವಂತ ಕೆಲಸ ಮಾಡಿದ್ದಾರೆ. ರಾಜ್ಯದ ತುಂಬ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ ಮುಂಬರುವ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದರು.
ಮಹಾನಗರ ಪಾಲಿಕೆ ಸದಸ್ಯರಾದ ಅಬ್ದುಲ್ ರಜಾಕ ಹೋರ್ತಿ, ಕಾಂಗ್ರೆಸ್ ಮುಖಂಡರಾದ ಗಂಗಾಧರ ಸಂಬಣ್ಣಿ, ವೈಜನಾಥ ಕರ್ಪೂರಮಠ, ವಿದ್ಯಾರಾಣಿ ತುಂಗಳ ಮಹಾದೇವಿ ಗೋಕಾಕ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಾ.ಅರುಣಸಿಂಗ್ ರಜಪೂತ, ಇರಫಾನ ಶೇಖ, ಚಾಂದಸಾಬ ಗಡಲಗಾಂವ, ಪಾಲಿಕೆ ಸದಸ್ಯ ಆಶೀಫ ಶಾನೆವಾಲೆ, ಮಿಲಿಂದ್ ಚಿಂಚಲಕರ, ಪಾಲಿಕೆ ಸದಸ್ಯ ಅಲ್ತಾಫ ಇಟಗಿ, ಕೈಸರ್ ಹುಸೇನ್ ಇನಾಮದಾರ, ಪಾಲಿಕೆ ಸದಸ್ಯ ಅಪ್ಪು ಪೂಜಾರಿ, ಬಂದೇನವಾಜ ಬೀಳಗಿ, ಬ್ಕಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ ಬಕ್ಸಿ, ಕುಲದೀಪಸಿಂಗ್, ಶರಣಪ್ಪ ಯಕ್ಕೂಂಡಿ, ಪಾಲಿಕೆ ಸದಸ್ಯ ಸದ್ದಾಮ ನಾಡೇವಾಲೆ, ದಸ್ತಗೀರ ಸಾಲೋಟಗಿ, ಪೀರಾ ಜಮಖಂಡಿ, ಆನಂದ ಜಾಧವ, ವಸಂತ ಹೊನಮೊಡೆ, ಜಾಫರ್ ಸುತಾರ, ಫಯಾಜ ಕಲಾದಗಿ, ಮಹಾಂತೇಶ ಅವಟಿ, ರುಕ್ಮಿಣಿ ಚವ್ಹಾಣ, ದೀಪಾ ಕುಂಬಾರ, ಲಕ್ಷ್ಮಿ ಬಳ್ಳಾರಿ, ಅಬ್ದುಲ್ ರಜಾಕ ಪಟೇಲ, ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಮುಶ್ರೀಫ ಜನಸಂಪರ್ಕ ಕಚೇರಿಯಲ್ಲಿ ಸಚಿವ ಎಂ.ಬಿ.ಪಾಟೀಲ ಜನ್ಮದಿನಾಚರಣೆ
Related Posts
Add A Comment