ಉದಯರಶ್ಮಿ ದಿನಪತ್ರಿಕೆ
ಡೋಣಿ ಕಡಕೋಳ(ದೇವರಹಿಪ್ಪರಗಿ): ಉಡಿ ತುಂಬುವಂಥ ಕಾರ್ಯಕ್ರಮದಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ ನಮ್ಮ ಸಂಪ್ರದಾಯದ ಪಾಲನೆ ಹಾಗೂ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಕಡಕೋಳ ಗದ್ದುಗೆಹಿರೇಮಠದ ಮಡಿವಾಳೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಡೋಣಿ ಕಡಕೋಳ ಗ್ರಾಮದಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಪುರಾಣದ ಅಂಗವಾಗಿ ಜರುಗಿದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಇಂದಿನ ಉಡಿ ತುಂಬುವ ಕಾರ್ಯದಲ್ಲಿ ಗ್ರಾಮದ ಮಾತೆಯರು ಭಾಗವಹಿಸಿ ಯಶಸ್ವಿಗೊಳಿಸಿದ್ದು ಅತ್ಯಂತ ಸಂತೋಷದ ವಿಷಯ ಎಂದರು.
ವಿಜಯಪುರ ಅನುಗ್ರಹ ಆಸ್ಪತ್ರೆಯ ಡಾ.ಪ್ರಭುಗೌಡ ಬಿ.ಎಲ್(ಚಬನೂರ) ಮಾತನಾಡಿ, ಮಹಿಳೆ ಹಿಂದೆ, ಇಂದು, ಎಂದಿಗೂ ಮಮತೆ, ಮಮಕಾರದ ಮಾತೃ ಸ್ವರೂಪಿ. ಅಂತೆಯೇ ನಮ್ಮ ನೆಲದ ಸಂಪ್ರದಾಯ, ಸಂಸ್ಕೃತಿಗಳನ್ನು ಪಾಲಿಸಿ ಮುಂದುವರೆಸಿಕೊಂಡು ಹೋಗುವಲ್ಲಿ ಅವಳು ಸದಾ ಮುಂದು, ಅಂತೆಯೇ ಅವಳಿಗೆ ಪೂಜ್ಯನೀಯ ಸ್ಥಾನ ನೀಡಿದ್ದೇವೆ ಎಂದರು.
ಪುರಾಣ ಪ್ರವಚನಕಾರ ದೇವರಹಿಪ್ಪರಗಿ ಜಡಿಮಠ ಜಡಿಸಿದ್ಧೇಶ್ವರ ಸ್ವಾಮೀಜಿ, ಹಿರೇಮಠದ ಮಹಾಲಿಂಗಯ್ಯ ಸ್ವಾಮೀಜಿ, ಮಹಾದೇವಿ ಬಸಣ್ಣವರ, ಶಶಿಕಲಾ ತೆಗ್ಗಿನಮನಿ, ಲಲಿತಾ ಖೈನೂರ, ರಾಜಶ್ರೀ ಹಿರೇಮಠ, ಜಯಶ್ರೀ ಯಲರಡ್ಡಿ, ಶಶಿಕಲಾ ಕಲ್ಲಣ್ಣವರ, ಜ್ಯೋತಿ ಉಮರ್ಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.

