Subscribe to Updates
Get the latest creative news from FooBar about art, design and business.
Author: editor.udayarashmi@gmail.com
ನವದೆಹಲಿ: ಎಲ್ಲಾ ತರಗತಿಗಳ ಶಾಲಾ ಪಠ್ಯಪುಸ್ತಕಗಳಲ್ಲಿ ‘INDIA’ ಬದಲಿಗೆ ‘ಭಾರತ’ ಎಂದು ಸೇರಿಸಬೇಕು, ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ರಚಿಸಿರುವ ಸಮಾಜ ವಿಜ್ಞಾನಗಳ ಉನ್ನತ ಮಟ್ಟದ ಸಮಿತಿಗೆ ಶಿಫಾರಸು ಮಾಡಲಾಗಿದೆ.ಸಮಿತಿಯ ಅಧ್ಯಕ್ಷ ಸಿ ಐ ಐಸಾಕ್ ಪ್ರಕಾರ, ಸಮಿತಿಯು ಪಠ್ಯಪುಸ್ತಕಗಳಲ್ಲಿ ‘INDIA’ ಹೆಸರನ್ನು ‘ಭಾರತ್’ ಎಂದು ಬದಲಿಸಲು ಸಲಹೆ ನೀಡಿದೆ, ಪಠ್ಯಕ್ರಮದಲ್ಲಿ ‘ಪ್ರಾಚೀನ ಇತಿಹಾಸ’ ಬದಲಿಗೆ ‘ಶಾಸ್ತ್ರೀಯ ಇತಿಹಾಸ’ ಮತ್ತು ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್) ಅನ್ನು ಸೇರಿಸಲು ಹೇಳಲಾಗಿದೆ.ಆದಾಗ್ಯೂ, ಸಮಿತಿಯ ಶಿಫಾರಸುಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಎನ್‌ಸಿಇಆರ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.”ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಲ್ಲಿ ಭಾರತ್ ಎಂಬ ಹೆಸರನ್ನು ಬಳಸಬೇಕೆಂದು ಸಮಿತಿಯು ಸರ್ವಾನುಮತದಿಂದ ಶಿಫಾರಸು ಮಾಡಿದೆ. ಪಠ್ಯಪುಸ್ತಕಗಳಲ್ಲಿ ‘ಪ್ರಾಚೀನ ಇತಿಹಾಸ’ ಬದಲಿಗೆ ‘ಶಾಸ್ತ್ರೀಯ ಇತಿಹಾಸ’ವನ್ನು ಪರಿಚಯಿಸಲು ನಾವು ಶಿಫಾರಸು ಮಾಡಿದ್ದೇವೆ” ಎಂದು ಐಸಾಕ್ ಪಿಟಿಐಗೆ ತಿಳಿಸಿದರು.ಸಮಿತಿಯು ಪಠ್ಯಪುಸ್ತಕಗಳಲ್ಲಿ ವಿವಿಧ ಯುದ್ಧಗಳಲ್ಲಿನ ಹಿಂದೂ ರಾಜರ ಗೆಲುವನ್ನು ಹೈಲೈಟ್ ಮಾಡಲು…
ರೂ.17,901.73 ಕೋಟಿ ಬರ ಪರಿಹಾರಕ್ಕೆ ಮನವಿ | 216 ತಾಲ್ಲೂಕುಗಳಲ್ಲಿ ಬರಗಾಲ ಘೋಷಣೆ ಬೆಂಗಳೂರು: ಕರ್ನಾಟಕದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಗೆ ಸ್ಪಂದಿಸಿ, ಸಂತ್ರಸ್ತ ರೈತರ ಸಂಕಷ್ಟವನ್ನು ನಿವಾರಿಸಲು ರಾಜ್ಯ ಸರ್ಕಾರವು ರೂ.17,901.73 ಕೋಟಿಗಳ ಹೆಚ್ಚಿನ ಸಹಾಯಕ್ಕಾಗಿ ಕೇಂದ್ರ ಸರ್ಕಾರವನ್ನು ಕೋರಿದೆ.ಕರ್ನಾಟಕದ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನೊಳಗೊಂಡ ನಿಯೋಗವು ಕೇಂದ್ರ ಕೃಷಿ ಕಾರ್ಯದರ್ಶಿ ಮನೋಜ್ ಕುಮಾರ್ ಅಹುಜಾ ಮತ್ತು ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿತು. ಈ ಸಭೆಗಳಲ್ಲಿ, ಅವರು ರಾಜ್ಯದ ಭೀಕರ ಸ್ಥಿತಿಯ ಕುರಿತು ಸಮಗ್ರವಾದ ಮಾಹಿತಿ ನೀಡಿದರು.ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನು ನಡೆಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಒಟ್ಟು ₹17,901.73 ಕೋಟಿ ಬರ ಪರಿಹಾರಕ್ಕೆ ಮನವಿ ಮಾಡಿದ್ದೇವೆ, ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.ಸೆಪ್ಟೆಂಬರ್ 22 ರ…
ಯಡ್ರಾಮಿ: ನಾಡಿನ ಪ್ರತಿಷ್ಠಿತ ದಿನಪತ್ರಿಕೆಯಾದ ’ವಿಜಯವಾಣಿ’ ಕಲಬುರ್ಗಿ ಆವೃತ್ತಿಯ ಸ್ಥಾನಿಕ ಸಂಪಾದಕ ಬಾಬುರಾವ ಹಲಕರಟಿ, ಯಡ್ರಾಮಿ ಅವರನ್ನು ಸ್ಥಳಿಯ ಮುರುಗೇಂದ್ರ ಶಿವಯೋಗಿ ವಿರಕ್ತಮಠದಲ್ಲಿ ಶ್ರೀಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಸನ್ಮಾನಿಸಿದರು.ಮಂಗಳವಾರ ಸಂಜೆ ಬಾಬುರಾವ ಯಡ್ರಾಮಿ ದಂಪತಿಯನ್ನು ಶ್ರೀಮಠದ ವತಿಯಿಂದ ಗೌರವಿಸಿದ ಶ್ರೀಗಳು, ಬಾಬುರಾವ ಅವರು ತಮ್ಮ ಸರಳ – ಸಜ್ಜನಿಕೆಯ ವ್ಯಕ್ತಿತ್ವ ಮತ್ತು ಪ್ರತಿಭೆಯಿಂದ ನಾಡಿನ ನಂ.೧ ಪತ್ರಿಕೆಯ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ಅವರ ಹುಟ್ಟೂರು ಯಡ್ರಾಮಿಗೆ ದೊಡ್ಡ ಗೌರವ ತಂದಿದೆ. ತಮ್ಮ ಸೇವಾವಧಿಯಲ್ಲಿ ಬಾಬುರಾವ ಅವರು ಯಡ್ರಾಮಿ ತಾಲೂಕಿನ ಕೀರ್ತಿಯನ್ನು ಇನ್ನಷ್ಟು ಬೆಳಗುವಂತೆ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.ಪಟ್ಟಣದ ಸಗರಾದ್ರಿ ಸಾಂಸ್ಕೃತಿಕ ಸಂಗಮದ ಕಾರ್ಯದರ್ಶಿ ಪ್ರಕಾಶ ಸಾಹು ಬೆಲ್ಲದ ಬಾಬುರಾವ ವ್ಯಕ್ತಿತ್ವದ ಕುರಿತು ಗುಣಗಾನ ಮಾಡಿದರು.ಲಕ್ಷ್ಮೀಕಾಂತ ಸೋನಾರ, ಮಲ್ಲಿಕಾರ್ಜುನ ಯಾದಗಿರಿ, ಮಂಜುನಾಥ್, ಸಿದ್ದರಾಮ ಸಣ್ಣಳ್ಳಿ, ಸೋಮಯ್ಯ ಹೊಸಮಠ ಸೇರಿದಂತೆ ಹಲವರಿದ್ದರು.
ಆಲಮಟ್ಟಿ: ಆಲಮಟ್ಟಿ ಜಲಾಶಯ 519.60ಮೀ ನಿಂದ 524.256 ಮೀ ಎತ್ತರದಿಂದ ನೀರಾವರಿಗೊಳ್ಳುವ ವಿಜಯಪುರ ಜಿಲ್ಲೆಯ ಪಾಲಿನ ನೀರನ್ನು ಪಡೆಯಲು ಮತ್ತು ನೀರಾವರಿ ಯೋಜನೆಗಳ ನೀರಿನ ಮರುಹಂಚಿಕೆಗಾಗಿ ಜನಜಾಗೃತಿಯ ಜತೆಗೆ ಧರಣಿ ಸತ್ಯಾಗ್ರಹ ಶೀಘ್ರ ಆರಂಭಿಸಲಾಗುವುದು ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಹೇಳಿದರು.ಆಲಮಟ್ಟಿಯಲ್ಲಿ ಬುಧವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಯುಕೆಪಿ ಮೂರನೇ ಹಂತದ ನೀರಾವರಿ ಯೋಜನೆಗಳ ಕಾಲುವೆಯ ಕಾಮಗಾರಿಗಳು ಜಿಲ್ಲೆಯಲ್ಲಿ ಪೂರ್ಣಗೊಂಡಿವೆ. ಆದರೆ ಅದಕ್ಕೆ ನೀರಿನ ಭರವಸೆಯಿಲ್ಲ. ಕಾನೂನಾತ್ಮಕ ಸಮಸ್ಯೆಗಳು ಸಾಕಷ್ಟಿವೆ.ತ್ಯಾಗ ಮಾಡಿದ ವಿಜಯಪುರ ಜಿಲ್ಲೆಗಿಂತಲೂ ನಾರಾಯಣಪುರ ಅಚ್ಚುಕಟ್ಟು ಪ್ರದೇಶದಲ್ಲಿ ಅತಿ ಹೆಚ್ಚು ನೀರಾವರಿಯಾಗಿದೆ. ಈ ತಾರತಮ್ಯ ನಿವಾರಿಸಿ, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿನ ಪ್ರಸ್ತುತ ಅನುಷ್ಠಾನಗೊಂಡಿರುವ ಯೋಜನೆಗಳನ್ನು ಪರಿಗಣಿಸಿ ಪ್ರತಿ ಯೋಜನೆಗೂ ನೀರಿನ ಮರುಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.ನವ್ಹಂಬರ್ ತಿಂಗಳಲ್ಲಿ ಆಲಮಟ್ಟಿಯಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು, ಮತ್ತೊಂದೆಡೆ ಜಿಲ್ಲೆಯಾದ್ಯಂತ ಸಂಚರಿಸಿ ನೀರಾವರಿಗಾಗಿ ಜಾಗೃತಿ ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು…
ಆಲಮಟ್ಟಿ: ಇಲ್ಲಿನ ರೈಲ್ವೆ ನಿಲ್ದಾಣ ಹತ್ತಿರದ ಹಜರತ್ ಸೈಯ್ಯದ್ ಶಹಾ ಮೆಹೆಬೂಬ್ ಸುಬಾನಿ ದರ್ಗಾದ ಉರುಸು ಇದೇ 26 ರಿಂದ ಎರಡು ದಿನ ನಡೆಯಲಿದೆ.ಗುರುವಾರ ಸಂಜೆ ಚಿಮ್ಮಲಗಿ ಮಠದ ಹತ್ತಿರ ಇರುವ ಇಬ್ರಾಹಿಂಸಾಬ್ ತೆಲಗಿ ಅವರ ಮನೆಯಿಂದ ಕುದುರೆ ಹಾಗೂ ವಿವಿಧ ವಾದ್ಯ ವೈಭವಗಳೊಂದಿಗೆ ಗಂಧವು ಆಲಮಟ್ಟಿಯ ಬಳಿಯ ದರ್ಗಾಕ್ಕೆ ತರಲಾಗುತ್ತದೆ.ಇದೇ 27 ಶುಕ್ರವಾರ, ಉರುಸಿನ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಿಗ್ಗೆಯಿಂದಲೇ ಆರಂಭಗೊಳ್ಳಲಿವೆ. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದ್ದು, ನಂತರ ವಿವಿಧ ದಾನಿಗಳಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ದರ್ಗಾ ಕಮಿಟಿಯ ಪ್ರಕಟಣೆ ತಿಳಿಸಿದೆ.
ಜಯ್ ನುಡಿ ನಾಲ್ಕು ರಸ್ತೆಗಳ ನಡುವೆ ನಿಂತು ಯಾವ ಕಡೆ ಪಯಣ ಬೆಳೆಸಿದರೆ ನನಗೆ ಕೆಲಸದಲ್ಲಿ ಲಾಭ ಸಿಗಬಹುದು? ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ಬದುಕನ್ನು ನೆಮ್ಮದಿಯಿಂದ ಕಳೆಯಬಹುದು? ಜೀವನ ಕಟ್ಟಿಕೊಳ್ಳಲು ಸುಲಭವಾಗಬಹುದು? ಈ ರಸ್ತೆಯಲ್ಲಿ ಹೆಜ್ಜೆ ಹಾಕಿದರೆ ಸರಿ ಆಗಬಹುದಾ? ಇಲ್ಲ ಆ ರಸ್ತೆಯಲ್ಲಿ ನಡೆಯೋದು ಒಳ್ಳೆಯದಾ? ಹೀಗೆ ಜೀವನದ ಮುಖ್ಯ ತಿರುವುಗಳಲ್ಲಿ ನಿರ್ಣಯ ಕೈಗೊಳ್ಳುವಾಗ ಮನಸ್ಸಿನಲ್ಲಿ ಹತ್ತು ಹಲವು ಪ್ರಶ್ನೆಗಳು ಕಾಡುತ್ತವೆ. ಗೊಂದಲವನ್ನು ಸೃಷ್ಟಿ ಮಾಡುತ್ತವೆ. ಈ ದಾರಿ ನನಗೆ ಹೇಳಿ ಮಾಡಿಸಿದ್ದು ಅಂತ ಒಂದು ಕ್ಷಣ ಅನಿಸಿದರೆ ಮರುಕ್ಷಣವೇ ಛೇ! ಇಲ್ಲ ಈ ದಾರಿಯಲ್ಲಿ ಬದುಕಿನುದ್ದಕ್ಕೂ ಸಾಗಲು ಸಾಧ್ಯವಿಲ್ಲ ಎನಿಸಿಬಿಡುತ್ತದೆ. ಹೀಗೆ ಆಯ್ಕೆಯಲ್ಲಿ ಗೊಂದಲ ಉಂಟಾದರೆ ಮನಸ್ಸು ದೃಢಗೊಳ್ಳದಿದ್ದರೆ ಬದುಕು ಬದಲಿಸುವ ನಿರ್ಣಯವನ್ನು ತೆಗೆದುಕೊಳ್ಲುವುದಾದರೂ ಹೇಗೆ? ಗೆಲುವಿನ ಹಾದಿಯ ಜಾಡು ಹಿಡಿಯುವುದಾದರೂ ಹೇಗೆ ಅಂತಿರೇನು? ಅಂದ ಹಾಗೆ ಎಂಥ ಎತ್ತರಕ್ಕೇರಿದವರಿಗೂ ಈ ರೀತಿಯ ಗೊಂದಲ ಎದುರು ನಿಂತಿಲ್ಲ ಅಂತಿಲ್ಲ. ಗೊಂದಲದ ಗೂಡಿಂದ ಗೆಲುವಿನ ಬಾನಿಗೆ ನೆಗೆಯಬೇಕೆ? ಹಾಗಾದರೆ…
ಬ್ರಹ್ಮದೇವನಮಡು: ಶರಣರ ವಚನಗಳ ಮೂಲಕ ಮಾನವೀಯ ಮೌಲ್ಯಗಳು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಕೆಂಭಾವಿಯ ಸಾಹಿತಿ ಸಂಶೋಧಕ ನಿಂಗನಗೌಡ ದೇಸಾಯಿ ಹೇಳಿದರು.ಸಿಂದಗಿ ತಾಲೂಕು ಮುರಡಿ ಗ್ರಾಮದ ಗುರು ಘಂಟಾಕರ್ಣ ಶಿವಯೋಗಿಗಳ ೧೯ನೇ ಪುಣ್ಯಾರಾಧನೆಯ ನಿಮಿತ್ಯ ಸಾಲೋಟಗಿಯ ಶಿವಯೋಗೇಶ್ವರರಪುರಾಣ ಪ್ರವಚನ ಮಹಾಮಂಗಲ ಹಾಗೂ ಧರ್ಮಸಭೆಯಲ್ಲಿ ಅವರು ಮಾತನಾಡಿ, ಪ್ರತಿಯೊಬ್ಬರು ಕಾಯಕದ ಜೀವನ ಸಾಗಿಸುವದರ ಜೊತೆಗೆ ಜೀವನದಲ್ಲಿ ಧಯೆ, ಧರ್ಮ,ಪ್ರೀತಿ, ವಿಶ್ವಾಸ, ಧಾನ ಧರ್ಮ ಅಳವಡಿಸಿಕೊಂಡುನಮ್ಮ ಶರಣರ ಆಶಯದಂತೆ ಬದುಕು ಮಾಡಬೇಕು ಎಂದು ಹೇಳಿದರು.ದಿವ್ಶಸಾನಿಧ್ಶ ವಹಿಸಿ ಕಡಕೋಳ ಮಡಿವಾಳೇಶ್ವರ ಮಹಾಮಠದ ಡಾ.ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ,ಗುರು ಘಂಟಾಕರ್ಣ ಶಿವಯೋಗಿಗಳು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಪ್ರತಿಯೊಬ್ಬರು ಸುಂದರ ಮತ್ತು ಸಂತೋಷದ ಜೀವನ ನಡೆಸಬೇಕು. ಶರಣರು- ಸಂತರು ನಡೆದಾಡಿದ ನೆಲದ ಮೇಲೆ ನಾವು ಸುಂದರ ಬದುಕು ಕಟ್ಟಿಕೊಂಡು ಧರ್ಮ ತಳಹದಿಯ ಮೇಲೆ ನಡೆಯಬೇಕು. ಕಡಕೋಳದ ಮಡಿವಾಳೇಶ್ವರರು ತಮ್ಮದೇಯಾದ ಒಂದು ಅನುಭವ ಮಂಟಪ ಸ್ಥಾಪಿಸಿಕೊಂಡು ಸ್ವರಚಿತ, ಸತ್ವಯುತ ಹಾಡುಗಳನ್ನು,ವಚನಗಳನ್ನು ಜೋಡಿಸಿ ಈ ಸಮಾಜದ ಅಂಕುಡೊಂಕುಗಳನ್ನು ನಿರ್ಭಿಡೆಯಿಂದ ಖಂಡಿಸಿದ್ದಾರೆಅಂತಹ…
ಸಿಂದಗಿ: ಗ್ರಾಮ ಪಂಚಾಯತ್ ವತಿಯಿಂದ ಒಂದು ವರ್ಷದಲ್ಲಿ ಎರಡು ಬಾರಿ ಗ್ರಾಮ ಸಭೆಗಳು ನಡೆಸಬೇಕು. ವಾರ್ಡ್ ಸಭೆಗಳನ್ನು ವರ್ಷದಲ್ಲಿ ನಾಲ್ಕು ಬಾರಿ ಕಡ್ಡಾಯವಾಗಿ ಮಾಡಲೇಬೇಕು ಎಂದು ತಾಪಂ ಮೇಲ್ವೀಚಾರಕಿ ಲಕ್ಷ್ಮೀ ಪಾಟೀಲ ಹೇಳಿದರು.ಪಟ್ಟಣದ ಸಂಗಮ ಸಂಸ್ಥೆಯ ಸಭಾಭವನದಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಕಟ್ಟಡ ಕಾರ್ಮಿಕರಿಗೆ ಪಂಚಾಯತ್ ರಾಜ್ ಕುರಿತು ತರಬೇತಿ ಹಾಗೂ ವಾಹನ ಚಾಲನಾ ಪರವಾನಿಗೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನ ಸಾಮಾನ್ಯರು ಸೌಲಭ್ಯವನ್ನು ಪಡೆಯಬೇಕಾದರೆ ಅಥವಾ ಯಾವುದಾದರೂ ನಿಮ್ಮ ಕುಂದು ಕೊರತೆಗಳಿದ್ದರೆ ಗ್ರಾಮ ಸಭೆಯಲ್ಲಿ ಮಂಡಿಸಬೇಕು. ಇಲ್ಲಿ ಮಂಡಿಸಿರುವ ಮಸೂದೆಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವಂತಿಲ್ಲ ಎಂದು ಮಾಹಿತಿ ತಿಳಿಸಿದರು.ಈ ವೇಳೆ ರಾಮು ವಾಹನ ತರಬೇತಿ ಸಂಸ್ಥೆಯ ಮುಖ್ಯಸ್ಥ ರಾಮು ಆಸಂಗಿ ಮಾತನಾಡಿ, ಯಾವುದೇ ವಾಹನವನ್ನು ಚಲಾಯಿಸಬೇಕಾದೆರೆ ಚಲಾಯಿಸುವ ವ್ಯಕ್ತಿಗೆ ೧೮ ವರ್ಷ ಕಡ್ಡಾಯವಾಗಿ ತುಂಬಿರಬೇಕು. ೧೮ವರ್ಷದ ಒಳಗಿನ ಮಕ್ಕಳಿಗೆ ದಯವಿಟ್ಟು ವಾಹನವನ್ನು ಬಳಸಲು ಕೊಡಬೇಡಿ. ಮತ್ತು ೧೮ವರ್ಷ ಪೂರೈಸಿದವರು ವಾಹನವನ್ನು…
ಇಂಡಿ: ಲಿಂಬೆ ನಾಡಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದಲ್ಲದೇ ಯಾವುದೇ ಲೋಪವಾಗದಂತೆ, ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಮತ್ತು ತಾಲೂಕು ಅಧಿಕಾರಿಗಳಿಗೆ ಕೊಟ್ಟ ಜವಾಬ್ದಾರಿ ಹಾಗೂ ಸೂಚಿಸಿದ ಕಾರ್ಯ ಚಟುವಟಿಕೆಗಳು ವ್ಯವಸ್ಥಿತವಾಗಿ ಮಾಡಬೇಕು ಎಂದು ಕಂದಾಯ ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಬುಧವಾರ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ನಿಗದಿಪಡಿಸಿದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಎತ್ತಿನ ಬಂಡಿಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಬಾಬು ಜಗಜೀವನ ರಾಮ್ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ ಹಾಗೂ ಡಾ ಬಿ ಅರ್ ಅಂಬೇಡ್ಕರ್ ವೃತ್ತದ ಮೂಲಕ ಹಾದು ತಾಲೂಕು ಪೋಲಿಸ್ ಮೈದಾನದಲ್ಲಿ ಕಾರ್ಯಕ್ರಮ ಜರುಗುತ್ತದೆ ಎಂದು ತಿಳಿಸಿದರು.ಶಾಲಾ ಕಾಲೇಜು ಹಾಗೂ ತಾಲೂಕು ಅಧಿಕಾರಿಗಳಿಂದ ಪ್ರಭಾತ್ ಪೇರಿ ನಡೆಸಲಿದ್ದು, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು,ಕಾರ್ಯಕ್ರಮ ನಡೆಯುವ ಪೋಲಿಸ್ ಮೈದಾನವನ್ನು ಸ್ವಚ್ಛಗೊಳಿಸಿ…
ನಿತ್ಯ ೬ ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಸಚಿವ ಎಂ.ಬಿ.ಪಾಟೀಲ ಸೂಚನೆ ವಿಜಯಪುರ: ರಾಜ್ಯದಲ್ಲಿ ಈ ಮೊದಲಿಗಿಂತ ೬ ಸಾವಿರ ಮೆಘಾವ್ಯಾಟ್ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಆದಾಗ್ಯೂ ನೀರಾವರಿ ಪಂಪಸೆಟ್‌ಗಳಿಗೆ ೪ ಬ್ಯಾಚ್‌ಗಳಲ್ಲಿ ಆರು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸುವಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಸೂಚನೆ ನೀಡಿದರು.ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ವಿದ್ಯುತ್ ಪೂರೈಕೆ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಿದ್ಯುತ್ ಅಭಾವ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಖುದ್ದಾಗಿ ಪರಿಶೀಲಿಸಿ ನಿರ್ದೇಶನ ನೀಡಿರುವುದರಿಂದ ಕಬ್ಬು ಬೆಳೆಯುವ ಪ್ರದೇಶದಲ್ಲಿ ಬೇಡಿಕೆಯಂತೆ ರಾತ್ರಿ ೨ ಬ್ಯಾಚ್ ಹಾಗೂ ಹಗಲು ೨ ಬ್ಯಾಚ್ ಸೇರಿದಂತೆ ೫ ಗಂಟೆಗಳ ಬದಲಿಗೆ ೬ ಗಂಟೆಗಳ ಕಾಲ ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಸಬೇಕು. ಹಾಗೂ ತೋಟದ ಮನೆಗಳ ಗೃಹ ಬಳಕೆಗಾಗಿ ಸಂಜೆ ೬ ರಿಂದ ೧೦ ಗಂಟೆವರೆಗೆ…
