ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ನೇತಾಜಿ ಅವರು “ಒಬ್ಬ ವ್ಯಕ್ತಿ ಭಾರತಕ್ಕೋಸ್ಕರ ಪ್ರಾಣ ತ್ಯಜಿಸಬಹುದು. ಆದರೆ, ಆತನ ತ್ಯಾಗವೇ ಸಹಸ್ರಾರು ಜನರನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಪ್ರೇರೇಪಿಸುತ್ತದೆ” ಎಂದು ಹೇಳಿದ್ದಾರೆ. ವೀರ ಸೇನಾನಿ, ದೇಶ ಕಂಡ ಅಸಾಧಾರಣ ನಾಯಕ, ವರ್ಚಸ್ವಿ ವಾಗ್ಮಿ ಮತ್ತು ಅತ್ಯಂತ ಪ್ರಭಾವಶಾಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸಚಂದ್ರ ಭೋಸ ಅವರು ಪ್ರತಿಯೊಬ್ಬ ಭಾರತೀಯರ ಹೃದಯ ಅಂತರಾಳದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿ ರಾಷ್ಟçಭಕ್ತಿ ಮತ್ತು ರಾಷ್ಟ್ರೀಯತೆ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
‘ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ವನ್ನು ಕೊಡುತ್ತೇನೆ’ ಎಂದು ಹೇಳುತ್ತಾ, ಅಸಂಖ್ಯಾತ ಭಾರತೀಯ ಯುವಕರು ಬ್ರಿಟಿಷ್ ವಸಾಹತುಶಾಹಿ ನಿಯಂತ್ರಣದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು.

ನೇತಾಜಿ ಸುಭಾಸಚಂದ್ರ ಭೋಸ ಅವರು ೨೩ ನೇಯ ಜನೇವರಿ ೧೮೯೭ ರಲ್ಲಿ ಒರಿಸ್ಸಾ ರಾಜ್ಯದ ಕಟಕ್ ಎಂಬಲ್ಲಿ ಜಾನಕಿನಾಥ ಭೋಸ್ ಹಾಗೂ ಪ್ರಭಾವತಿ ದತ್ ಬೋಸ್ ದಂಪತಿಗಳ ಸುಪುತ್ರರಾಗಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ತತ್ವ-ಬೋಧದಿಂದ ಪ್ರಭಾವಿತಗೊಂಡ ಇವರು ಸದಾ ರಾಷ್ಟ್ರಾಭಿಮಾನ ಮತ್ತು ಐಕ್ಯತೆಯನ್ನು ತಮ್ಮ ಮೂಲಮಂತ್ರವನ್ನಾಗಿಸಿದ್ದರು. ಭಾರತೀಯರ ಬಗ್ಗೆ ಬ್ರಿಟಿಷರು ಹೊಂದಿದ್ದ ತಾರತಮ್ಯ ನೀತಿಯನ್ನು ವಿರೋಧಿಸುತ್ತಾ, ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಲು ಮತ್ತು ಯವಕರನ್ನು ಸಂಘಟಿಸಲು ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸ್ಥಾಪಿಸಿದರು.
ಯುವಕರಲ್ಲಿ ದೇಶಭಕ್ತಿ, ಧೈರ್ಯ, ಏಕತೆ ಮತ್ತು ರಾಷ್ಟçಕ್ಕಾಗಿ ಸೇವೆ ಸಲ್ಲಿಸುವ ನಿಷ್ಠೆ ಮತ್ತು ಜೀವನ-ಮೌಲ್ಯಗಳನ್ನು ಪ್ರೋತ್ಸಾಹಿಸಲು ನೇತಾಜಿಯವರ ಜಯಂತಿಯನ್ನು ಆಚರಿಸಲಾಗುತ್ತದೆ. ಸುಭಾಸಚಂದ್ರ ಭೋಸ್ ಅವರು ತಮ್ಮ ಕೊನೆಯ ಉಸಿರಿನವರೆಗೂ ಬ್ರಿಟಿಷರ ವಿರುದ್ದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶ ಕಂಡ ಅಪ್ರತಿಮ, ಕ್ರಾಂತಿಕಾರಿ ಮತ್ತು ಮರೆಯಲಾಗದ ದೇಶಪ್ರೇಮಿಯಾಗಿದ್ದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಕೊಡುಗೆ: ಯವಕರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಫಿಸುತ್ತಾ, ಸ್ವಾತಂತ್ರö್ಯ ಚಳುವಳಿಗಾಗಿ ಉಗ್ರಗಾಮಿ ಶಕ್ತಿಯನ್ನು ಮತ್ತು ಯುವಕರಲ್ಲಿ ಸ್ಪೂರ್ತಿ ತುಂಬಿದರು. ‘ ದಿ ಇಂಡಿಯನ್ ಸ್ಟçಗಲ್’ ಎಂಬ ಪುಸ್ತಕವನ್ನು ಬರೆದು ದೇಶದಾದ್ಯಂತ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದವರು. ಹೀಗಾಗಿ ಇವರಿಗೆ ‘ನೇತಾಜಿ’ ಎಂದೂ ಕರೆಯುತ್ತಾರೆ.
ಆದ್ದರಿಂದ ಪ್ರತಿವರ್ಷ ಜನೇವರಿ ೨೩ ರಂದು ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ನೇತಾಜಿ ಸುಭಾಸಚಂದ್ರ ಭೋಸ ಅವರು ವಹಿಸಿದ ಪಾತ್ರವನ್ನು ಗೌರವಿಸಲು ಪ್ರತಿ ವರ್ಷ ಜನೇವರಿ ೨೩ ರಂದು ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ನೇತಾಜಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದ ತ್ಯಾಗ ಮತ್ತು ನೀಡಿದ ಕೊಡುಗೆಗಳನ್ನು ಸ್ಮರಿಸಲು ಮತ್ತು ಆಚರಿಸಲು ಜನರನ್ನು ಪ್ರೇರೇಪಿಸುವುದು ಈ ದಿನದ ಆಚರಣೆಯು ಪ್ರಮುಖ ಉದ್ದೇಶವನ್ನು ಹೊಂದಿದೆ.
೨೦೨೬ ನೇಯ ವರ್ಷದ ಈ ಜಯಂತಿ ಆಚರಣೆ (ಪರಾಕ್ರಮ ದಿವಸ) ಯು “ಶೌರ್ಯ, ಪರಾಕ್ರಮ ಮತ್ತು ರಾಷ್ಟçಭಕ್ತಿ ಮತ್ತು ರಾಷ್ಟ್ರಾಭಿಮಾನವನ್ನು ಯುವಕರಲ್ಲಿ ಒಡಮೂಡಿಸುವುದು” ಘೋಷವಾಕ್ಯವನ್ನು ಹೊಂದಿದೆ. ಯುವಕರೇ ದೇಶದ ಶಕ್ತಿ ಎಂಬುದನ್ನು ಮನಗಂಡು ನೇತಾಜಿಯವರ ಜೀವನ-ಮೌಲ್ಯ, ನೀಡಿದ ಕೊಡುಗೆಗಳ ಬಗ್ಗೆ ಅರಿವು ಮೂಡಿಸುತ್ತಾ, ಅವರಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತಿ ರಾಷ್ಟçಕ್ಕಾಗಿ ಸೇವೆ ಸಲ್ಲಿಸುವ ಮತ್ತು ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕೆಂಬುದೇ ಈ ವರ್ಷದ ಆಚರಣೆಯ ಪ್ರಮುಖ ಧ್ಯೇಯೋದ್ಧೇಶವಾಗಿದೆ.
ಕೊನೆಯ ನುಡಿ
ನೇತಾಜಿ ಸುಭಾಸಚಂದ್ರ ಭೋಸ್ ಅವರು, “ಓo ಡಿeಚಿಟ ಛಿhಚಿಟಿge iಟಿ hisಣoಡಿಥಿ hಚಿs eveಡಿ beeಟಿ ಚಿಛಿhieveಜ bಥಿ ಜisಛಿussioಟಿs” ಎಂದು ಹೇಳಿದ್ದಾರೆ. ಅಂದರೆ ಜಗತ್ತಿನಲ್ಲಿ ಬದಲಾವಣೆ ತರಬೇಕಾದರೆ ಕೇವಲ ಭಾಷಣ, ಚರ್ಚೆ, ಅಭಿಪ್ರಾಯಗಳಿಂದ ಮಾತ್ರ ಸಾಧ್ಯವಿಲ್ಲ. ಹೊರತು ರಾಷ್ಟ್ರದಲ್ಲಿ ನೈಜ ಬದಲಾವಣೆ ಅನ್ನೋದು ಆಗಬೇಕಾದರೆ ಅದಕ್ಕಾಗಿ ಹೋರಾಟ ಮಾಡಲೇ ಬೇಕು. ಆದ್ದರಿಂದ ನೇತಾಜಿ ಸುಭಾಸಚಂದ್ರ ಭೋಸ್ ಮತ್ತು ಪರಾಕ್ರಮ ದಿವಸದಂದು ಅವರ ತತ್ವ-ಸಿದ್ದಾಂತ, ಜೀವನಾದರ್ಶ, ದೇಶಪ್ರೇಮ, ರಾಷ್ರದ ಐಕ್ಯತೆ ಮತ್ತು ವಿಚಾರಧಾರೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂಬುದು ನನ್ನ ಅಂಬೋಣ.


