ದೇವರಹಿಪ್ಪರಗಿ: ತಾಲ್ಲೂಕಿನ ಡೋಣಿ ನದಿ ಪಕ್ಕದ ಜಮೀನುಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ನದಿ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ರೈತರು ಸರಕಾರವನ್ನು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಡೋಣಿ ತೀರದಲ್ಲಿ ಈ ಬಾರಿ ಮಳೆಯಿಲ್ಲದ ಕಾರಣ ಮುಂಗಾರಿನ ಬೆಳೆಗಳಾದ ತೊಗರಿ, ಹತ್ತಿ, ಮೆಣಸಿನ ಬೆಳೆ ನಾಟಿ ಮಾಡಿದ ರೈತರು ಈಗ ಮಳೆ ಇಲ್ಲದೆ ಪರದಾಡುವಂತಾಗಿದೆ. ಈಗ ಕಾಲುವೆ ಹಾಗೂ ನೀರಾವರಿ ಯೋಜನೆಗಳಿಂದ ಹೆಚ್ಚುವರಿ ನೀರು ದೋಣಿ ನದಿಗೆ ಸೇರುವ ಕಾರಣ ಉಪ್ಪಾಗಿದ್ದ ಡೋಣಿ ನದಿಯ ನೀರು ಸಿಹಿಗೊಂಡು ಬೆಳೆಗಳಿಗೆ ನೀರು ಹಾಯಿಸಲು ಯೋಗ್ಯವಾಗಿದೆ.
ಡೋಣಿ ನದಿಯ ತೀರದ ಮಾರ್ಕಬ್ಬಿನಹಳ್ಳಿ, ಸಾತಿಹಾಳ, ಯಾಳವಾರ, ಕೊಂಡಗೂಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ನೀರು ಬಿಡಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಆಯಿಲ್ ಇಂಜೀನಗಳನ್ನು ಬಳಸಿ ನೀರು ಹರಿಸಲಾಗುತ್ತಿದೆ.
ರೈತರು ಇಂಜಿನ್ ಪೈಪ್‌ಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪ್ರತಿನಿತ್ಯ ೬ ರಿಂದ ೮ ಸಾವಿರ ಹಣ ವ್ಯಯಿಸುತ್ತಿದ್ದಾರೆ. ಕಳೆದ ವರ್ಷ ಬೆಳೆಗಳು ಹಾಳಾಗಿದ್ದು ವಿಮಾಹಣ ಕಟ್ಟಿದರೂ, ಇಲಾಖೆಯವರು ಸರಿಯಾದ ಸಮೀಕ್ಷೆ ಮಾಡದ ಕಾರಣ ಯಾವುದೇ ವಿಮಾ ಹಣ ಬಂದಿರುವುದಿಲ್ಲ.
ಈ ವರ್ಷ ಭಿತ್ತಿದ ಬೆಳೆಗಳನ್ನಾದರೂ ರಕ್ಷಿಸಿಕೊಳ್ಳಲು ಡೋಣಿ ನದಿ ಅಕ್ಕಪಕ್ಕ ವಿದ್ಯುತ್ ಕಂಬಗಳ ವ್ಯವಸ್ಥೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಡೋಣಿನದಿ ಎಡಬಲ ಇರುವ ಜಮೀನುಗಳಿಗೆ ತೆರಳಲು ಬ್ರಿಜ್ ಕಮ್ ಬ್ಯಾರೇಜ್‌ನ್ನು ನಿರ್ಮಿಸಬೇಕೆಂದು ಕೊಂಡಗೂಳಿ ಗ್ರಾಮದ ರೈತರಾದ ರುದ್ರಗೌಡ ಬಸರಕೋಡ, ಮಲ್ಲನಗೌಡ ಪಾಟೀಲ, ಪ್ರಕಾಶ ಕೆಂಭಾವಿ, ಬಸನಗೌಡ ಪಾಟೀಲ, ಶರಣಗೌಡ ಪಾಟೀಲ, ಅಪ್ಪಾಸಾಹೇಬ ಬಸರಕೋಡ, ಶಿವಕುಮಾರ ಗೊಬ್ಬುರ, ವೀರೇಶ ಸಿಂದಗೇರಿ, ವೀರಗಂಟಿ ಕಲ್ಲೂರ, ಸಿದ್ದನಗೌಡ ಪಾಟೀಲ, ಶರಣಪ್ಪ ರೆಬೆನಾಳ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

