ಮುದ್ದೇಬಿಹಾಳ: ಹುಬ್ಬಳ್ಳಿಯ ಡಾ.ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಟಾನ ಹಿರಿಯ ಸಾಹಿತಿ ಡಾ.ಸಂಗಮೇಶ ಹಂಡಗಿ ಸ್ಮರಣಾರ್ಥ ಕೊಡಮಾಡುವ ೨೦೨೩ ನೇ ಸಾಲಿನ ರಾಜ್ಯ ಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ತಾಲೂಕಿನ ಸರೂರ ಗ್ರಾಮದ ಮಕ್ಕಳ ಸಾಹಿತಿ ಸಿದ್ದನಗೌಡ ಬಿಜ್ಜೂರ ಇವರ ಆಧುನಿಕ ವಚನಗಳ ಸಂಕಲನ ಮೃದುವಚನ ಕೃತಿ ಆಯ್ಕೆಯಾಗಿದೆ.
ಈ ಪ್ರಶಸ್ತಿಯು ೧೦೦೦೦/- ( ಹತ್ತು ಸಾವಿರ ರೂಪಾಯಿ) ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದ್ದು ಹುಬ್ಬಳ್ಳಿಯಲ್ಲಿ ನವೆಂಬರ ತಿಂಗಳ ಮೊದಲ ವಾರ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಮುದ್ದೇಬಿಹಾಳದ ಮಹಾಮನೆ ಬಳಗ, ಶರಣ ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು, ಸಾಹಿತಿಗಳ ಬಳಗದ ಹಿರಿಯ ಸಾಹಿತಿಗಳಾದ ಬಿ.ಎಂ.ಹಿರೇಮಠ, ಚಂದ್ರಶೇಖರ ಇಟಗಿ, ಶಿವಪುತ್ರ ಅಜಮನಿ, ಬಿ.ಪಿ.ಪಾಟೀಲ ಆಲೂರ, ಸಾಹೇಬಗೌಡ ಕರಡ್ಡಿ, ರುದ್ರೇಶ ಕಿತ್ತೂರ, ಐ.ಬಿ.ಹಿರೇಮಠ, ರೆಹಮಾನ ಬಿದರಕುಂದಿ, ಸರೂರಿನ ಗೆಳೆಯರ ಬಳಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎಲ್ಲ ಅಧಿಕಾರಿ ವರ್ಗ ಅಭಿನಂದಿಸಿದ್ದಾರೆ.
ಮಕ್ಕಳ ಸಾಹಿತಿ ಸಿದ್ದನಗೌಡ ಬಿಜ್ಜೂರ ಗೆ ’ಸಂಗಮಸಿರಿ’ ಪ್ರಶಸ್ತಿ
Related Posts
Add A Comment