ಇಂಡಿ: ಲಿಂಬೆ ನಾಡಿನ ಹಲವು ತಾಲೂಕು ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ ಭೂಬಾಲನ್ ಶುಕ್ರವಾರ ಅನಿರೀಕ್ಷಿತ ಬೇಟಿ ನೀಡಿ ಪರಿಶೀಲನೆ ಮಾಡಿದರು.
ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟಿನಗೆ ಬೇಟಿ ನೀಡಿ ಆಹಾರದ ಗುಣಮಟ್ಟ ಮತ್ತು ಮೇಗಾ ಮಾರುಕಟ್ಟೆ ಕಾಮಗಾರಿ ಪರಿಶೀಲನೆ ಮಾಡಿದರು. ಹಾಗೂ ಪುರಸಭೆ ಕಾರ್ಯಾಲಯಕ್ಕೆ ಹಾಗೂ ತಾಲೂಕು ಆಡಳಿತ ಸೌಧಕ್ಕೆ ತೆರಳಿ, ಸಂಪೂರ್ಣ ಕಛೇರಿಯಲ್ಲಿ ನಡೆದಿರುವ ಕೆಲಸ ಕಾರ್ಯಗಳ ಬಗ್ಗೆ ಪರಿಶೀಲನೆ ಮಾಡಿದರು. ತದನಂತರ ತಹಶಿಲ್ದಾರ ಕಾರ್ಯಾಲಯದಲ್ಲಿ ಸಂಬಂಧಿಸಿದ ನೌಕರಸ್ಥರು ಮತ್ತು ಸಿಬ್ಬಂದಿ ವರ್ಗದವರ ಜೊತೆ ಅಲ್ಲಿರುವ ಸಮಸ್ಯೆ ಮತ್ತು ಇಲಾಖೆಯ ಪ್ರಗತಿಯ ಬೆಳವಣಿಗೆ ಬಗ್ಗೆ ಗಮನ ಹರಿಸಿದರು.
ಇನ್ನು ಇದೇ ಸಂದರ್ಭದಲ್ಲಿ ತಾಲೂಕು ಶಾಂತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಯೂಬ್ ನಾಟೀಕಾರ ಹಾಗೂ ಕರವೇ ಅಧ್ಯಕ್ಷ ಶೀವುಲಕಗೊಂಡ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿರುವ ನೀರಿನ ಸಮಸ್ಯೆ ಹಾಗೂ ಡಿಲೆವರಿಗೆ ಬರುವ ಮಹಿಳೆಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅದಲ್ಲದೇ ರೇವಪ್ಪ ಮಡ್ಡಿ ರಸ್ತೆ, ಚರಂಡಿ ಇಲ್ಲದೇ ಗಬ್ಬೆದ್ದು ನಾರುತ್ತಿದೆ. ಅಲ್ಲಿ ಯಾರೂ ಕಾಳಜಿ ವಹಿಸದಂತಾಗಿದೆ. ಆ ರೇವಪ್ಪ ಮಡ್ಡಿ ಹೊಸದೊಂದು ವಾರ್ಡವಾಗಿ ಪರಿವರ್ತಿಸಿದ್ರೆ ಮುಂಬರುವ ಸದಸ್ಯರು ಕಾಳಜಿವಹಿಸಬಹುದು ಎಂದು ಹೇಳಿದರು.
ಮುಂಬರುವ ಡಿ ಲಿಮೆಟೆಷನ್ ಸಂದರ್ಭದಲ್ಲಿ ಸರಿಪಡಿಸುವ ಭರವಸೆ ಜಿಲ್ಲಾ ಅಧಿಕಾರಿಗಳು ನೀಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಬಿ ಎಸ್ ಕಡಕಭಾವಿ, ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ, ಶಿರಸ್ತೆದಾರ ಆರ್ ಮೂಗಿ, ಮುಜಗೊಂಡ ಇನ್ನೂ ಅನೇಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Related Posts
Add A Comment