ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗ್ರಾಮೀಣ ಹಬ್ಬಗಳು ಸಂಸ್ಕೃತಿ, ಪರಂಪರೆ, ಸಾಮಾಜಿಕ ಬಾಂಧವ್ಯ ಮತ್ತು ಜೀವನ ಮೌಲ್ಯಗಳ ಸಂಗಮ ಎಂದು ದೈಹಿಕ ಶಿಕ್ಷಣಾಧಿಕಾರಿ ರಮೇಶ ಬಿರಾದಾರ ಹೇಳಿದರು.
ಸಿಂದಗಿ ತಾಲೂಕಿನ ಗಣಿಹಾರ ಮಾದರಿ ಪ್ರಾಥಮಿಕ ಶಾಲಾ ಅವರಣದಲ್ಲಿ ಹಮ್ಮಿಕೊಂಡ ಹಳ್ಳಿ ಸೊಗಡಿನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿ ಹಬ್ಬಗಳು ಕೇವಲ ಸಂಭ್ರಮ ಮಾತ್ರವಲ್ಲ, ಗ್ರಾಮೀಣ ಸಂಸ್ಕೃತಿ ಮತ್ತು ಜನ ಜೀವನವನ್ನು ಪ್ರತಿಬಿಂಬಿಸುವ ಒಂದು ಪ್ರಮುಖ ಭಾಗವಾಗಿದೆ. ಕುಟುಂಬ ಸಂಬಂಧಗಳನ್ನು ಗಟ್ಟಿಗೊಳಿಸಿ ಪೀಳಿಗೆಯಿಂದ ಪೀಳಿಗೆಗೆ ಸಂಪ್ರದಾಯಗಳನ್ನು ರವಾನಿಸುತ್ತವೆ. ಇದು ಪಾಶ್ಚಾತ್ಯ ಪ್ರಭಾವದಿಂದ ಮರೆಯಾಗುತ್ತಿರುವ ಈ ಕಾಲದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ರವಿ ಬಿರಾದಾರ ಮಾತನಾಡಿದರು. ಹಿಕ್ಕುನುಗುತ್ತಿ ಲಿಂಗಾಯತ ಮಠದ ಪ್ರಭುಲಿಂಗ ಶರಣರು ಸಾನಿಧ್ಯ ವಹಿಸಿದ್ದರು.
ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಮೇಶ ಕೋರಿ ಸದಸ್ಯ ದಾದಾಪೀರ ಅಂಗಡಿ, ಶರಣು ಆನಗೊಂಡ, ವಿಶ್ರಾಂತ ಶಿಕ್ಷಕ ಯು.ಐ.ಶೇಖ, ಶಿಕ್ಷಣ ಸಂಯೋಜಕ ಅಯ್.ಎಫ್. ಭಾಲ್ಕಿ, ಲಕ್ಷ್ಮಣ ಸೊನ್ನ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ.ಕೆಂಭಾವಿ, ಎಂ.ಕೆ.ಬಿರಾದಾರ, ಎ.ಎಸ್.ದೇವರಮನಿ, ಶಿವರಾಜ ಉಕ್ಕಲಿ, ಭೀಮಾಶಂಕರ ಅಮ್ಮಾಗೋಳ ವೇದಿಕೆ ಮೇಲಿದ್ದರು.
ಮುಖ್ಯ ಶಿಕ್ಷಕ ಸಿದ್ದಲಿಂಗ ಚೌಧರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಹಳ್ಳಿ ಸೊಗಡಿನ ಭಜನೆ, ಹಂತಿ ಹೊಡೆಯುವುದು, ಗುರುಕುಲ ಶಿಕ್ಷಣ ಪದ್ಧತಿ, ಕೃಷಿ ಪದ್ಧತಿ, ಮದುವೆ ಹಂದರ, ಕೊಪ್ಪಳ ಕೌದಿ ಹೊಲಿಯುವುದು, ಸೇದು ಬಾವಿ, ಚಕ್ಕರ್ಕಟ್ಟೆ, ಹುಲಿಕಟ್ಟೆ, ಚಿಣ್ಣಿದಾಂಡು ಆಟ, ಪಗಡೆ, ಆಟ ಉತ್ತರ ಕರ್ನಾಟಕ ಊಟ, ತರಕಾರಿ ಮಾರುಕಟ್ಟೆಯಂತ ೪೦ಕ್ಕೂ ಹೆಚ್ಚು ಹಲವಾರು ರೂಪಕಗಳು ಗಮನ ಸೆಳೆದವು.
ಇದೇ ಸಂದರ್ಭದಲ್ಲಿ ಕುಲಸುಮಾ ಇನಾಮದಾರ, ಜಿ.ಎ.ಮುಲ್ಲಾ, ಬಿ.ಕೆ.ಹಳ್ಳಿ, ರೇಣುಕಾ ಪಟ್ಟಣಶೆಟ್ಟಿ, ಕೆ.ಜಿ.ಹತ್ತಳ್ಳಿ, ಚೆನ್ನಮ್ಮ ಬಮ್ಮಣ್ಣಿ ಸೇರಿದಂತೆ ಶಾಲೆಯ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.

