ವಿಜಯಪುರ: ಪರಿಶುದ್ಧ ಪರಿಸರ ಹೊಂದುವುದು ಇಂದಿನ ಅಗತ್ಯವಾಗಿದ್ದು, ಪರಿಶುದ್ಧ ಪರಿಸರವನ್ನು ಕಾಪಾಡುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಬಹು ಮುಖ್ಯವಾಗಿದೆ ಎಂದು ವಿಜಯಪುರ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ. ಐ.ಜೆ.ಮ್ಯಾಗೇರಿ ಅವರು ತಿಳಿಸಿದರು.
ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಕಾರಾಗೃಹದ ಬಂದಿಗಳು ಹಾಗೂ ಸಿಬ್ಬಂದಿಗಳು ಜೊತೆಗೂಡಿ ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾರಾಗೃಹದ ಬಂದಿಗಳಿಗೆ ಸ್ವಚ್ಚತೆ ಮತು ಆರೋಗ್ಯದ ಬಗ್ಗೆ ತಿಳಿಸಿದರು. ಐಕ್ಯತೆ, ಒಗ್ಗಟ್ಟು, ಮಾನವ ಸಂಬಂಧಗಳ ಮೌಲ್ಯಗಳ ಬಗ್ಗೆ ಮಾತನಾಡಿದರು. ಸಹಕಾರ ಮತ್ತು ಒಗ್ಗಟ್ಟಿನ ತತ್ವದ ಮೂಲಕ ಎಂತಹ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಬಹುದು. ಸ್ವಚ್ಛ ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಈ ಶ್ರಮದಾನದಲ್ಲಿ ಕಾರಾಗೃಹದ ಅಧೀಕ್ಷಕ ಡಾ. ಐ.ಜೆ.ಮ್ಯಾಗೇರಿ, ಸಹಾಯಕ ಅಧೀಕ್ಷಕ ಹೆಚ್.ಜಿ.ಮಂಜುನಾಥ, ಸಹಾಯಕ ಆಡಳಿತಾಧಿಕಾರಿ ರವಿ ಲಮಾಣಿ, ಕಚೇರಿ ಅಧೀಕ್ಷಕ ಧಾವಜಿ ರಾಠೋಡ, ಜೈಲರ್‌ಗಳಾದ ಗೋಪಾಲಕೃಷ್ಣ ಕುಲಕರ್ಣಿ, ಐ.ಎಸ್.ಹಿರೇಮಠ ಹಾಗೂ ಕುಮಾರಿ ಚೇತನಾ ಎನ್.ಆರ್, ಶಿಕ್ಷಕರಾದ ಡಿ.ಎಸ್.ದೀಕ್ಷಿತ್ ಎಲ್ಲ ಸಹಾಯಕ ಜೈಲರ್‌ಗಳು ಆಸ್ಪತ್ರೆ ಸಿಬ್ಬಂದಿ, ಕಛೇರಿ ಸಿಬ್ಬಂದಿ ಉಪಸ್ಥಿತರಿದ್ದರು.
Related Posts
Add A Comment