ಹೊನವಾಡ: ಶಾಲೆಗಳಲ್ಲಿನ ಗಂಟೆಗಳ ಸದ್ದು ಹೆಚ್ಚು ಕೇಳುವ ದೇಶವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ. ಶಿಕ್ಷಣವಂತ ವಿದ್ಯಾರ್ಥಿಗಳು ವೇಷಭೂಷಣದ ಬದಲಾಗಿ ಉತ್ತಮ ಆದರ್ಶದಿಂದ ಸಮಾಜದಲ್ಲಿ ಗುರ್ತಿಸಿಕೊಳ್ಳುವ ಮೂಲಕ ಶಿಕ್ಷಕರ ಋಣವನ್ನು ತೀರಿಸಬೇಕಿದೆ ಎಂದು ನಿವೃತ್ತ ಶಿಕ್ಷಕ ಎಸ್ ಎನ್ ಮಂಗೊಂಡ ಕರೆ ನೀಡಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ 2001,2004,2006ನೇ ಸಾಲಿನ ವಿದ್ಯಾರ್ಥಿಗಳ ಬಳಗ ವತಿಯಿಂದ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಮರೇಶ್ವರ ಮಹಾರಾಜರು ಮಾತನಾಡಿ, ಏನೂ ತಿಳಿಯದ ಸಾಮಾನ್ಯನನ್ನು ಜೀವನದ ಮೌಲ್ಯದ ಮೂಲಕ ಗುರಿ ಸಾಧನೆಗೆ ಮಾರ್ಗ ತೋರುವವನೇ ಗುರು, ಶಿಕ್ಷಣದ ಯಜ್ಞದ ಸ್ವತ್ತು ಗುರು ತಾನು ಉರಿದು ವಿದ್ಯಾರ್ಥಿಗಳ ಮೂಲಕ ಜಗತ್ತಿಗೆ ಬೆಳಕು ನೀಡುವ ಗುರುವಿಗೆ ಎಷ್ಟು ನಮಿಸಿದರೂ ಸಾಲದು ಎಂದರು.
ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಖೇದದ ಸಂಗತಿ. ಇನ್ನೊಂದೆಡೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ ಎಂದು ಶಿವಯೋಗಿಶ್ವರ ಸ್ವಾಮಿಗಳು ಹೇಳಿದರು.
ವಿಜಯಪುರದ ಎಸ್ ಬಿ ವಿಸಡಮ್ ಕರಿಯರ್ ಆಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶರಣಯ್ಯ ಭಂಡಾರಿಮಠ ಮಾತನಾಡಿ, ಇತ್ತೀಚೆಗೆ ಶಿಕ್ಷಕ ವೃಂದಕ್ಕೆ ಗೌರವ ನೀಡುವ ಗುರುವಂದನೆ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದು, ಭಾರತೀಯ ಸಂಸ್ಕøತಿ ಮತ್ತು ಪರಂಪರೆಯನ್ನು ಹೆಚ್ಚಿಸಿದೆ, ಜ್ಞಾನದ ಹಸಿವನ್ನು ತೀರಿಸಿ ಬದುಕನ್ನು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ. ಶೆಕ್ಷಣಿಕವಾಗಿ ವಿದ್ಯಾರ್ಥಿ ಗಳನ್ನು ಪ್ರಭುದ್ಧಗೊಳಿಸಿದ ಶಿಕ್ಷಕರ ಸೇವೆಯನ್ನು ಸ್ಮರಿಸುತ್ತಿರುವ ಕಾರ್ಯಕ್ರಮ ಅರ್ಥಪೂರ್ಣ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ತ ರಾ ಬಡಿಗೇರ, ಆರ್ ಎ ದಂಧರಗಿ, ಎಲ್ ಜಿ ಶಿಳ್ಳಿನ, ಎಸ್ ಎಂ ಕುಂಬಾರ, ಶ್ರೀಮತಿ ಪ ಬಿ ರಬೀನಾಳ, ಕೆ ಎಂ ಪರಣ್ಣನವರ, ಎಸ್ ಎನ್ ಕೋಟಿ, ವ್ಹಿ ಎಸ್ ಅಳ್ಳಿಮೊರೆ, ವ್ಹಿ ಹೆಚ್ ನಾಯಕ, ಬಿ ಎಂ ಬೂದಿಹಾಳ್, ಡಿ ಬಿ ಡೆಂಬ್ರೆ, ರೇ ಸಿ ಪಾಟೀಲ್, ಎಸ್ ಜಿ ಲಕ್ಕುಂಡಿಮಠ, ಅ ಬಿ ಬಿರಾದಾರ, ಸಿ ಆರ್ ಗೊರವರ, ಎಂ ಆರ್ ಬೆಳಗಲ್ಲ, ಸಿ ಎಂ ಚಂಡಕಿ, ಸಿ ಎಸ್ ಇಂಡಿ ಶಿಕ್ಷಕರು ಗೌರವ ಸನ್ಮಾನವನ್ನು ಸ್ವೀಕರಿಸಿದರು.
ಶಿವಲೀಲಾ ಪಾಟೀಲ್ ಗುರುಗಳ ಕುರಿತು ಮಾತನಾಡಿದರು. ಆಶಾಲತಾ ಹೊನವಾಡ ಪ್ರಾರ್ಥಿಸಿದರು. ಧರೆಪ್ಪ ಉಮದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿರೇಶ್ ಬಡಿಗೇರ್ ಸ್ವಾಗತಿಸಿದರು. ಡಿ ಬಿ ಪಾಂಡೇಗಾವಿ ಹಾಗೂ ಆರ್ ಎಂ ಸಕ್ರಿ ನಿರೂಪಿಸಿದರು. ಗಿರಿಜಾ ಕುಂಬಾರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment