ಯಡ್ರಾಮಿ: ನಾಡಿನ ಪ್ರತಿಷ್ಠಿತ ದಿನಪತ್ರಿಕೆಯಾದ ’ವಿಜಯವಾಣಿ’ ಕಲಬುರ್ಗಿ ಆವೃತ್ತಿಯ ಸ್ಥಾನಿಕ ಸಂಪಾದಕ ಬಾಬುರಾವ ಹಲಕರಟಿ, ಯಡ್ರಾಮಿ ಅವರನ್ನು ಸ್ಥಳಿಯ ಮುರುಗೇಂದ್ರ ಶಿವಯೋಗಿ ವಿರಕ್ತಮಠದಲ್ಲಿ ಶ್ರೀಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಸನ್ಮಾನಿಸಿದರು.
ಮಂಗಳವಾರ ಸಂಜೆ ಬಾಬುರಾವ ಯಡ್ರಾಮಿ ದಂಪತಿಯನ್ನು ಶ್ರೀಮಠದ ವತಿಯಿಂದ ಗೌರವಿಸಿದ ಶ್ರೀಗಳು, ಬಾಬುರಾವ ಅವರು ತಮ್ಮ ಸರಳ – ಸಜ್ಜನಿಕೆಯ ವ್ಯಕ್ತಿತ್ವ ಮತ್ತು ಪ್ರತಿಭೆಯಿಂದ ನಾಡಿನ ನಂ.೧ ಪತ್ರಿಕೆಯ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ಅವರ ಹುಟ್ಟೂರು ಯಡ್ರಾಮಿಗೆ ದೊಡ್ಡ ಗೌರವ ತಂದಿದೆ. ತಮ್ಮ ಸೇವಾವಧಿಯಲ್ಲಿ ಬಾಬುರಾವ ಅವರು ಯಡ್ರಾಮಿ ತಾಲೂಕಿನ ಕೀರ್ತಿಯನ್ನು ಇನ್ನಷ್ಟು ಬೆಳಗುವಂತೆ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಪಟ್ಟಣದ ಸಗರಾದ್ರಿ ಸಾಂಸ್ಕೃತಿಕ ಸಂಗಮದ ಕಾರ್ಯದರ್ಶಿ ಪ್ರಕಾಶ ಸಾಹು ಬೆಲ್ಲದ ಬಾಬುರಾವ ವ್ಯಕ್ತಿತ್ವದ ಕುರಿತು ಗುಣಗಾನ ಮಾಡಿದರು.
ಲಕ್ಷ್ಮೀಕಾಂತ ಸೋನಾರ, ಮಲ್ಲಿಕಾರ್ಜುನ ಯಾದಗಿರಿ, ಮಂಜುನಾಥ್, ಸಿದ್ದರಾಮ ಸಣ್ಣಳ್ಳಿ, ಸೋಮಯ್ಯ ಹೊಸಮಠ ಸೇರಿದಂತೆ ಹಲವರಿದ್ದರು.
Related Posts
Add A Comment