Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಅ.೨೧ ರಂದು ಬೆಳಿಗ್ಗೆ ೮ ಗಂಟೆಗೆ ವಿಜಯಪುರ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ವಿಜಯಪುರ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಆಚರಿಸಲಾಗುವುದು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಹಾಗೂ ವಿಶೇಷ ಅತಿಥಿಗಳಾಗಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರು ಭಾಗವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಸೋನಾವಣೆ ಉಪಸ್ಥಿತರಿರುವರು
ವಿಜಯಪುರ: ಗ್ರಾಮೀಣ ಭಾಗದ ಜನರು ಗುಳೆ ಹೋಗುವುದನ್ನು ತಪ್ಪಿಸುವ ಮತ್ತು ಅವರಿಗೆ ಉದ್ಯೋಗ ಖಾತರಿ ನೀಡುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರಿಗೆ ಅಕುಶಲ ಕೆಲಸ ಒದಗಿಸುವುದರ ಜತೆಗೆ ಅವರ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳಿಗೆ ನೀಡುತ್ತಿದ್ದ ರೂ. ೨.೫೦ ಲಕ್ಷ ಮೊತ್ತವನ್ನು ೫ ಲಕ್ಷ ರೂ.ಗೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರ್ಮಿಕರಿಗೆ ಅಕುಶಲ ಕೆಲಸ ಒದಗಿಸುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿ ಹೊಂಡ, ಎರೆ ಹುಳು ತೊಟ್ಟಿ ಹಾಗೂ ಇತರೆ ನಿರ್ಮಾಣ ಒಳಗೊಂಡಂತೆ ಇತ್ಯಾದಿ ತಮ್ಮ ಆಸ್ತಿಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಮೂಲಕ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡಕಟ್ಟುಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ…
ವಿಜಯಪುರ: ಅಪರಿಚಿತ ಗಂಡು ಶವ ಪತ್ತೆಯಾಗಿರುವ ಕುರಿತು ಗೋಲಗುಮ್ಮಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಅಪರಿಚಿತ ಗಂಡು ಶವ ವಾರಸುದಾರರ ಪತ್ತೆಗೆ ಗೋಲಗುಮ್ಮಜ ಪೊಲೀಸ್ ಠಾಣೆಯ ಎಎಸ್‌ಐ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಅಪರಿಚಿತ ಮೃತ ವ್ಯಕ್ತಿಯ ವಯಸ್ಸು ಅಂದಾಜು ೩೫-೪೦ ಇದ್ದು, ೫.೬ ಅಡಿ ಎತ್ತರ, ಕೋಲು ಮುಖ, ಗೋಧಿಗೆಂಪು ಮೈಬಣ್ಣ, ನೆಟ್ಟನೆಯ ಮೂಗು, ಸಾಧಾರಣ ಮೈಕಟ್ಟು,ಕರಿ-ಬಿಳಿ ಕೂದಲು, ಚಾಕಲೇಟ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರಿದ್ದಲ್ಲಿ ಅಥವಾ ಸಾರ್ವಜನಿಕರಿಗೆ ಯಾವುದೇ ಮಾಹಿತಿ ದೊರೆತಲ್ಲಿ ನಗರದ ಗೋಲಗುಮ್ಮಜ ಪೊಲೀಸ್ ಠಾಣೆಯ ದೂ. ೦೮೩೫೨-೨೫೦೨೧೪ / ೯೪೮೦೮೦೪೨೫೧, ಗೋಳಗುಮ್ಮಜ ವೃತ್ತ ನಿರೀಕ್ಷಕರ ಕಚೇರಿ ದೂ: ೦೮೩೫೨-೨೫೦೨೫೨/೯೪೮೦೮೦೪೨೩೨ ಹಾಗೂ ವಿಜಯಪುರದ ಕಂಟ್ರೋಲ್ ರೂಂ ಸಂಖ್ಯೆ ೦೮೩೫೨-೨೫೦೭೫೧ ಮಾಹಿತಿ ನೀಡುವಂತೆ ಗೋಲಗುಮ್ಮಜ ಪೊಲೀಸ್ ಠಾಣೆ ಎ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಪರಿಶುದ್ಧ ಪರಿಸರ ಹೊಂದುವುದು ಇಂದಿನ ಅಗತ್ಯವಾಗಿದ್ದು, ಪರಿಶುದ್ಧ ಪರಿಸರವನ್ನು ಕಾಪಾಡುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಬಹು ಮುಖ್ಯವಾಗಿದೆ ಎಂದು ವಿಜಯಪುರ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ. ಐ.ಜೆ.ಮ್ಯಾಗೇರಿ ಅವರು ತಿಳಿಸಿದರು.ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಕಾರಾಗೃಹದ ಬಂದಿಗಳು ಹಾಗೂ ಸಿಬ್ಬಂದಿಗಳು ಜೊತೆಗೂಡಿ ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾರಾಗೃಹದ ಬಂದಿಗಳಿಗೆ ಸ್ವಚ್ಚತೆ ಮತು ಆರೋಗ್ಯದ ಬಗ್ಗೆ ತಿಳಿಸಿದರು. ಐಕ್ಯತೆ, ಒಗ್ಗಟ್ಟು, ಮಾನವ ಸಂಬಂಧಗಳ ಮೌಲ್ಯಗಳ ಬಗ್ಗೆ ಮಾತನಾಡಿದರು. ಸಹಕಾರ ಮತ್ತು ಒಗ್ಗಟ್ಟಿನ ತತ್ವದ ಮೂಲಕ ಎಂತಹ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಬಹುದು. ಸ್ವಚ್ಛ ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.ಈ ಶ್ರಮದಾನದಲ್ಲಿ ಕಾರಾಗೃಹದ ಅಧೀಕ್ಷಕ ಡಾ. ಐ.ಜೆ.ಮ್ಯಾಗೇರಿ, ಸಹಾಯಕ ಅಧೀಕ್ಷಕ ಹೆಚ್.ಜಿ.ಮಂಜುನಾಥ, ಸಹಾಯಕ ಆಡಳಿತಾಧಿಕಾರಿ ರವಿ ಲಮಾಣಿ, ಕಚೇರಿ ಅಧೀಕ್ಷಕ ಧಾವಜಿ ರಾಠೋಡ, ಜೈಲರ್‌ಗಳಾದ ಗೋಪಾಲಕೃಷ್ಣ ಕುಲಕರ್ಣಿ, ಐ.ಎಸ್.ಹಿರೇಮಠ ಹಾಗೂ ಕುಮಾರಿ ಚೇತನಾ ಎನ್.ಆರ್, ಶಿಕ್ಷಕರಾದ ಡಿ.ಎಸ್.ದೀಕ್ಷಿತ್ ಎಲ್ಲ ಸಹಾಯಕ ಜೈಲರ್‌ಗಳು ಆಸ್ಪತ್ರೆ ಸಿಬ್ಬಂದಿ, ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯಪುರ: ತಾಲೂಕು ಪಂಚಾಯತ, ನೆಹರು ಯುವ ಕೇಂದ್ರ, ಕೇಂದ್ರ ಸಂವಹನ ಇಲಾಖೆ, ಅಂಚೆ ಇಲಾಖೆ, ಭಾರತೀಯ ಸೇವಾದಳ, ಜಿಲ್ಲಾ ಎನ್.ಎಸ್.ಎಸ್ ಘಟಕ, ಸರಕಾರದ ವಿವಿಧ ಇಲಾಖೆಗಳು ಮತ್ತು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಅಮೃತ ಕಳಶ ಯಾತ್ರಾ ಕಾರ್ಯಕ್ರಮಕ್ಕೆ ವಿಜಯಪುರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ಹೊಂಗಯ್ಯ ಚಾಲನೆ ನೀಡಿ ಮಾತನಾಡಿದರು.ಮಣ್ಣು ನಮ್ಮ ದೈನಂದಿನ ಬದುಕಿಗೆ ಬೇಕಾಗುವ ಎಲ್ಲವನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿದೆ. ಸಕಲ ಜೀವಿಗಳಿಗೆ ಅನ್ನ ನೀಡುವುದು ಮಣ್ಣು. ಯೋಧರ ಗೌರವಾರ್ಥವಾಗಿ ಮಣ್ಣನ್ನು ಸಂಗ್ರಹಿಸಿ ಕಳುಹಿಸಲಾಗುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೊಂಗ್ರೆ ಮಾತನಾಡಿದರು.ಅಮೃತ ಕಳಶ ಯಾತ್ರೆವಿಜಯಪುರ ತಾಲೂಕು ಪಂಚಾಯತ ಕಚೇರಿಯಿಂದ ಆರಂಭವಾಗಿ ಅಂಬೇಡ್ಕರ್ ವೃತ್ತದವರೆಗೆ ಸಂಚರಿಸಿ, ನೆಹರು ಯುವ ಕೇಂದ್ರ ಕಚೇರಿಯಲ್ಲಿ ಸಮಾಪ್ತಿಗೊಂಡಿತು. ಕಳಶಗಳನ್ನು ತಾಲೂಕು ಪಂಚಾಯತ ಅಧಿಕಾರಿಗಳು ನೆಹರು ಯುವ ಕೇಂದ್ರದ ಚಾಂಪಿಯನ್‌ಗಳಿಗೆ ಹಸ್ತಾಂತರಿಸಿದರು. ಕೇಂದ್ರ ಸಂವಹನ ಇಲಾಖೆಯ ಸಿ.ಕೆ…
ದೇವರಹಿಪ್ಪರಗಿ: ತಾಲ್ಲೂಕಿನ ಡೋಣಿ ನದಿ ಪಕ್ಕದ ಜಮೀನುಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ನದಿ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ರೈತರು ಸರಕಾರವನ್ನು ಆಗ್ರಹಿಸಿದ್ದಾರೆ.ತಾಲ್ಲೂಕಿನ ಡೋಣಿ ತೀರದಲ್ಲಿ ಈ ಬಾರಿ ಮಳೆಯಿಲ್ಲದ ಕಾರಣ ಮುಂಗಾರಿನ ಬೆಳೆಗಳಾದ ತೊಗರಿ, ಹತ್ತಿ, ಮೆಣಸಿನ ಬೆಳೆ ನಾಟಿ ಮಾಡಿದ ರೈತರು ಈಗ ಮಳೆ ಇಲ್ಲದೆ ಪರದಾಡುವಂತಾಗಿದೆ. ಈಗ ಕಾಲುವೆ ಹಾಗೂ ನೀರಾವರಿ ಯೋಜನೆಗಳಿಂದ ಹೆಚ್ಚುವರಿ ನೀರು ದೋಣಿ ನದಿಗೆ ಸೇರುವ ಕಾರಣ ಉಪ್ಪಾಗಿದ್ದ ಡೋಣಿ ನದಿಯ ನೀರು ಸಿಹಿಗೊಂಡು ಬೆಳೆಗಳಿಗೆ ನೀರು ಹಾಯಿಸಲು ಯೋಗ್ಯವಾಗಿದೆ.ಡೋಣಿ ನದಿಯ ತೀರದ ಮಾರ್ಕಬ್ಬಿನಹಳ್ಳಿ, ಸಾತಿಹಾಳ, ಯಾಳವಾರ, ಕೊಂಡಗೂಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ನೀರು ಬಿಡಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಆಯಿಲ್ ಇಂಜೀನಗಳನ್ನು ಬಳಸಿ ನೀರು ಹರಿಸಲಾಗುತ್ತಿದೆ.ರೈತರು ಇಂಜಿನ್ ಪೈಪ್‌ಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ರತಿನಿತ್ಯ ೬ ರಿಂದ ೮ ಸಾವಿರ ಹಣ ವ್ಯಯಿಸುತ್ತಿದ್ದಾರೆ. ಕಳೆದ ವರ್ಷ ಬೆಳೆಗಳು ಹಾಳಾಗಿದ್ದು ವಿಮಾಹಣ…
ಇಂಡಿ: ಲಿಂಬೆ ನಾಡಿನ ಹಲವು ತಾಲೂಕು ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ ಭೂಬಾಲನ್ ಶುಕ್ರವಾರ ಅನಿರೀಕ್ಷಿತ ಬೇಟಿ ನೀಡಿ ಪರಿಶೀಲನೆ ಮಾಡಿದರು.ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟಿನಗೆ ಬೇಟಿ ನೀಡಿ ಆಹಾರದ ಗುಣಮಟ್ಟ ಮತ್ತು ಮೇಗಾ ಮಾರುಕಟ್ಟೆ ಕಾಮಗಾರಿ ಪರಿಶೀಲನೆ ಮಾಡಿದರು. ಹಾಗೂ ಪುರಸಭೆ ಕಾರ್ಯಾಲಯಕ್ಕೆ ಹಾಗೂ ತಾಲೂಕು ಆಡಳಿತ ಸೌಧಕ್ಕೆ ತೆರಳಿ, ಸಂಪೂರ್ಣ ಕಛೇರಿಯಲ್ಲಿ ನಡೆದಿರುವ ಕೆಲಸ ಕಾರ್ಯಗಳ ಬಗ್ಗೆ ಪರಿಶೀಲನೆ ಮಾಡಿದರು. ತದನಂತರ ತಹಶಿಲ್ದಾರ ಕಾರ್ಯಾಲಯದಲ್ಲಿ ಸಂಬಂಧಿಸಿದ ನೌಕರಸ್ಥರು ಮತ್ತು ಸಿಬ್ಬಂದಿ ವರ್ಗದವರ ಜೊತೆ ಅಲ್ಲಿರುವ ಸಮಸ್ಯೆ ಮತ್ತು ಇಲಾಖೆಯ ಪ್ರಗತಿಯ ಬೆಳವಣಿಗೆ ಬಗ್ಗೆ ಗಮನ ಹರಿಸಿದರು.ಇನ್ನು ಇದೇ ಸಂದರ್ಭದಲ್ಲಿ ತಾಲೂಕು ಶಾಂತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟೀಕಾರ ಹಾಗೂ ಕರವೇ ಅಧ್ಯಕ್ಷ ಶೀವುಲಕಗೊಂಡ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿರುವ ನೀರಿನ ಸಮಸ್ಯೆ ಹಾಗೂ ಡಿಲೆವರಿಗೆ ಬರುವ ಮಹಿಳೆಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅದಲ್ಲದೇ ರೇವಪ್ಪ ಮಡ್ಡಿ ರಸ್ತೆ, ಚರಂಡಿ ಇಲ್ಲದೇ ಗಬ್ಬೆದ್ದು ನಾರುತ್ತಿದೆ. ಅಲ್ಲಿ ಯಾರೂ…
ಮುದ್ದೇಬಿಹಾಳ: ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಿರೋಳ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಹಾಗೂ ತಾಲೂಕು ಮಾಹಿತಿ ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮ ಸಹಯೋಗದಲ್ಲಿ ಉದ್ಯೋಗ ಖಾತ್ರಿ ನಡೆಗೆ ಸುಸ್ಥಿರತೆಯೆಡೆಗೆ ಮನೆ-ಮನೆ ಜಾಥಾ ಅಭಿಯಾನವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.ಈ ವೇಳೆ ನರೇಗಾ ತಾಲೂಕು ಐಇಸಿ ಪರಮೆಶ ಹೊಸಮನಿ, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀದೇವಿ ಬಿರಾದಾರ, ಸದಸ್ಯರಾದ ದ್ಯಾವಣ್ಣ ಹುಣಶ್ಯಾಳ, ಲಕ್ಷ್ಮೀ ಕುರಿ, ತಾಂತ್ರಿಕ ಸಹಾಯಕ ಮಂಜುನಾಥ ತೇಲಿ, ಸಾ.ಪ. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಮೈತ್ರಾ ಬಾಯಿ ಹಾಗೂ ಗ್ರಾ.ಪಂ. ಸಿಬ್ಬಂದಿ ಇದ್ದರು.
ಮುದ್ದೇಬಿಹಾಳ: ಅ೨೩ ರಂದು ಜರುಗಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಜಾತ್ರೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸುವದಾಗಿ ಜಾತ್ರಾ ಕಮೀಟಿ ತಿಳಿಸಿದೆ.ಈ ಕುರಿತು ಪ್ರಮುಖರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಿ, ಪಟ್ಟಣದ ನೇತಾಜಿ ನಗರದಲ್ಲಿರುವ ದುರ್ಗಾದೇವಿ ದೇವಸ್ಥಾನದಿಂದ ಅಂದಾಜು ೧೦೧ ತಾಯಂದಿರಿಂದ ಕುಂಭದೊಂದಿಗೆ ಭವ್ಯ ಮೆರವಣಿಗೆ, ನಂತರ ಧರ್ಮಸಭೆ ಜರುಗುವದಾಗಿ ಮತ್ತು ಸಭೆಯಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವುದಾಗಿ ಪ್ರಕಟಣೆ ತಿಳಿಸಿದೆ.
ಮುದ್ದೇಬಿಹಾಳ: ಹುಬ್ಬಳ್ಳಿಯ ಡಾ.ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಟಾನ ಹಿರಿಯ ಸಾಹಿತಿ ಡಾ.ಸಂಗಮೇಶ ಹಂಡಗಿ ಸ್ಮರಣಾರ್ಥ ಕೊಡಮಾಡುವ ೨೦೨೩ ನೇ ಸಾಲಿನ ರಾಜ್ಯ ಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ತಾಲೂಕಿನ ಸರೂರ ಗ್ರಾಮದ ಮಕ್ಕಳ ಸಾಹಿತಿ ಸಿದ್ದನಗೌಡ ಬಿಜ್ಜೂರ ಇವರ ಆಧುನಿಕ ವಚನಗಳ ಸಂಕಲನ ಮೃದುವಚನ ಕೃತಿ ಆಯ್ಕೆಯಾಗಿದೆ.ಈ ಪ್ರಶಸ್ತಿಯು ೧೦೦೦೦/- ( ಹತ್ತು ಸಾವಿರ ರೂಪಾಯಿ) ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದ್ದು ಹುಬ್ಬಳ್ಳಿಯಲ್ಲಿ ನವೆಂಬರ ತಿಂಗಳ ಮೊದಲ ವಾರ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.ಮುದ್ದೇಬಿಹಾಳದ ಮಹಾಮನೆ ಬಳಗ, ಶರಣ ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು, ಸಾಹಿತಿಗಳ ಬಳಗದ ಹಿರಿಯ ಸಾಹಿತಿಗಳಾದ ಬಿ.ಎಂ.ಹಿರೇಮಠ, ಚಂದ್ರಶೇಖರ ಇಟಗಿ, ಶಿವಪುತ್ರ ಅಜಮನಿ, ಬಿ.ಪಿ.ಪಾಟೀಲ ಆಲೂರ, ಸಾಹೇಬಗೌಡ ಕರಡ್ಡಿ, ರುದ್ರೇಶ ಕಿತ್ತೂರ, ಐ.ಬಿ.ಹಿರೇಮಠ, ರೆಹಮಾನ ಬಿದರಕುಂದಿ, ಸರೂರಿನ ಗೆಳೆಯರ ಬಳಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎಲ್ಲ ಅಧಿಕಾರಿ ವರ್ಗ ಅಭಿನಂದಿಸಿದ್ದಾರೆ.
