ಉದಯರಶ್ಮಿ ದಿನಪತ್ರಿಕೆ
ಇಂಡಿ: ಗ್ರಾಮೀಣ ಭಾಗದಲ್ಲಿ ತಯಾರಿಸಲ್ಪಡುವ ವಿವಿಧ ಆಹಾರ ಪದಾರ್ಥಗಳಾದ ಸಜ್ಜಿರೊಟ್ಟಿ ಶೇಂಗಾ ಹೋಳಿಗೆ, ಉದರಬ್ಯಾಳಿ, ದಪಾಟಿ, ಹುಳಬಾನ, ಪುಂಡಿಪಲ್ಲೆ, ಬಜ್ಜಿ, ಮಡಿಕೆಕಾಳು, ಶೇಂಗಾ ಹಿಂಡಿ, ಅಗಸಿ ಹಿಂಡಿ ಕಾರ್ಯಾಳ ಹಿಂಡಿ, ಜಿಲೇಬಿ, ಲಾಡು, ಚಕ್ಕಲಿ, ಚೂಡಾ ತಯಾರಿಸಿ ಪ್ರದರ್ಶಿಸಿ ನಂತರ ಎಲ್ಲರೂ ಸಾಮೂಹಿಕ ಭೋಜನ ಮಾಡಿದರು.
ನಗರದ ಶಾಂತಿನಿಕೇತನ ನಗರದ ಜೆ.ಸಿ.ಗಾರ್ಢನ ನಲ್ಲಿ ಮಹಿಳಾ ಸಂಘದಿಂದ ಗ್ರಾಮೀಣ ಜಾನಪದ ಸೊಡಗಿನ ಕಾರ್ಯಕ್ರಮ ಮಾಡಿ ಭೋಜನ ಮಾಡಿದರು.
ಈ ಹಿಂದೆ ಆಚರಿಸಲ್ಪಡುತ್ತಿದ್ದ ಬಿಸಿಕಲ್ಲಿನಿಂದ ಬೀಸುವದು, ರುಬ್ಬುವ ಕಲ್ಲಿನಿಂದ ಹೂರಣ ರುಬ್ಬುವದು, ವನಿಕೆಯಿಂದ ಕುಟ್ಟುವದು, ಜಾನಪದ ಪ್ರದರ್ಶನ ಮಾಡಿದರು.
ಸುಟ್ಟಿರುವ ಸಿತ್ನಿ ಸುಲಗಾಯಿ ಕಬ್ಬು ಬಾಳೆಗೊನಿ, ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.
ರೈತರು ಜಮೀನಿನಲ್ಲಿ ಬೆಳೆದ ಎಲ್ಲ ಪದಾರ್ಥಗಳು ಪ್ರದರ್ಶನಕ್ಕೆ ಇಟ್ಟಿದ್ದರು. ಎತ್ತಿನ ಗಾಡಿ ಮೂಲಕ ಪ್ರಯಾಣ, ಜೋಕಾಲಿ ಆಡುವದು ಪ್ರದರ್ಶಿಸಿ ಮನರಂಜಿಸಿದರು.
ಮಹಿಳಾ ಬಳಗದ ರಾಜಶ್ರೀ ಜೈನ, ಶೈಲಾ ಕಂಬಾರ, ಶಾಂತಲಾ ಮಹೀಂದ್ರಕರ, ಸುಶೀಲಾ ಪಾಟೀಲ, ಸುರೇಖಾ ಪೊದ್ದಾರ, ಭಾರತಿ ಬಗಲಿ, ದ್ರಾಕ್ಷಾಯಿಣಿ ಮಸಳಿ, ಗೀತಾ ಹಿರೇಮಾಳ, ಬಾಗ್ಯ ಮುರಾಳ, ಕಮಲಾ ಕಟ್ಟಿಮನಿ, ಪಾರ್ವತಿ ಕೋಳಿ, ಶೈಲಾ ದ್ಯಾಮಗೊಂಡ, ಶೋಭಾ ಬಾರಿಕಾಯಿ, ಜಯಶ್ರೀ ಅವರಾದಿ ರೇಖಾ ವಗ್ಗಿ ಮತ್ತಿತರಿದ್ದರು.

