ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುವಶಕ್ತಿ ಕಾರ್ಯಕ್ರಮ ಮೇ 24 ರಂದು ರವಿವಾರ ತಿಕೋಟಾ ಪಟ್ಟಣದಲ್ಲಿ ನಡೆಯಲಿದೆ.
ಸಂಜೆ 5 ಗಂಟೆಗೆ ತಿಕೋಟಾ ಪಟ್ಟಣದ ಶ್ರೀ ಕನಕದಾಸ ಮಂಗಲ ಕಾರ್ಯಾಲಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಭಾಗವಹಿಸಲಿದ್ದು, ತಿಕೋಟಾ ಹಿರೇಮಠದ ಶ್ರೀ ಶಿವಬಸವ ಶಿವಾಚಾರ್ಯರು, ತೊರವಿಯ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದು ಗೌಡನವರ, ಈರನಗೌಡ ಬಿರಾದಾರ, ಮುಖಂಡರಾದ ವಿ. ಎಂ. ಪಾಟೀಲ, ಲೇಪು ಕೊಣ್ಣೂರ, ರಾಮರಾವ ದೇಸಾಯಿ, ಬಸಯ್ಯ ವಿಭೂತಿ, ಭಾಗೀರಥಿ ತೇಲಿ, ಜಕ್ಕಪ್ಪ ಯಡವೆ, ರಮೇಶ ಧರಣಾಕರ, ಮಮ್ಮುಲಾಲ ಮುಜವರ, ಜಾಕೀರ್ ಬಾಗವಾನ್, ಸಂತೋಷ ಕೋಲಾರ, ಸದಾಶಿವ ಪೂಜಾರಿ, ಭೀಮು ಹಂಗರಗಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಯುವಕರಲ್ಲಿ ನಾಯಕತ್ವ ಬೆಳೆಸುವುದು, ರಾಜಕೀಯ ಕ್ಷೇತ್ರಕ್ಕೆ ಆಕರ್ಷಿಸಿ ದೇಶದ ಅಭಿವೃದ್ಧಿಗೆ ಅವರದೇ ಆದ ಕೊಡುಗೆ ನೀಡಲು ಪ್ರೋತ್ಸಾಹಿಸುವುದು, ಸೇರಿದಂತೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಯುವಕರಲ್ಲಿ ಆಸಕ್ತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಯುವ ಮುಖಂಡರಾದ ಬಾಬು ಹಂಚಿನಾಳ, ಪ್ರಕಾಶ ಜಲಗೇರಿ, ಸುರೇಶ ಕೊಣ್ಣೂರ, ಅರುಣ ಖೈರಾವ, ಸಚಿನ ಪಾಟೀಲ ಮುಂತಾದವಹ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಕಾರ್ಯಕ್ರಮದ ಉಸ್ತುವಾರಿ ಕಿರಣ ದಳವಾಯಿ(ದೇಸಾಯಿ) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
