ಆಲಮಟ್ಟಿ: ಇಲ್ಲಿನ ರೈಲ್ವೆ ನಿಲ್ದಾಣ ಹತ್ತಿರದ ಹಜರತ್ ಸೈಯ್ಯದ್ ಶಹಾ ಮೆಹೆಬೂಬ್ ಸುಬಾನಿ ದರ್ಗಾದ ಉರುಸು ಇದೇ 26 ರಿಂದ ಎರಡು ದಿನ ನಡೆಯಲಿದೆ.
ಗುರುವಾರ ಸಂಜೆ ಚಿಮ್ಮಲಗಿ ಮಠದ ಹತ್ತಿರ ಇರುವ ಇಬ್ರಾಹಿಂಸಾಬ್ ತೆಲಗಿ ಅವರ ಮನೆಯಿಂದ ಕುದುರೆ ಹಾಗೂ ವಿವಿಧ ವಾದ್ಯ ವೈಭವಗಳೊಂದಿಗೆ ಗಂಧವು ಆಲಮಟ್ಟಿಯ ಬಳಿಯ ದರ್ಗಾಕ್ಕೆ ತರಲಾಗುತ್ತದೆ.
ಇದೇ 27 ಶುಕ್ರವಾರ, ಉರುಸಿನ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಿಗ್ಗೆಯಿಂದಲೇ ಆರಂಭಗೊಳ್ಳಲಿವೆ. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದ್ದು, ನಂತರ ವಿವಿಧ ದಾನಿಗಳಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ದರ್ಗಾ ಕಮಿಟಿಯ ಪ್ರಕಟಣೆ ತಿಳಿಸಿದೆ.
Related Posts
Add A Comment