Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೆರೆಗಳಲ್ಲಿ ನೀರು ಸಂಗ್ರಹ | ಹೆಚ್ಚಿದ ಬಾವಿ, ಕೊಳವೆ ಬಾವಿಗಳ ಅಂತರ್ಜಲಮಟ್ಟ | ಕಡಿಮೆಯಾದ ಕುಡಿವ ನೀರಿನ ತಾಪತ್ರಯ ಉದಯರಶ್ಮಿ ದಿನಪತ್ರಿಕೆ ವರದಿ: ಇಲಾಹಿ ಇ. ಜಮಖಂಡಿಚಿಮ್ಮಡ: ಮಂಗಳವಾರ ಹಾಗೂ ಶುಕ್ರವಾರ ರಾತ್ರಿ ಸುರಿದ ಕೃತ್ತಿಕಾ ಮಳೆಯಿಂದ ಈ ಭಾಗದಲ್ಲಿ ವಾತಾವರಣವೇ ತಂಪೆರೆದಂತಾಗಿದ್ದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ ಅವರು ಖುಷಿಯಿಂದಲೇ ತಮ್ಮ ಬಿತ್ತನೆ ಕಾರ್ಯಕ್ಕೆ ಅಣಿಯಾಗಿದ್ದಾರೆ.ಕಳೆದ ಒಂದು ತಿಂಗಳಿನಿಂದ ಜಮೀನು ಹದಮಾಡಿಕೊಂಡು ಮಳೆಗಾಗಿ ಜಾತಕ ಪಕ್ಷಿಯಂತೆ ಕಾಯುತಿದ್ದ ರೈತರಿಗೆ ಈ ವಾರದಲ್ಲಿ ಸುರಿದ ಮಳೆ ಅವರಲ್ಲಿ ಆಶಾ ಭಾವನೆ ಮೂಡಿಸಿದ್ದು ವರುಣದೇವನ ಮೇಲೆ ಭಾರ ಹಾಕಿ ಬಹುತೇಕ ರೈತರು ಬಿತ್ತನೆ ಪ್ರಾರಂಭಿಸಿದ್ದಾರೆ.ಎಪ್ರಿಲ್ ನಲ್ಲಿಯೇ ಸುರಿಯುವ ಅಶ್ವಿನಿ, ಭರಣಿ ಮಳೆಗೆ ರೈತರು ತಮ್ಮ ಜಮೀನುಗಳನ್ನು ಹದಗೊಳಿಸಿ ತಿಪ್ಪೆಗೊಬ್ಬರವನ್ನು ಗದ್ದೆಗಳಲ್ಲಿ ಮಿಶ್ರಣಗೊಳಿಸುತ್ತಿದ್ದರು, ಆದರೆ ಅವೆರಡೂ ಮಳೆಗಳು ಕೈಕೊಟ್ಟ ಪರಿಣಾಮ ರೈತರಲ್ಲಿ ಆತಂಕ ಮೂಡಿಸಿತ್ತು ಆದರೆ ಕೃತ್ತಿಕಾ ಮಳೆ ಸಕಾಲಕ್ಕೆ ಸುರಿದ ಪರಿಣಾಮ ಈ ಬಾಇ ಬಿತ್ತನೆ ಕಾರ್ಯವೂ ಸರಿಯಾದ ಸಮಯಕ್ಕೆ ನಡೆಯುತ್ತಿದೆ ಅಲ್ಲದೇ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದಲ್ಲಿ ಡಿಸೈಲ್ ಅಭಾವದ ಕಾರಣದಿಂದಾಗಿ ತೈಲ ವಿತರಣಾ ಕೇಂದ್ರ( ಪೆಟ್ರೋಲ್ ಪಂಪ್)ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಂತು ಚಾಲಕರು, ಮಾಲೀಕರು ಪರದಾಡುವಂತಾಯಿತು.ಪಟ್ಟಣದಲ್ಲಿ ಪೆಟ್ರೋಲ್ ದೊರೆಯುತ್ತಿದೆ ಆದರೆ ಡಿಸೈಲ್ ಕೊರತೆ ಉಂಟಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಕ್ಯಾನ್ ಗಳೊಂದಿಗೆ ವಾಹನಗಳ ಮಾಲೀಕರು ಹಾಗೂ ಚಾಲಕರು ಪಂಪ್‌ಗಳ ಮುಂದೆ ಜಮಾಯಿಸಿದರು. ಇದರಿಂದ ಜನದಟ್ಟಣೆ ಹೆಚ್ಚಾಗಿದ್ದು ಕಂಡು ಬಂದಿತು. ಜೊತೆಗೆ ಟ್ರ‍್ತಾಕ್ಟರ್‌ಗಳ ಮಾಲೀಕರು ಸಹ ತಮಗೆ ಅಗತ್ಯವಾದ ಡಿಸೈಲ್ ಕೊಳ್ಳಲು ಸಾಲಾಗಿ ನಿಲ್ಲಿಸಿದರು. ಇದರಿಂದ ವಿಚಲಿತರಾದಪಂಪ್ ಸಿಬ್ಬಂದಿ ಕ್ಯಾನ್‌ಗಳಿಗೆ ಹಾಗೂ ಟ್ರ‍್ತಾಕ್ಟರ್‌ಗಳಿಗೆ ತಲಾ ಎರಡು ಸಾವಿರ ಮೌಲ್ಯದ ಹಾಗೂ ಟಿಪ್ಪರಗಳಿಗೆ ಐದು ಸಾವಿರ ಮೌಲ್ಯದ ಡಿಸೈಲ್ ವಿತರಿಸುವ ಮೂಲಕ ಸಮಾಧಾನಪಡಿಸಿದರು.ಇನ್ನೂ ಕೆಲವು ಪಂಪ್‌ಗಳಲ್ಲಿ ಡಿಸೈಲ್ ನೋಸ್ತಾಕ್ ಎಂಬ ಫಲಕ ತೂಗು ಹಾಕಿದ್ದು , ಇರುವ ಪಂಪ್‌ಗಳಲ್ಲಿ ಗದ್ದಲ ಉಂಟಾಗಲು ಕಾರಣವಾಯಿತು.ಡಿಸೈಲ್ ಪಡೆಯಲು ಯಾವುದೇ ಧಾವಂತ ಬೇಡ , ಸಮಾಧಾನದಿಂದ ಪಡೆಯೋಣ ಎಂದು ವಾಹನಗಳ ಮಾಲೀಕರು ಎಲ್ಲರನ್ನೂ ಸಮಾಧಾನ ಪಡಿಸಿದರು.ಈ ಸಂದರ್ಭದಲ್ಲಿ ಕಾಶೀನಾಥ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಮತ್ತು ಅತ್ಯಂತ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿ ಜೀವನವು ಅಮೂಲ್ಯವಾದ ಘಟ್ಡವಾಗಿದ್ದು, ಉದಾತ್ತ ಗುರಿ ಹೊಂದುತ್ತಾ, ಆ ಗುರಿಯ ಸಾಧನೆಯತ್ತ ಕಠಿಣ ಪರಿಶ್ರಮ, ನಿರಂತರ ಅಧ್ಯಯನ, ಸಾಧಿಸಿಯೇ ತೀರುತ್ತೇನೆಂಬ ದೃಢ ಸಂಕಲ್ಪದೊಂದಿಗೆ ಹೆಜ್ಜೆಯಿಟ್ಟರೆ ಖಂಡಿತವಾಗಿಯೂ ಯಶಸ್ಸು ಗಳಿಸಬಹುದು ಎಂದು ಎ.ಎಸ್.ಪಿ. ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ಡಾ.ಭಾರತಿ ಮಠ ಅವರು ಅಭಿಪ್ರಾಯಪಟ್ಟರು.ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ:೨೩-೦೯-೨೦೨೫ ರಂದು ವಾಣಿಜ್ಯಶಾಸ್ತç ವಿಭಾಗದಿಂದ ಆಯೋಜಿಸಿದ ಶುಭ ಹಾರೈಕೆ (ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.ವಿದ್ಯಾರ್ಥಿದೆಸೆಯಲ್ಲಿ ಎದುರಾಗುವ ಸಂಕಷ್ಟಗಳನ್ನು ಮೀರಿ ತಮ್ಮ ಕನಸುಗಳನ್ನು ನನಸಾಗಿಸಲು ಹಾಗೂ ಸಾಧನೆಯ ಮೇರು ಶಿಖರವನ್ನು ಮುಟ್ಟಲು ಅದಕ್ಕೆ ಬೇಕಾದ ಪೂರ್ವ ತಯಾರಿ, ಯೋಜನೆ, ಯೋಚನೆ ಮತ್ತು ಸದಾಲೋಚನೆ ಮತ್ತು ಸಮಯ ನಿರ್ವಹಣೆ ಮಾಡಬೇಕು. ನಾನು ಸಮರ್ಥ, ಸಶಕ್ತನೆಂಬ ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಅಧ್ಯಯನಶೀಲರಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಉನ್ನತ ಶಿಕ್ಷಣ ಪೂರೈಸಿದ…
ಲೇಖನ*- *ಡಾ ಶಶಿಕಾಂತ ಪಟ್ಟಣ*ರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಇತ್ತೀಚೆಗೆ ಲಿಂಗಾಯತ ಧರ್ಮದ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆ ಸಂಪೂರ್ಣ ನೆಲ ಕಚ್ಚಿದೆ.2018 ರಲ್ಲಿ ಸುನಾಮಿ ತರಹ ಹುಟ್ಟಿಕೊಂಡ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಚಳುವಳಿ ಸಂವಿಧಾನಾತ್ಮಕ ನ್ಯಾಯ ಸಮ್ಮತ ಕಾನೂನು ಸಮ್ಮತ ಇದ್ದರೂ ಸಹಿತ ಹಲವು ಕಾರಣಗಳಿಂದ ನೆಲ ಕಚ್ಚಿದೆ. ಈ ಚಳುವಳಿಯ ಮೂಲ ಉದ್ದೇಶದಿಂದ ನಾವು ಅಂದ್ರೆ ಬಸವ ಪ್ರಣೀತಾ ಸಮಾಜ ಲಿಂಗಾಯತ ಸಮಾಜ ಸಂಪೂರ್ಣ ತನ್ನ ಬೇಡಿಕೆ ಈಡೇರಿಸುವ ಕನಸು ನುಚ್ಚು ನೂರಾಗುತ್ತಿದೆ.ಇದು ಒಂದು ರಾಜಕೀಯ ಪಕ್ಷಗಳ ಹೋರಾಟವೇ?ಹೌದು ಲಿಂಗಾಯತ ಧರ್ಮದವರ ಮತಗಳನ್ನು ಸೆಳೆಯಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಅಂದಿನ ಬಹುತೇಕ ಶಾಸಕರನ್ನು ಮಂತ್ರಿಗಳನ್ನು ಈ ಲಿಂಗಾಯತ ಧರ್ಮದ ಮಾನ್ಯತೆ ಚಳುವಳಿಗೆ ಉದಾರವಾಗಿ ಬಿಟ್ಟರು.ಆವಾಗಲೇ ಹುಟ್ಟಿಕೊಂಡದ್ದು ಬಸವ ಸೇನೆ, ಜಾಗತಿಕ ಲಿಂಗಾಯತ ಮಹಾಸಭೆನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಲು ಆಗದೆ ಬಸವ ಸೇನೆ ಹೆಸರಿಲ್ಲದೆ ಮಾಯವಾಯಿತು.ಇನ್ನು ಜಾಗತಿಕ ಲಿಂಗಾಯತ ಮಹಾಸಭೆ ಲಿಂಗಾಯತ ಧರ್ಮದ ಅರಿವು…
ಸಿಂದಗಿಯಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಅಶೋಕ ಮನಗೂಳಿ ಗುತ್ತಿಗೆದಾರ ಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಮುದಾಯದ ಅಗತ್ಯಗಳಿಗೆ ತಕ್ಕಂತೆ ಈ ಭವನ ನಿರ್ಮಾಣವಾಗಬೇಕು. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಉಪಯುಕ್ತವಾಗುವಂತೆ ಕಟ್ಟಡ ನಿರ್ಮಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ಲೋಕೋಪಯೋಗಿ ಇಲಾಖೆಯ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ.೨೫ ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಮುದಾಯ ಭಾವನಗಳ ನಿರ್ಮಾಣವು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ಈ ಸಮುದಾಯ ಭವನ ಸಮಾಜದ ವಿವಿಧ ಸಭೆ-ಸಮಾರಂಭಗಳಿಗೆ ಉಪಯೋಗವಾಗಲಿ. ನಿಗದಿತ ಸಮಯದೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು. ರೂ.೨೫ ಲಕ್ಷ ವೆಚ್ಚದ ಈ ಸಮುದಾಯ ಭವನ ನಿರ್ಮಾಣದಿಂದ ಸಾರ್ವಜನಿಕರಿಗೆ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ.ಇದೇ ಸಂದರ್ಭದಲ್ಲಿ ಮಹಾದೇವಪ್ಪ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸ್ವಚ್ಛತೆ ಮತ್ತು ಶುದ್ಧತೆ ನಮ್ಮೆಲ್ಲರ ಆದ್ಯ ಕರ್ತವ್ಯ. ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಪ್ರತಿಷ್ಠಾನದಿಂದ ಸ್ಥಾಪಿಸುವ ಮೂಲಕ ಮನಗೂಳಿ ಕುಟುಂಬ ಸಾಮಾಜಿಕ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು..ನಗರದ ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಬಸ್ ನಿಲ್ದಾಣದಲ್ಲಿ ದಿ.ಎಂ.ಸಿ.ಮನಗೂಳಿ ಪ್ರತಿಷ್ಠಾನದಿಂದ ಪ್ರಯಾಣಿಕರ ಹಿತಕ್ಕಾಗಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಕಲುಷಿತ-ಮುಕ್ತ ನೀರು ಒದಗಿಸುವ ಉದ್ದೇಶದಿಂದ ಸಿಂದಗಿ ಬಸ್ ನಿಲ್ದಾಣದಲ್ಲಿ ಹೊಸ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡಿರುವುದು ಸಂತಸ ತಂದಿದೆ. ಈ ಘಟಕ ಪ್ರಯಾಣಿಕರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ನಮ್ಮ ತಂದೆಯವರಾದ ದಿವಂಗತ ಎಂ.ಸಿ.ಮನಗೂಳಿ ಅವರ ಹೆಸರಿನ ಮೇಲೆ ದಿ.ಎಂ.ಸಿ.ಮನಗೂಳಿ ಪ್ರತಿಷ್ಠಾನವನ್ನು ಸ್ಥಾಪಿಸಿ ಅವರ ಕನಸಿನಂತೆ ಅನೇಕ ಸಾಮಾಜಿಕ ಸೇವೆಗಳನ್ನು ಪ್ರತಿಷ್ಠಾನದ ಮೂಲಕ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಭಕ್ತರ ವ್ಯಾಪಾರಸ್ಥರ ನೌಕರರ ಬಹುದಿನಗಳ ಬೇಡಿಕೆಗೆ ಶಾಸಕ ಯಶವಂತಗೌಡ ಪಾಟೀಲರು ಸ್ಪಂದಿಸಿ ಸಿಂದಗಿಯಿಂದ ಇಂಡಿ ಲಚ್ಯಾಣ ಮೂಲಕ ಸೋಲಾಪುರಕ್ಕೆ ಹೋಗುವ ಬಸ್ಸಿಗೆ ಚಾಲನೆ ನೀಡಿದರು. ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ, ಸೋಲಾಪುರ ಮತ್ತು ಮಹಾರಾಷ್ಟçದ ವಿವಿಧ ಕಡೆಯಿಂದ ಬರುವ ಭಕ್ತರಿಗೆ ಈ ಬಸ್ಸು ಅನುಕೂಲವಾಗುತ್ತದೆ ಎಂದರು.ಸಿಂದಗಿಯಿಂದ ಮದ್ಯಾನ್ಹ ೨ ಗಂಟೆಗೆ ಇಂಡಿಯಿಂದ ೩.೪೫ ಕ್ಕೆ ಬಿಡುವ ಬಸ್ಸು ಲಚ್ಯಾಣ ೪ ಗಂಟೆಗೆ, ಅಹಿರಸಂಗ, ಭೈರುಣಗಿ, ಭತಗುಣಕಿ ಹಲಸಂಗಿ ಧೂಳಖೇಡ ಮಾರ್ಗವಾಗಿ ಸೋಲಾಪುರ ತಲುಪುವದು.ಸೋಲಾಪುರದಿಂದ ಸಂಜೆ ೭ ಗಂಟೆಗೆ ಬಿಡುವ ಬಸ್ಸು ಇದೇ ಮಾರ್ಗದಲ್ಲಿ ಇಂಡಿಯಿAದ ಸಿಂದಗಿಗೆ ಹೋಗಲಿದೆ.ಕಾರ್ಯಕ್ರಮದಲ್ಲಿ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಇಒ ಮಹಾದೇವಪ್ಪ ಏವೂರ ಮತ್ತಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಬೇಸಿಗೆ ಮುಗಿಯುತ್ತ ಬಂದಿದೆ. ತಾಲೂಕಿನಲ್ಲಿ ನಗರ ಮತ್ತು ಗ್ರಾಮೀಣ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಕೊಳ್ಳಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ನಗರದ ಪ್ರವಾಸಿ ಮಂದಿಎದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶಿಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.ತಾಲೂಕಿನ ರಾಮ ತೀರ್ಥ ತಾಂಡಾದಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಅದು ಬಿಟ್ಟರೆ ಬಹುತೇಕ ಎಲ್ಲಿಯೂ ಇಲ್ಲ. ಕೂಡಲೇ ರಾಮತೀರ್ಥ ಗ್ರಾಮದ ಕುಡಿಯುವ ನೀರಿನ ತೊಂದರೆಗೆ ಕ್ರಮ ವಹಿಸಲು ಕೇಳಿಕೊಂಡರು.ಅದಕ್ಕೆ ಉತ್ತರಿಸಿದ ಗ್ರಾಮೀಣ ಕಿರು ನೀರು ಸರಬರಾಜು ಅಧಿಕಾರಿಗಳು ರಾಮತೀರ್ಥ ಗ್ರಾಮಕ್ಕೆ ಹೊರ್ತಿ ಪ್ರದೇಶದಿಂದ ನೀರಿನ ಪೂರೈಕೆ ಯಾಗುತ್ತಿದೆ. ರಾಮತೀರ್ಥ ತುಂಬ ಎತ್ತರ ಪ್ರದೇಶದಲ್ಲಿದೆ, ಹೊರ್ತಿ ಮತ್ತು ಸುತ್ತಲಿನ ಐದು ಗ್ರಾಮಗಳಿಗೆ ಐದು ಗಂಟೆ ನೀರಿನ ಪೂರೈಕೆ ಬಂದು ಮಾಡಿ ನೀರು ಬಿಡಬೇಕಾಗುತ್ತದೆ. ಹೀಗಾಗಿ ಬರುವ ದಿನಗಳಲ್ಲಿ ಸಮೀಪದಲ್ಲಿಯೇ ಇರುವ ಕೆರೆಯ ಪೂಲಕ ಪಾಯಿಪ ಲಾಯಿನ ಕಾರ್ಯ ಮಾಡಿ ವ್ಯವಸ್ಥೆ ಕಲ್ಪಿಸಲು ಕ್ರೀಯಾಯೋಜನೆ ರೂಪಿಸಲಾಗಿದೆ ಎಂದರು.ತಾ.ಪಂ ಇಒ ಮಲ್ಲಿಕಾರ್ಜುನ ಏವೂರ ಮಾತನಾಡಿ…
ವಿಜಯಪುರದಲ್ಲಿ ಅಂಗನವಾಡಿ ಶಿಕ್ಷಕಿಯರು- ಸಹಾಯಕಿಯರಿಗೆ ಬುನಾದಿ ತರಬೇತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಅಂಗನವಾಡಿ ಕೇಂದ್ರಗಳು ಮಹತ್ವದ ಪಾತ್ರವಹಿಸುತ್ತಿವೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಷನ್ ಸಹಯೋಗದಲ್ಲಿ ನಗರದ ಕಂದಗಲ್ ಹನುಮತರಾಯ ರಂಗಮಂದಿರದಲ್ಲಿ ಹೊಸದಾಗಿ ನೇಮಕವಾದ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಮೇ.೨೧ರಂದು ಹಮ್ಮಿಕೊಂಡಿದ್ದ ಬುನಾದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ಆರೋಗ್ಯ,ಶಿಕ್ಷಣ ಮತ್ತು ಉತ್ತಮ ಸಂಸ್ಕಾರಗಳ ಬುನಾದಿ ಬಾಲ್ಯಾವಸ್ಥೆಯಲ್ಲೇ ನಿರ್ಮಾಣವಾಗುತ್ತದೆ. ಹಾಗಾಗಿ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರು ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದರು.ಇನ್ನೊಂದೆಡೆ ಸರ್ಕಾರ ಮಕ್ಕಳ ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅಂಗನವಾಡಿ ಶಿಕ್ಷಕಿಯರು ಅಂಗನವಾಡಿ ಕೇಂದ್ರಕ್ಕೆ ಮಾತ್ರ ಸೀಮಿತವಾಗದೆ ಗ್ರಾಮ ಮತ್ತು ಸಮುದಾಯ ಮಟ್ಟದಲ್ಲಿಯೂ ಜನರಿಗೆ ಈ ಯೋಜನೆಗಳ ಮಾಹಿತಿ ತಲುಪಿಸಿ, ಅವುಗಳ ಸದುಪಯೋಗ ಪಡೆಯಲು ಪ್ರೇರಣೆ ನೀಡಬೇಕು ಎಂದರು.ಕಾರ್ಯಕ್ರಮದ ಹೊಸದಾಗಿ ನೇಮಕವಾದ ಅಂಗನವಾಡಿ ಶಿಕ್ಷಕಿಯರು ಮತ್ತು…
