Author: editor.udayarashmi@gmail.com

ವಿಜಯಪುರ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ ೨೦ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ನವೆಂಬರ್ ೦೧ರಂದು ಜರುಗುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿ ಸಂಗಮೇಶ ಭೀಮಣ್ಣ ಕೆರೆಪ್ಪಗೋಳ, ಸಮಾಜ ಸೇವೆ-ಕನ್ನಡ ಸೇವೆ ಕ್ಷೇತ್ರದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಬಾಳಿ ಹಾಗೂ ಸಿದ್ರಾಮಪ್ಪಾ ದುಂಡಪ್ಪಾ ಕುಮಾನಿ, ಸಂಗೀತ ಕ್ಷೇತ್ರದಲ್ಲಿ ಶ್ರೀಧರ ರಾಮಯ್ಯ ಹರಿದಾಸ, ಜಾನಪದ ಕ್ಷೇತ್ರದಲ್ಲಿ ಮೌಲಾಸಾಬ ನಾನಾಸಾಬ ಜಾಹಗೀರದಾರ, ಚಿನ್ನಪ್ಪ ಗಿರಿಮಲ್ಲಪ್ಪ ಪೂಜಾರಿ ಹಾಗೂ ಶ್ರೀಮತಿ ಶೇಖವ್ವಾ ಭೀಮಣ್ಣ ಫರನಾಕರ ಇವರನ್ನು ಆಯ್ಕೆ ಮಾಡಲಾಗಿದೆ.ರಂಗಭೂಮಿ ಕ್ಷೇತ್ರದಲ್ಲಿ ಯಮನಪ್ಪ ಹುಪನಪ್ಪ ಅಂಗಡಗೇರಿ ಹಾಗೂ ಶ್ರೀಮತಿ ಉಮಾ ಹಣಮಂತಪ್ಪ ರಾಣೆಬೆನ್ನೂರು, ಬಯಲಾಟ ಕ್ಷೇತ್ರದಲ್ಲಿ ಶಿವಣ್ಣ ಮಾಧುರಾಯ ಬಿರಾದಾರ, ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮತಿ ವೀನಾಕ್ಷಿ ಪಾಟೀಲ (ಕಲ್ಯಾಣಿ), ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಲ್ಲಮಪ್ರಭು ಮಲ್ಲಿಕಾರ್ಜುನ ಮಠ, ಸೀತಾರಾಮ ಚಿದಂಬರ ಕುಲಕರ್ಣಿ ಹಾಗೂ ಕೆ.ಎನ್.ರಮೇಶ ಅವರನ್ನು ಆಯ್ಕೆ ಮಾಡಲಾಗಿದೆ.ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಶ್ರೀಕಾಂತ ಬಾಬುರಾವ್ ಮಿರಜಕರ,…

Read More

ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಡಿಗಲ್ಲು ಸಮಾರಂಭದಲ್ಲಿ ಸಚಿವ ಎಚ್.ಕೆ.ಪಾಟೀಲ ಕರೆ ವಿಜಯಪುರ: ಉದ್ಯಮಿಯಾಗಿ ಹೆಚ್ಚೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ ಕರೆ ನೀಡಿದ್ದಾರೆ.ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿಯಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಡಿಗಲ್ಲು ಸಮಾರಂಭ ಮತ್ತು ವಿಜಯಪುರ ನಗರದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ವತಿಯಿಂದ ನಿರ್ಮಿಸಲಾಗುತ್ತಿರುವ ಆಂಗ್ಲ ಮಾಧ್ಯಮ ಶಾಲೆಯ ಕಟ್ಡಡ ಮತ್ತು ವಿದ್ಯಾರ್ಥಿ ವಸತಿ ನಿಲಯದ ಕಟ್ಡಡದ ಅಡಿಗಲ್ಲು ಹಾಗೂ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವಿಜಯಪುರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ರಚನಾತ್ಮಕ ಕಾರ್ಯಕ್ರಮ ಮಾಡುವ ಜನ ಕಡಿಮೆ ಅಭಿವೃದ್ಧಿಗೆ ಪೂರಕವಾಗಿರುವ ಇಂಥ ಕಾರ್ಯಗಳನ್ನು ಮಾಡಲು ಸಾಧ್ಯ. ಆಡಳಿತ ಮಂಡಳಿ ಸಮಾಜದ ಆಸ್ತಿ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇವರ ಕಾಯಕಕ್ಕೆ ಸದಸ್ಯರ ಬೆಂಬಲ ಅಗತ್ಯ.…

Read More

ಕರ್ನಾಟಕಕ್ಕೆ ಮುಂದುವರಿದ ಸಂಕಷ್ಟ | ನಿತ್ಯ 2,600 ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ಬೆಂಗಳೂರು: ಕರ್ನಾಟಕ ಸರ್ಕಾರವು ತಮಿಳುನಾಡಿಗೆ ನ.1ರಿಂದ 15ರವರೆಗೆ ಪ್ರತಿದಿನ 2,600 ಕ್ಯೂಸೆಕ್‌ ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ.ದೆಹಲಿಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ಆದೇಶವನ್ನು ನೀಡಲಾಗಿದೆ. ಸಮಿತಿಯ ಶಿಫಾರಸಿನಿಂದ ರಾಜ್ಯಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.ದೆಹಲಿಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಜಲಸಂಪನ್ಮೂಲ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್‌ ಆದೇಶದಂತೆ ರಚಿಸಲಾದ ಕಾವೇರಿ ನೀರು ನಿಯಂತ್ರಣಾ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪ್ರತಿ 15 ದಿನಗಳಿಗೊಮ್ಮೆ ಸಭೆಯನ್ನು ನಡೆಸಿ ನೀರು ಬಿಡುವ ವಿಚಾರಕ್ಕೆ ಕರ್ನಾಟಕಕ್ಕೆ ಆದೇಶ ನೀಡುತ್ತಿದೆ. ಈ ಹಿಂದೆ ಅಕ್ಟೋಬರ್‌ 15ರಿಂದ 31ರ ವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಪ್ರಾಧಿಕಾರ ಆದೇಶ ಹೊರಡಿಸಿತ್ತು.ಅದಕ್ಕೂ ಮೊದಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ…

Read More

ಬಸ್ ಗ್ಯಾರೇಜ್ ನಲ್ಲಿ ಭೀಕರ ಅಗ್ನಿ ದುರಂತ | ಇದ್ದ 35 ಬಸ್‌ಗಳಲ್ಲಿ 20ಕ್ಕೂ ಅಧಿಕ ಬಸ್ ಗಳಿಗೆ ಹಾನಿ ಬೆಂಗಳೂರು: ಮಹಾನಗರದ ಬಸ್ ಗ್ಯಾರೇಜ್ ನಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ೧೯ ಬಸ್ ಗಳು ಬೆಂಕಿಗಾಹುತಿಯಾಗಿದ್ದು, ಘಟನಾ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬೆಂಗಳೂರಿನ ಹೊಸಕೆರೆಹಳ್ಳಿಯ ವೀರಭದ್ರನಗರದ ಸಮೀಪದಲ್ಲಿರುವ ಎಸ್.ವಿ ಕೋಚ್ ಬಸ್ ಬಾಡಿಬಿಲ್ಡರ್ಸ್ ಮತ್ತು ಗ್ಯಾರೇಜ್ ನಲ್ಲಿ ಸೋಮವಾರ ಬೆಳಗ್ಗೆ ಭಾರೀ ಬೆಂಕಿ ಕಾಣಿಸಿಕೊಂಡು ನಿಂತಿದ್ದ ೧೯ಕ್ಕೂ ಹೆಚ್ಚು ಬಸ್‌ಗಳು ಸುಟ್ಟು ಕರಕಲಾಗಿವೆ. ಗ್ಯಾರೇಜ್‌ನಲ್ಲಿ ನಿಂತಿದ್ದ ಬಸ್‌ ಒಂದರ ಭಾಗಕ್ಕೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ವೆಲ್ಡಿಂಗ್ ಯಂತ್ರದಿಂದ ಕಿಡಿ ಹಾರಿದ್ದು ಇದು ಬೆಂಕಿ ಅವಘಡಕ್ಕೆ ಕಾರಣವಾಯಿತು. ಬಳಿಕ ಒಂದರನಂತರ ಒಂದು ಬಸ್ ಗೆ ಬೆಂಕಿ ವ್ಯಾಪಿಸಿದೆ ಎಂದು ನಾವು ಶಂಕಿಸಿದ್ದೇವೆ. ಬೆಂಕಿ ನಂತರ ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಇತರ…

Read More

ವಿಜಯಪರ: ಜಿಲ್ಲಾ ಹಾಲುಮತ ಸಮಾಜದ ವತಿಯಿಂದ ನೂತನವಾಗಿ ಸಹಕಾರಿ ಬ್ಯಾಂಕ್ ಪ್ರಾರಂಭಿಸಲು ಇಚ್ಚಿಸಿದ್ದು, ಈ ಕುರಿತು ವಿಜಯಪುರ ಜಿಲ್ಲಾ ಹಾಲುಮತ ಸಮಾಜದ ಮುಖಂಡರ ಒಮ್ಮತವನ್ನು ಪಡೆಯಲು ದಿ.೦೧-೧೧-೨೦೨೩ ರಂದು ನಗರದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ, ಶಿಖಾರಖಾನೆಯಲ್ಲಿ ಈ ಕುರಿತು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.ಆದ್ದರಿಂದ ಈ ಸಭೆಯಲ್ಲಿ ಹಾಲುಮತ ಸಮಾಜದ ಹಿರಿಯ ಮುಖಂಡರು, ಸಂಘಟನೆಗಳ ಗಣ್ಯರು, ಮುಖಂಡರು, ಯುವ ಧುರೀಣರು, ರಾಜಕೀಯ ಮುತ್ಸದ್ಧಿಗಳು,ಜಿಲ್ಲಾ ಹಾಲುಮತ ನೌಕರರು, ಹಾಲುಮತ ಸಮಾಜದ ಪದಾಧಿಕಾರಿಗಳು ಹಾಜರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ವಿಜಯಪುರ ನಗರ ಘಟಕ ಕುರುಬರ ಸಂಘದ ಅಧ್ಯಕ್ಷ ರಾಜು ಕಗ್ಗೋಡ, ಹಾಗೂ ಕಾರ್ಯದರ್ಶಿ ರಮೇಶ ಕಾಲೇಬಾಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಹೊನವಾಡ: ಶಾಲೆಗಳಲ್ಲಿನ ಗಂಟೆಗಳ ಸದ್ದು ಹೆಚ್ಚು ಕೇಳುವ ದೇಶವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ. ಶಿಕ್ಷಣವಂತ ವಿದ್ಯಾರ್ಥಿಗಳು ವೇಷಭೂಷಣದ ಬದಲಾಗಿ ಉತ್ತಮ ಆದರ್ಶದಿಂದ ಸಮಾಜದಲ್ಲಿ ಗುರ್ತಿಸಿಕೊಳ್ಳುವ ಮೂಲಕ ಶಿಕ್ಷಕರ ಋಣವನ್ನು ತೀರಿಸಬೇಕಿದೆ ಎಂದು ನಿವೃತ್ತ ಶಿಕ್ಷಕ ಎಸ್ ಎನ್ ಮಂಗೊಂಡ ಕರೆ ನೀಡಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ 2001,2004,2006ನೇ ಸಾಲಿನ ವಿದ್ಯಾರ್ಥಿಗಳ ಬಳಗ ವತಿಯಿಂದ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಅಮರೇಶ್ವರ ಮಹಾರಾಜರು ಮಾತನಾಡಿ, ಏನೂ ತಿಳಿಯದ ಸಾಮಾನ್ಯನನ್ನು ಜೀವನದ ಮೌಲ್ಯದ ಮೂಲಕ ಗುರಿ ಸಾಧನೆಗೆ ಮಾರ್ಗ ತೋರುವವನೇ ಗುರು, ಶಿಕ್ಷಣದ ಯಜ್ಞದ ಸ್ವತ್ತು ಗುರು ತಾನು ಉರಿದು ವಿದ್ಯಾರ್ಥಿಗಳ ಮೂಲಕ ಜಗತ್ತಿಗೆ ಬೆಳಕು ನೀಡುವ ಗುರುವಿಗೆ ಎಷ್ಟು ನಮಿಸಿದರೂ ಸಾಲದು ಎಂದರು.ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಖೇದದ ಸಂಗತಿ. ಇನ್ನೊಂದೆಡೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ ಎಂದು ಶಿವಯೋಗಿಶ್ವರ ಸ್ವಾಮಿಗಳು ಹೇಳಿದರು.ವಿಜಯಪುರದ…

Read More

ಎಳೆಯರು ನಾವು ಗೆಳೆಯರು ಸಂಘದಿಂದ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮ ಮುದ್ದೇಬಿಹಾಳ: ಕಷ್ಟದ ದಿನಗಳನ್ನು ಯಾರೂ ಮರೆಯಬಾರದು. ಪಾಲಕರು ಎಷ್ಟೇ ಅನುಕೂಲಸ್ಥರಿದ್ದರೂ ನಿಮ್ಮ ಮಕ್ಕಳಿಗೆ ನಿಮ್ಮ ಮನೆತನ ನೋವು, ಹಸಿವಿನ ಜೊತೆಗೆ ಬಡತನದ ಪರಿಚಯ ಮಾಡಿ, ಅಂದಾಗ ಮಾತ್ರ ನಿಮ್ಮ ಮಕ್ಕಳು ಹಾಳಾಗದೇ ಜಗತ್ತನ್ನೇ ಬೆಳಗುವ, ರಕ್ಷಣೆ ಮಾಡುವ ಆದರ್ಶ ವ್ಯಕ್ತಿಗಳಾಗುತ್ತಾರೆ ಎಂದು ಶಿರಹಟ್ಟಿ ಭಾವೈಕ್ಯತಾ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.ಪಟ್ಟಣದ ವಿಬಿಸಿ ಹೈಸ್ಕೂಲ ಮೈದಾನದಲ್ಲಿ ಸನ್ ೧೯೯೩ ನೇ ಸಾಲಿನಲ್ಲಿ ಪಟ್ಟಣದ ಕೆಬಿಎಂಪಿಎಸ್, ವಿಬಿಸಿ, ಮತ್ತು ಎಸ್‌ಎಸ್‌ಎಂ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಕಲಿತ ವಿದ್ಯಾರ್ಥಿಗಳ ಎಳೆಯರು ನಾವು ಗೆಳೆಯರು ಸಂಘದ ವತಿಯಿಂದ ರವಿವಾರ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಹಿಂದಿನ ಕಾಲದಲ್ಲಿ ಮಕ್ಕಳಿಗೆ ಹಸಿವಿನ ಪರಿಚಯ ವಾಗುತ್ತಿತ್ತು. ತಂದೆ ತಾಯಿಗಳು ಇದ್ದ ಬಟ್ಟೆ ಹರೆಯುವ ತನಕ ಮತ್ತೊಂದು ಬಟ್ಟೆಯನ್ನು ಕೊಡಿಸುತ್ತಿರಲಿಲ್ಲ. ಕಾಲಲ್ಲಿ ಚಪ್ಪಲಿ ಇರುತ್ತಿರಲಿಲ್ಲ. ದೂರದ ಶಾಲೆಗೆ ನಡೆದುಕೊಂಡೇ ಹೋಗಿ ಬರುತ್ತಿದ್ದರು. ಹಾಗಾಗಿ ಅವರಲ್ಲಿ ದೇಹಕ್ಕೆ…

Read More

ವಿಜಯಪುರ: ಜಿಲ್ಲಾಡಳಿತ ವಿಜಯಪುರ ವತಿಯಿಂದ ನವೆಂಬರ್ ೧೧ ರಂದು ವೀರರಾಣಿ ಒನಕೆ ಒಬವ್ವ ಜಯಂತಿ ಆಚರಿಸುವ ಕುರಿತು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ : ೦೩-೧೧-೨೦೨೩ ರಂದು ಸಂಜೆ ೫ ಗಂಟೆಗೆ ಪೂರ್ವಸಿದ್ಧತಾ ಸಭೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಗಳನ್ನು ಪ್ರತಿಯೊಬ್ಬ ನಾಗರಿಕರಿಗೆ ತಲುಪಿಸಲು ಕೇಂದ್ರ ಸರ್ಕಾರವು ೨೦೨೩ರ ಅಕ್ಟೋಬರ್ ೦೧ರಿಂದ ಡಿಸೆಂಬರ್ ೩೧ರವರೆಗೆ ಜನ ಸುರಕ್ಷಾ ಅಭಿಯಾನ ಹಮ್ಮಿಕೊಂಡಿದೆ.ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ೧೮ ರಿಂದ ೭೦ ವರ್ಷ ವಯಸ್ಸಿನವರು ವರ್ಷಕ್ಕೆ ೨೦ ರೂ. ಪಾವತಿಸುವ ಮೂಲಕ ಎರಡು ಲಕ್ಷದ ಅಪಘಾತ ವಿಮೆ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ ೧೮ ರಿಂದ ೫೦ ವರ್ಷ ವಯಸ್ಸಿನವರು ವರ್ಷಕ್ಕೆ ೪೩೬ ರೂ. ಪಾವತಿಸುವ ಮೂಲಕ ಎರಡು ಲಕ್ಷ ಜೀವವಿಮೆ ಪಡೆದುಕೊಳ್ಳಬಹುದಾಗಿದ್ದು, ಸಾರ್ವಜನಿಕರು ತಮ್ಮ ಉಳಿತಾಯ ಖಾತೆ ಇರುವ ಬ್ಯಾಂಕ್‌ನ್ನು ಸಂಪರ್ಕಿಸಿ ಈ ವಿಮೆಗಳಿಗೆ ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಅದರಂತೆ ಅಕ್ಟೋಬರ್ ೦೧ ರಿಂದ ಡಿಸೆಂಬರ್ ೩೧ರವರೆಗೆ ಘರ ಘರ ಕೆಸಿಸಿ ಅಭಿಯಾನ ಸಹ ಹಮ್ಮಿಕೊಂಡಿದ್ದು, ಯಾವುದೇ ಬ್ಯಾಂಕ್ ಅಥವಾ ಸೊಸೈಟಿಯಿಂದ ಬೆಳೆಸಾಲ ಪಡೆಯದಿರುವ ರೈತರು ಈ ಅಭಿಯಾನದಡಿ ತಮ್ಮ ಉಳಿತಾಯ ಖಾತೆ ಇರುವ ಅಥವಾ ತಮ್ಮ…

Read More