ವಿಜಯಪುರ: ಅಪರಿಚಿತ ಗಂಡು ಶವ ಪತ್ತೆಯಾಗಿರುವ ಕುರಿತು ಗೋಲಗುಮ್ಮಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಅಪರಿಚಿತ ಗಂಡು ಶವ ವಾರಸುದಾರರ ಪತ್ತೆಗೆ ಗೋಲಗುಮ್ಮಜ ಪೊಲೀಸ್ ಠಾಣೆಯ ಎಎಸ್‌ಐ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅಪರಿಚಿತ ಮೃತ ವ್ಯಕ್ತಿಯ ವಯಸ್ಸು ಅಂದಾಜು ೩೫-೪೦ ಇದ್ದು, ೫.೬ ಅಡಿ ಎತ್ತರ, ಕೋಲು ಮುಖ, ಗೋಧಿಗೆಂಪು ಮೈಬಣ್ಣ, ನೆಟ್ಟನೆಯ ಮೂಗು, ಸಾಧಾರಣ ಮೈಕಟ್ಟು,ಕರಿ-ಬಿಳಿ ಕೂದಲು, ಚಾಕಲೇಟ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರಿದ್ದಲ್ಲಿ ಅಥವಾ ಸಾರ್ವಜನಿಕರಿಗೆ ಯಾವುದೇ ಮಾಹಿತಿ ದೊರೆತಲ್ಲಿ ನಗರದ ಗೋಲಗುಮ್ಮಜ ಪೊಲೀಸ್ ಠಾಣೆಯ ದೂ. ೦೮೩೫೨-೨೫೦೨೧೪ / ೯೪೮೦೮೦೪೨೫೧, ಗೋಳಗುಮ್ಮಜ ವೃತ್ತ ನಿರೀಕ್ಷಕರ ಕಚೇರಿ ದೂ: ೦೮೩೫೨-೨೫೦೨೫೨/೯೪೮೦೮೦೪೨೩೨ ಹಾಗೂ ವಿಜಯಪುರದ ಕಂಟ್ರೋಲ್ ರೂಂ ಸಂಖ್ಯೆ ೦೮೩೫೨-೨೫೦೭೫೧ ಮಾಹಿತಿ ನೀಡುವಂತೆ ಗೋಲಗುಮ್ಮಜ ಪೊಲೀಸ್ ಠಾಣೆ ಎ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment