Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಆರಂಭವಾಗುತ್ತಿದ್ದು ಈಗಲೇ ರಸಗೊಬ್ಬರ ಲಭ್ಯವಿಲ್ಲವೆಂದು ಖಾಸಗಿ ಮಾರಾಟ ಮಳಿಗೆಗಳಲ್ಲಿ ನಾಮ ಫಲಕ ಹಾಕಿ ಸರ್ಕಾರ ನಿಗಧಿ ಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದ್ದು ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗೆ ಶುಕ್ರವಾರರಂದು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ಈ ಸಮಯದಲ್ಲಿ ಸಂಘಟನೆಯ ಜಿಲ್ಲಾ ಬಸವರಾಜ ಸಿಂಗನಹಳ್ಳಿ ಮಾತನಾಡಿ, ರೈತರು ಬಿತ್ತನೆಗಾಗಿ ಬೀಜ ಹಾಗೂ ರಸಗೊಬ್ಬರ ಖರಿದಿಸಲು ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ಖಾಸಗಿ ಮಾರಾಟ ಮಳಿಗೆಗಳಿಗೆ ತೆರಳುತ್ತಿದ್ದಾರೆ ರಸ ಗೊಬ್ಬರ ಸ್ಟಾಕ್ ಇಲ್ಲಾವೆಂಬ ನಾಮಫಲಕ ಏಷ್ಟು ಸರಿ ಎಂದು ಪ್ರಶ್ನೀಸಿದ ಅವರು, ಇದರಿಂದ ಬಡ ಮತ್ತು ಮಧ್ಯಮ ವರ್ಗದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದು ಕೃಷಿ ಚಟುವಟಿಕೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಕೂಡಲೇ ಸರ್ಕಾರವು ಎಚ್ಚೆತ್ತುಕೊಳ್ಳಬೇಕಾಗಿದೆ. ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳ ಮುಂದೆ ಕಡ್ಡಾಯವಾಗಿ ಬೀಜ ರಸಗೊಬ್ಬರಗಳ ದರಪಟ್ಟಿ ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಪುಟ್ಟ ಮೈಲೇಶ್ವರ ಗ್ರಾಮದಲ್ಲಿ ಹುಟ್ಟಿ ರಾಜ್ಯಮಟ್ಟದಲ್ಲಿ ಸಾಧನೆಯ ಹೆಜ್ಜೆಯನ್ನು ಇಡುತ್ತಾ ಸಾಗಿರುವ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಕಾರ್ಯ ಮೆಚ್ಚುವಂತಹದ್ದಾಗಿದೆ ಗ್ರಾಮೀಣ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಪರಿಚಯಿಸುತ್ತಾ ಸಾಗಿರುವದು ಹೆಮ್ಮೆಯ ಸಂಗತಿ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹೇಳಿದರು.ತಾಲೂಕಿನ ಮೈಲೇಶ್ವರ ಗ್ರಾಮದ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಗಂಗಾ ಅಶೋಕ ಕೋಳೂರ ಎಸ್‌ಎಸ್‌ಎಲ್‌ಸಿ ಪರಿಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅವರು ತಮ್ಮ ವತಿಯಿಂದ ಶುಕ್ರವಾರರಂದು ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಗಂಗಾ ಕೋಳೂರಗೆ ಸನ್ಮಾನಿಸಿ ಪ್ರೋತ್ಸಾಹಿಸಿ ಮಾತನಾಡುತ್ತಿದ್ದ ಅವರು, ಈ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿದ್ದು ಇದೀಗ ಗಂಗಾ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ನನ್ನ ದೇವರಹಿಪ್ಪರಗಿ ಮತಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನಾಗಿ ರೂಪಿಸುವಲ್ಲಿ ಮುಂದು ವರೆದ ಈ ಬ್ರಿಲಿಯಂಟ ಶಿಕ್ಷಣ…

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ತಾಳಿಕೋಟೆ ತಾಲೂಕ ಘಟಕದ ನೂತನ ಪದಾಧಿಕಾರಿಗಳಿಗೆ ತಾಲೂಕಿನ ಶಿಕ್ಷಕರ ಪರವಾಗಿ ಸರ್ಕಾರಿ ನೌಕರರ ಸಂಘದ ವತಿಯಿಂದ ಮತ್ತು ಶಿಕ್ಷಕರ ಸೋಸಾಯಿಟಿ ವತಿಯಿಂದ ಶುಕ್ರವಾರರಂದು ಸನ್ಮಾನಿಸಿ ಗೌರವಿಸಲಾಯಿತು.ಈ ಸಮಯದಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಸ್.ಜಿ. ಜಾಲವಾದಿ ಅವರು ಮಾತನಾಡಿ, ೨೦೨೬ ರಿಂದ ೨೦೩೧ರವರೆಗಿನ ೫ ವರ್ಷದ ಅವಧಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಳಿಕೋಟಿ ತಾಲೂಕ ಘಟಕದ ಅಧ್ಯಕ್ಷರಾಗಿ ಶಿಕ್ಷಕರಾದ ಭೀಮನಗೌಡ ವಜ್ಜಲ್, ಉಪಾಧ್ಯಕ್ಷರಾಗಿ ತಾರಾ ಲಮಾಣಿ, ಮಹಿಳಾ ಉಪಾಧ್ಯಕ್ಷರಾಗಿ ರೇಣುಕಾ ಬಸಪ್ಪ ಆಲೂರ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ಬಾಲಪ್ಪ ಬೀರಗೊಂಡ, ಕೋಶಾಧ್ಯಕ್ಷರಾಗಿ ರಮೇಶಕುಮಾರ ಹಿಪ್ಪರಗಿ, ಮಹಿಳಾ ಸಹ ಕಾರ್ಯದರ್ಶಿಯಾಗಿ ಸರಸ್ವತಿ ಬನ್ನೆಟ್ಟಿ, ಸಹ ಕಾರ್ಯದರ್ಶಿಗಳಾಗಿ ಅಲ್ತಾಫ್ ನಗಾರ್ಚಿ, ಎನ್ಕೆ ಸಿಪಾಯಿ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ನೀಲಮ್ಮ ಮೈಲೇಶ್ವರ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಶೈಲ ನಾಯ್ಕೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಅಭಿನಂದಿಸುವದಾಗಿ ತಿಳಿಸಿದರಲ್ಲದೇ ಸಂಘದ ಕಾರ್ಯಚಟುವಟಿಕೆಗಳ ಮೂಲಕ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವಂತಾಗಲಿದೆ…

Read More

ಉದಯರಶ್ಮಿ ದಿನಪತ್ರಿಕೆ ಡೋಣಿ ಕಡಕೋಳ(ದೇವರಹಿಪ್ಪರಗಿ): ಉಡಿ ತುಂಬುವಂಥ ಕಾರ್ಯಕ್ರಮದಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ ನಮ್ಮ ಸಂಪ್ರದಾಯದ ಪಾಲನೆ ಹಾಗೂ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಕಡಕೋಳ ಗದ್ದುಗೆಹಿರೇಮಠದ ಮಡಿವಾಳೇಶ್ವರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಡೋಣಿ ಕಡಕೋಳ ಗ್ರಾಮದಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಪುರಾಣದ ಅಂಗವಾಗಿ ಜರುಗಿದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.ಇಂದಿನ ಉಡಿ ತುಂಬುವ ಕಾರ್ಯದಲ್ಲಿ ಗ್ರಾಮದ ಮಾತೆಯರು ಭಾಗವಹಿಸಿ ಯಶಸ್ವಿಗೊಳಿಸಿದ್ದು ಅತ್ಯಂತ ಸಂತೋಷದ ವಿಷಯ ಎಂದರು.ವಿಜಯಪುರ ಅನುಗ್ರಹ ಆಸ್ಪತ್ರೆಯ ಡಾ.ಪ್ರಭುಗೌಡ ಬಿ.ಎಲ್(ಚಬನೂರ) ಮಾತನಾಡಿ, ಮಹಿಳೆ ಹಿಂದೆ, ಇಂದು, ಎಂದಿಗೂ ಮಮತೆ, ಮಮಕಾರದ ಮಾತೃ ಸ್ವರೂಪಿ. ಅಂತೆಯೇ ನಮ್ಮ ನೆಲದ ಸಂಪ್ರದಾಯ, ಸಂಸ್ಕೃತಿಗಳನ್ನು ಪಾಲಿಸಿ ಮುಂದುವರೆಸಿಕೊಂಡು ಹೋಗುವಲ್ಲಿ ಅವಳು ಸದಾ ಮುಂದು, ಅಂತೆಯೇ ಅವಳಿಗೆ ಪೂಜ್ಯನೀಯ ಸ್ಥಾನ ನೀಡಿದ್ದೇವೆ ಎಂದರು.ಪುರಾಣ ಪ್ರವಚನಕಾರ ದೇವರಹಿಪ್ಪರಗಿ ಜಡಿಮಠ ಜಡಿಸಿದ್ಧೇಶ್ವರ ಸ್ವಾಮೀಜಿ, ಹಿರೇಮಠದ ಮಹಾಲಿಂಗಯ್ಯ ಸ್ವಾಮೀಜಿ, ಮಹಾದೇವಿ ಬಸಣ್ಣವರ, ಶಶಿಕಲಾ ತೆಗ್ಗಿನಮನಿ, ಲಲಿತಾ ಖೈನೂರ, ರಾಜಶ್ರೀ ಹಿರೇಮಠ, ಜಯಶ್ರೀ ಯಲರಡ್ಡಿ, ಶಶಿಕಲಾ ಕಲ್ಲಣ್ಣವರ, ಜ್ಯೋತಿ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಪಡಗಾನೂರಲ್ಲಿ ಗ್ರಾಮದೇವಿ ದ್ಯಾಮವ್ವದೇವಿ ಜಾತ್ರೆ ಭಕ್ತಿಭಾವದೊಂದಿಗೆ ವಿಜೃಂಭಣೆಯಿಂದ ಜರುಗಿ ಸಂಪನ್ನಗೊಂಡಿತು.ಗ್ರಾಮದ ಪರಂಪರೆಯಂತೆ ಬುಧವಾರ ಬಸನಗೌಡ ರಾಮನಗೌಡ ಪೊಲೀಸ್ ಪಾಟೀಲ ಇವರ ನೇತೃತ್ವದಲ್ಲಿ ದೇವಿ ಅರ್ಚಕ ಶಿವಶಂಕರ ಪತ್ತಾರ ಕುಟುಂಬದವರು ಸಾಂಪ್ರದಾಯಿಕ ಉಡಿತುಂಬುವ ವಿಧಿವಿಧಾನ ನೆರವೇರಿಸಿದರು.ಐದು ದಿವಸಗಳ ಕಾಲ ಗ್ರಾಮದ ಚಾವಡಿಯಲ್ಲಿ ವಾಸ್ತವ್ಯ ಮಾಡಿದ ಗ್ರಾಮದೇವಿಯನ್ನು ಶಾಸ್ತ್ರೋಕ್ತ ರೀತಿಯಿಂದ ಪೂಜಿಸಲಾಯಿತು. ನಂತರ ಲಗಮಾದೇವಿ ಮತ್ತು ಕೆಂಚರಾಯ ದೇವರುಗಳನ್ನು ಬಂಡಿಯಲ್ಲಿ ಪ್ರತಿಷ್ಠಾಪಿಸಿ ಶಹನಾಯಿ, ಹಲಗೆ, ಡೊಳ್ಳು ವಾದ್ಯಗಳ ಸಹಿತ ವಿವಿಧ ಕಲಾ ತಂಡಗಳ ಕುಣಿತ ಪ್ರದರ್ಶನದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಗುರುನಾಥ ಮುರುಡಿ, ಆಕಾಶ ಕಬ್ಬಿನ, ಸಾಗರ ಭೋವಿ, ರಾಜು ಪಾಟೀಲ, ಸಾಯಬಣ್ಣ ಕೋಟರಗಸ್ತಿ, ಮಹೇಶ ಪಾಟೀಲ, ಆನಂದ ಯಳಮೇಲಿ, ರಾಜಶೇಖರ ಬೆನಕನಹಳ್ಳಿ, ಶಿವನಗೌಡ ಪಾಟೀಲ, ಬಾಲಶೇಖರ ಕಬ್ಬಿನ, ಶಂಕರಗೌಡ ಪಾಟೀಲ, ಸುಭಾಸ ಹೊಸಟ್ಟಿ, ಶ್ರೀಶೈಲ ಪತ್ತಾರ, ಶ್ರೀಶೈಲ ಟಕ್ಕಳಕಿಮಠ, ಷಣ್ಮುಖ ಹಡಪದ, ಮಹಾಂತೇಶ ವಡ್ಡೋಡಗಿ ಜಾತ್ರೆಯ ನೇತೃತ್ವ ವಹಿಸಿದ್ದರು.

Read More

ಶಾಸಕ ಅನಿಲ್ ಚಿಕ್ಕಮಾದು ಭರವಸೆ | ಪಿಂಚಣಿ ಮುಂದುವರೆಸಲು ಪತ್ರ ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ವಿಕಲಚೇತನರು ಸಮಾಜದಲ್ಲಿ ಸಮಾನವಾಗಿ ಪ್ರಗತಿ ಸಾಧಿಸಲು ಸರ್ಕಾರದ ಜನಪರ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ಪಟ್ಟಣದ ತಾಲೂಕು ಪಂಚಾಯತಿ ಕಛೇರಿಯಲ್ಲಿ ತಾಲೂಕು ಪಂಚಾಯತ್ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರ ಸಾಧನ/ಸಲಕರಣೆ ವಿತರಣೆ ಮತ್ತು ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಮಂಡಳಿ ವತಿಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.ಸರ್ಕಾರದ ಯೋಜನೆಗಳನ್ನು ಯಾರು ಕೂಡ ದುರ್ಬಳಕೆ ಮಾಡಿಕೊಳ್ಳಬಾರದು. ಲ್ಯಾಪ್ ಟಾಪ್ ಗಳನ್ನೂ ಸಿಬ್ಬಂದಿಗಳು ಸರ್ಕಾರಿ ಕಚೇರಿಯಲ್ಲೇ ಬಳಸಬೇಕು, ಕೆಲಸ ಮುಗಿದ ಬಳಿಕ ಆಫೀಸ್ ನಲ್ಲೇ ಇಟ್ಟು ಹೋಗಬೇಕು. ಮನೆಗೆ ತೆಗೆದುಕೊಂಡು ಹೋಗಿ ತಮ್ಮ ಮಕ್ಕಳಿಗೆ, ಸಂಬಂಧಿಕರಿಗೆ ಕೊಡುವ ಕೆಲಸ ಮಾಡಬಾರದು. ಇದನ್ನು ನಾನು ಸಹಿಸುವುದಿಲ್ಲ. ಈ ಬಗ್ಗೆ ನನ್ನ ಗಮನಕ್ಕೆ ಬಂದರೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವಶಕ್ತಿ ಕಾರ್ಯಕ್ರಮ ಮೇ 24 ರಂದು ರವಿವಾರ ತಿಕೋಟಾ ಪಟ್ಟಣದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ತಿಕೋಟಾ ಪಟ್ಟಣದ ಶ್ರೀ ಕನಕದಾಸ ಮಂಗಲ ಕಾರ್ಯಾಲಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಭಾಗವಹಿಸಲಿದ್ದು, ತಿಕೋಟಾ ಹಿರೇಮಠದ ಶ್ರೀ ಶಿವಬಸವ ಶಿವಾಚಾರ್ಯರು, ತೊರವಿಯ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದು ಗೌಡನವರ, ಈರನಗೌಡ ಬಿರಾದಾರ, ಮುಖಂಡರಾದ ವಿ. ಎಂ. ಪಾಟೀಲ, ಲೇಪು ಕೊಣ್ಣೂರ, ರಾಮರಾವ ದೇಸಾಯಿ, ಬಸಯ್ಯ ವಿಭೂತಿ, ಭಾಗೀರಥಿ ತೇಲಿ, ಜಕ್ಕಪ್ಪ ಯಡವೆ, ರಮೇಶ ಧರಣಾಕರ, ಮಮ್ಮುಲಾಲ ಮುಜವರ, ಜಾಕೀರ್ ಬಾಗವಾನ್, ಸಂತೋಷ ಕೋಲಾರ, ಸದಾಶಿವ ಪೂಜಾರಿ, ಭೀಮು ಹಂಗರಗಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.ಯುವಕರಲ್ಲಿ ನಾಯಕತ್ವ ಬೆಳೆಸುವುದು, ರಾಜಕೀಯ ಕ್ಷೇತ್ರಕ್ಕೆ ಆಕರ್ಷಿಸಿ ದೇಶದ ಅಭಿವೃದ್ಧಿಗೆ ಅವರದೇ ಆದ ಕೊಡುಗೆ ನೀಡಲು ಪ್ರೋತ್ಸಾಹಿಸುವುದು, ಸೇರಿದಂತೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಯುವಕರಲ್ಲಿ ಆಸಕ್ತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಯುವ ಮುಖಂಡರಾದ…

Read More

ಇಂದು (ಮೇ. ೨೪, ರವಿವಾರ) “ರಾಷ್ಟ್ರೀಯ ಸಹೋದರರ ದಿನ. ಅದರ ಪ್ರಯುಕ್ತ ಈ ವಿಶೇಷ ಲೇಖನ) ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಅಣ್ಣ.. ನೀ ಪ್ರಾಣವು ನನಗೆ, ನಿನ್ನೆದುರಲಿ ನಾನು, ನನ್ನೆದುರಲಿ ನೀನು, ಜೊತೆ ಜೊತೆಯಲಿ ಹೀಗೆ, ಇರುವೆ ಜೊತೆಗೆ, ಉಸಿರಾಗಿರು ಹೀಗೆ ಉಸಿರಾ ಜೊತೆಗೆ” ಎಂಬ ಹಾಡು ಅಣ್ಣ-ತಂಗಿಯರ ಜನುಮ ಜನುಮಗಳ ಅನುಬಂಧ, ಪ್ರೀತಿ, ಮಮತೆ ಮತ್ತು ಅಣ್ಣ-ತಂಗಿಯರ ನಡುವಿನ ಭಾವಬಂಧವನ್ನು ಅಭಿವ್ಯಕ್ತಗೊಳಿಸುತ್ತಾ, ಸಹೋದರತೆಯ ಅನ್ಯೋನ್ಯ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ತಪ್ಪು ಮಾಡಿಆಗ ಬೈದು ತಿದ್ದುವನು ನನ್ನಣ್ಣ, ದಾರಿ ಕಾಣದಾದಾಗ ಕೈ ಹಿಡಿದು ನಡೆಸುವನು ನನ್ನಣ್ಣ. ಕಷ್ಟದಲ್ಲಿದ್ದಾಗ ಧೈರ್ಯ ತುಂಬುವನು ತಂದೆಯ ಕಾಳಜಿ ನೀಡಿ ಜೋಪಾನ ಮಾಡುವನು. ಕೆಲವು ಸಲ ನಮಗೆ ತಂದೆ-ತಾಯಿಯ ಮುಂದೆ ಹೇಳಲಿಕ್ಕೆ ಆಗದ ಕೆಲವೊಂದು ವಿಷಯಗಳಿದ್ದಾಗ ಆ ಮಾತುಗಳನ್ನು ನಿಜವಾಗಿಯೂ ಸಹೋದರ ಕೇಳುವವನಾಗುತ್ತಾನೆ. ಏನೋ ಸಮಸ್ಯೆ ಬಂದಾಗ, ತಪ್ಪು ಮಾಡಿದಾಗ ಅಥವಾ ಅಂತರಾಳದಲ್ಲಿ ಉಂಟಾಗುವ ಬದಲಾವಣೆಗಳನ್ನು ನೇರವಾಗಿ ಹಿರಿಯರಿಗೆ ಹೇಳಲು ಸಾಧ್ಯವಿಲ್ಲ.ಹಿರಿಯಣ್ಣನ ಸ್ಥಾನದಲ್ಲಿ…

Read More

ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು ಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮುಸ್ಸಂಜೆಯ ಮಲ್ಲಿಗೆಯಂತಹ ವೇದಿಕಾಈ ಒಲವಿನೋಲೆ ಮಿನುಗುತಾರೆಯಾದ ನಿನಗೆ ಮುದ್ದಾಂ ಬರೆದದ್ದಲ್ಲ. ಇದೊಂದು ಪೋಣಿಸಿದ ಸಾಲುಗಳ ಭಾವತೀರದ ಪಿಸುಮಾತು.ಇದುವರೆಗೂ ಖಾಲಿಯಿದ್ದ ಎದೆಗೂಡಿಗೆ ಸದ್ದಿಲ್ಲದೆ ಬಂದು ನನ್ನನ್ನಾವರಿಸಿ, ನೀಳ ತೋಳುಗಳಿಂದ ಕೊರಳ ಬಳಸಿ, ಟ್ರಿಮ್ ಮಾಡಿದ ಗಡ್ಡದ ಕೆನ್ನೆಗೆ ಸವಿಮುತ್ತನ್ನಿಕ್ಕಿ, ಐಲವ್ಯೂ ಎಂದು ಕಿವಿಯಲುಸಿರಿ, ಚಿಕ್ಕದಾಗಿ ಕಿವಿ ಕಚ್ಚಿ., ನನ್ನೆದೆಗೆ ಒರಗಿ ನಾಚಿ ಮಾದಕ ಕಂಗಳಲಿ ಸಲ್ಲಾಪಕ್ಕೆ ಕರೆದೆ. ಇದಕ್ಕೆಲ್ಲ ಹಾರಿ ಹೋದ ಜೋಡಿಹಕ್ಕಿಗಳು ಮರಳಿ ಬಂದು ಗೂಡಲ್ಲಿ ನಡೆಸಿದ ಕಚ್ಚಿ ಕುಚ್ಚಿ ಪ್ರೇರಣೆಯಾಗಿತ್ತು ಅಂತ ನನಗೆ ಗೊತ್ತು. ರೆಪ್ಪೆ ಮುಚ್ಚಿ ಪ್ರೀತಿಯಾಟದ ಆಳಕ್ಕೆ ಇಳಿದಷ್ಟು ನಾಚಿಕೆ ಕಳಚಿ ಬಿದ್ದಿತ್ತು ಅಂದು.ಇಂದು ಒಂದೊಂದು ನೆನಪೂ ಒಂದೊಂದು ಸಂಭ್ರಮ. ಮನದ ಕಣಿವೆಯಲಿ ತುಡಿತ ಮಿಡಿತಗಳ ತುಂತುರು ಹನಿಗಳ ಉದುರಿಸುತಿದೆ. ಪ್ರೀತಿಯ ಜೇನು ಜಿನುಗುತಿದೆ. ಸವಿನೆನಪುಗಳ ಗಂಟು ಬಿಚ್ಚಿದೆ. ಮೆಲಕು ಹಾಕುವುದೊಂದೇ ಫುಲ್ ಟೈಂ ಕೆಲಸವಾಗಿದೆ. ಸೋನೆ ಹನಿಗಳು ಮತ್ತಷ್ಟು ನಿನ್ನನ್ನು ನೆನಪಿಸಿವೆ. ಮೂಡಣದಲ್ಲಿ…

Read More