ವಿಜಯಪರ: ಜಿಲ್ಲಾ ಹಾಲುಮತ ಸಮಾಜದ ವತಿಯಿಂದ ನೂತನವಾಗಿ ಸಹಕಾರಿ ಬ್ಯಾಂಕ್ ಪ್ರಾರಂಭಿಸಲು ಇಚ್ಚಿಸಿದ್ದು, ಈ ಕುರಿತು ವಿಜಯಪುರ ಜಿಲ್ಲಾ ಹಾಲುಮತ ಸಮಾಜದ ಮುಖಂಡರ ಒಮ್ಮತವನ್ನು ಪಡೆಯಲು ದಿ.೦೧-೧೧-೨೦೨೩ ರಂದು ನಗರದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ, ಶಿಖಾರಖಾನೆಯಲ್ಲಿ ಈ ಕುರಿತು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಆದ್ದರಿಂದ ಈ ಸಭೆಯಲ್ಲಿ ಹಾಲುಮತ ಸಮಾಜದ ಹಿರಿಯ ಮುಖಂಡರು, ಸಂಘಟನೆಗಳ ಗಣ್ಯರು, ಮುಖಂಡರು, ಯುವ ಧುರೀಣರು, ರಾಜಕೀಯ ಮುತ್ಸದ್ಧಿಗಳು,ಜಿಲ್ಲಾ ಹಾಲುಮತ ನೌಕರರು, ಹಾಲುಮತ ಸಮಾಜದ ಪದಾಧಿಕಾರಿಗಳು ಹಾಜರಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ವಿಜಯಪುರ ನಗರ ಘಟಕ ಕುರುಬರ ಸಂಘದ ಅಧ್ಯಕ್ಷ ರಾಜು ಕಗ್ಗೋಡ, ಹಾಗೂ ಕಾರ್ಯದರ್ಶಿ ರಮೇಶ ಕಾಲೇಬಾಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment