ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಪಡಗಾನೂರಲ್ಲಿ ಗ್ರಾಮದೇವಿ ದ್ಯಾಮವ್ವದೇವಿ ಜಾತ್ರೆ ಭಕ್ತಿಭಾವದೊಂದಿಗೆ ವಿಜೃಂಭಣೆಯಿಂದ ಜರುಗಿ ಸಂಪನ್ನಗೊಂಡಿತು.
ಗ್ರಾಮದ ಪರಂಪರೆಯಂತೆ ಬುಧವಾರ ಬಸನಗೌಡ ರಾಮನಗೌಡ ಪೊಲೀಸ್ ಪಾಟೀಲ ಇವರ ನೇತೃತ್ವದಲ್ಲಿ ದೇವಿ ಅರ್ಚಕ ಶಿವಶಂಕರ ಪತ್ತಾರ ಕುಟುಂಬದವರು ಸಾಂಪ್ರದಾಯಿಕ ಉಡಿತುಂಬುವ ವಿಧಿವಿಧಾನ ನೆರವೇರಿಸಿದರು.
ಐದು ದಿವಸಗಳ ಕಾಲ ಗ್ರಾಮದ ಚಾವಡಿಯಲ್ಲಿ ವಾಸ್ತವ್ಯ ಮಾಡಿದ ಗ್ರಾಮದೇವಿಯನ್ನು ಶಾಸ್ತ್ರೋಕ್ತ ರೀತಿಯಿಂದ ಪೂಜಿಸಲಾಯಿತು. ನಂತರ ಲಗಮಾದೇವಿ ಮತ್ತು ಕೆಂಚರಾಯ ದೇವರುಗಳನ್ನು ಬಂಡಿಯಲ್ಲಿ ಪ್ರತಿಷ್ಠಾಪಿಸಿ ಶಹನಾಯಿ, ಹಲಗೆ, ಡೊಳ್ಳು ವಾದ್ಯಗಳ ಸಹಿತ ವಿವಿಧ ಕಲಾ ತಂಡಗಳ ಕುಣಿತ ಪ್ರದರ್ಶನದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಗುರುನಾಥ ಮುರುಡಿ, ಆಕಾಶ ಕಬ್ಬಿನ, ಸಾಗರ ಭೋವಿ, ರಾಜು ಪಾಟೀಲ, ಸಾಯಬಣ್ಣ ಕೋಟರಗಸ್ತಿ, ಮಹೇಶ ಪಾಟೀಲ, ಆನಂದ ಯಳಮೇಲಿ, ರಾಜಶೇಖರ ಬೆನಕನಹಳ್ಳಿ, ಶಿವನಗೌಡ ಪಾಟೀಲ, ಬಾಲಶೇಖರ ಕಬ್ಬಿನ, ಶಂಕರಗೌಡ ಪಾಟೀಲ, ಸುಭಾಸ ಹೊಸಟ್ಟಿ, ಶ್ರೀಶೈಲ ಪತ್ತಾರ, ಶ್ರೀಶೈಲ ಟಕ್ಕಳಕಿಮಠ, ಷಣ್ಮುಖ ಹಡಪದ, ಮಹಾಂತೇಶ ವಡ್ಡೋಡಗಿ ಜಾತ್ರೆಯ ನೇತೃತ್ವ ವಹಿಸಿದ್ದರು.

