ಬ್ರಹ್ಮದೇವನಮಡು: ಶರಣರ ವಚನಗಳ ಮೂಲಕ ಮಾನವೀಯ ಮೌಲ್ಯಗಳು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಕೆಂಭಾವಿಯ ಸಾಹಿತಿ ಸಂಶೋಧಕ ನಿಂಗನಗೌಡ ದೇಸಾಯಿ ಹೇಳಿದರು.
ಸಿಂದಗಿ ತಾಲೂಕು ಮುರಡಿ ಗ್ರಾಮದ ಗುರು ಘಂಟಾಕರ್ಣ ಶಿವಯೋಗಿಗಳ ೧೯ನೇ ಪುಣ್ಯಾರಾಧನೆಯ ನಿಮಿತ್ಯ ಸಾಲೋಟಗಿಯ ಶಿವಯೋಗೇಶ್ವರರ
ಪುರಾಣ ಪ್ರವಚನ ಮಹಾಮಂಗಲ ಹಾಗೂ ಧರ್ಮಸಭೆಯಲ್ಲಿ ಅವರು ಮಾತನಾಡಿ, ಪ್ರತಿಯೊಬ್ಬರು ಕಾಯಕದ ಜೀವನ ಸಾಗಿಸುವದರ ಜೊತೆಗೆ ಜೀವನದಲ್ಲಿ ಧಯೆ, ಧರ್ಮ,ಪ್ರೀತಿ, ವಿಶ್ವಾಸ, ಧಾನ ಧರ್ಮ ಅಳವಡಿಸಿಕೊಂಡು
ನಮ್ಮ ಶರಣರ ಆಶಯದಂತೆ ಬದುಕು ಮಾಡಬೇಕು ಎಂದು ಹೇಳಿದರು.
ದಿವ್ಶಸಾನಿಧ್ಶ ವಹಿಸಿ ಕಡಕೋಳ ಮಡಿವಾಳೇಶ್ವರ ಮಹಾಮಠದ ಡಾ.ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ,ಗುರು ಘಂಟಾಕರ್ಣ ಶಿವಯೋಗಿಗಳು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಪ್ರತಿಯೊಬ್ಬರು ಸುಂದರ ಮತ್ತು ಸಂತೋಷದ ಜೀವನ ನಡೆಸಬೇಕು. ಶರಣರು- ಸಂತರು ನಡೆದಾಡಿದ ನೆಲದ ಮೇಲೆ ನಾವು ಸುಂದರ ಬದುಕು ಕಟ್ಟಿಕೊಂಡು ಧರ್ಮ ತಳಹದಿಯ ಮೇಲೆ ನಡೆಯಬೇಕು. ಕಡಕೋಳದ ಮಡಿವಾಳೇಶ್ವರರು ತಮ್ಮದೇಯಾದ ಒಂದು ಅನುಭವ ಮಂಟಪ ಸ್ಥಾಪಿಸಿಕೊಂಡು ಸ್ವರಚಿತ, ಸತ್ವಯುತ ಹಾಡುಗಳನ್ನು,
ವಚನಗಳನ್ನು ಜೋಡಿಸಿ ಈ ಸಮಾಜದ ಅಂಕುಡೊಂಕುಗಳನ್ನು ನಿರ್ಭಿಡೆಯಿಂದ ಖಂಡಿಸಿದ್ದಾರೆ
ಅಂತಹ ವಚನಗಳ ಅರ್ಥ ಮತ್ತು ಆಚಾರ ವಿಚಾರ ಮೇಲಕು ಹಾಕುವದರಿಂದ ನಮ್ಮ ಬದುಕು ಹಸನಾಗುತ್ತದೆ ಎಂದು ಹೇಳಿದರು.
ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು ನೇತೃತ್ವವಹಿಸಿ ಮಾತನಾಡಿದರು.
ಖ್ಯಾತ ಸಂಗೀತಗಾರ ಗುರುಶಾಂತಯ್ಯ ಗೌಡಗಾಂವ ಮತ್ತು ತಬಲಾವಾದಕ ಶಿವಾಜಿ ಯಡ್ರಾಮಿ ಸಂಗೀತ ಸೇವೆ ಸಲ್ಲಿಸಿದರು.
ಈ ವೇಳೆ ಕರಬಸಯ್ಯಸ್ವಾಮಿ ಹಿರೇಮಠ, ಸುಂಗಠಾಣ ಗ್ರಾಮ ಪಂಚಾಯತ್ ಅಧ್ಶಕ್ಷ ವಿಜಯಕುಮಾರ ಜಯಗೊಂಡ, ಬಿ.ಜಿ.ಮಠ, ಪ್ರಥಮ ದರ್ಜೆ ಗುತ್ತಿಗೆದಾರ ಅಶೋಕ ಸಾಲಿಮಠ, ನಿಂಗುಸಾಹುಕಾರ ಕೆರೂರ. ಶಿವಶಂಕರ ಸಾಲೋಟಗಿ, ಶರಣು ಜೇವರ್ಗಿ ಸೇರಿದಂತೆ ಶಿಕ್ಷಕರು ಮತ್ತು
ಗ್ರಾಮದ ಪ್ರಮುಖರು ಇದ್ದರು.
ಸಾಹಿತಿ ಶಿಕ್ಷಕ ಶ್ರೀಶೈಲ ಹದಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿರೇಶ ಹಿರೇಮಠ ಸ್ವಾಗತಿಸಿದರು.
ಸೂರ್ಯಕಾಂತ ಸಾಲೋಟಗಿ ಕಾರ್ಯಕ್ರಮ ನಿರೂಪಿಸಿದರು. ನಿಂಗು ಜಂಬರಖಾನಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

