ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಹಿಳಾ ಸಬಲೀಕರಣ, ಮಹಿಳೆಯನ್ನು ಸಮಾಜಮುಖಿಯನ್ನಾಗಿ ಮಾಡುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಅತ್ಯಂತ ಶ್ಲಾಘನೀಯವಾದದು ಎಂದು ಸಮಾಜ ಸೇವಕಿ ನಾಗರತ್ನ ಮನಗೂಳಿ ಹೇಳಿದರು.
ಪಟ್ಟಣದ ಹೊಸನಗರದ ಶ್ರೀವಿಠ್ಠಲ ರುಕ್ಮಿಣಿ ಮಂಗಲ ಭವನದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಾಲವಾದ ವಲಯ ಮಟ್ಟದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜೀವನದ ಕಷ್ಟಕಾರ್ಪಣ್ಯಗಳಿಗೆ ಪರಿಹಾರವಾಗಿ ಶ್ರೀಸತ್ಯನಾರಾಯಣ ಪೂಜೆ ಕೈಗೊಳ್ಳುವುದು ಹಿಂದಿನಿAದಲೂ ಬಂದಿದೆ. ಈಗ ಸಮಾಜದಲ್ಲಿ ಸಾಮೂಹಿಕ ಪೂಜೆ ಕೈಗೊಂಡು ಉತ್ತಮ ಕಾರ್ಯ ಮಾಡಿದೆ ಎಂದರು.
ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ಪಾಟೀಲ ಮಾತನಾಡಿದರು.
ಸಾನಿಧ್ಯ ವಹಿಸಿದ ಅವೋಗೇಶ್ವರ ತಪೋಧಾಮದಶ್ರೀ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯಲ್ಲಿ ಭಕ್ತರು ದಂಪತಿಗಳ ಸಹಿತ ಪಾಲ್ಗೊಂಡು, ಅಶೋಕ ಜೋಷಿ ಮೂಲಕ ಪೂಜೆ ಸಲ್ಲಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಸಿಂಧೂರ ಡಾಲೇರ, ಕನ್ನೋಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗಮ್ಮ ಪಾರಸನಳ್ಳಿ, ಕಲಬುರ್ಗಿ ಸಿಎಸ್‌ಸಿ ಯೋಜನಾಧಿಕಾರಿ ಮಹಾಂತೇಶ, ಯೋಜನಾಧಿಕಾರಿ ಬಿನೋಯಿ, ಮೇಲ್ವಿಚಾರಕ ಸದಾಶಿವಪ್ಪ ಅಂಗಡಿ, ಶಂಕರ ಬಗಲಿ, ಗೋಲ್ಲಾಳಪ್ಪ ಚೌಧರಿ, ದೊಡ್ಡಪ್ಪ ಮಂಗೋಡಿ, ಬಸಪ್ಪ ದೇವಣಗಾಂವ, ಸಿ.ಕೆ.ಕುದರಿ, ತುಕಾರಾಮ ಸುಗತೇಕರ, ಪಿ.ಜಿ.ಹಿರೇಮಠ, ಪಿ.ಎಸ್.ಮಿಂಚನಾಳ, ಶ್ರೀಗೌರಿ ಇದ್ದರು.

