ವಿಜಯಪುರ: ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಗಳನ್ನು ಪ್ರತಿಯೊಬ್ಬ ನಾಗರಿಕರಿಗೆ ತಲುಪಿಸಲು ಕೇಂದ್ರ ಸರ್ಕಾರವು ೨೦೨೩ರ ಅಕ್ಟೋಬರ್ ೦೧ರಿಂದ ಡಿಸೆಂಬರ್ ೩೧ರವರೆಗೆ ಜನ ಸುರಕ್ಷಾ ಅಭಿಯಾನ ಹಮ್ಮಿಕೊಂಡಿದೆ.
ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ೧೮ ರಿಂದ ೭೦ ವರ್ಷ ವಯಸ್ಸಿನವರು ವರ್ಷಕ್ಕೆ ೨೦ ರೂ. ಪಾವತಿಸುವ ಮೂಲಕ ಎರಡು ಲಕ್ಷದ ಅಪಘಾತ ವಿಮೆ ಹಾಗೂ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ ೧೮ ರಿಂದ ೫೦ ವರ್ಷ ವಯಸ್ಸಿನವರು ವರ್ಷಕ್ಕೆ ೪೩೬ ರೂ. ಪಾವತಿಸುವ ಮೂಲಕ ಎರಡು ಲಕ್ಷ ಜೀವವಿಮೆ ಪಡೆದುಕೊಳ್ಳಬಹುದಾಗಿದ್ದು, ಸಾರ್ವಜನಿಕರು ತಮ್ಮ ಉಳಿತಾಯ ಖಾತೆ ಇರುವ ಬ್ಯಾಂಕ್‌ನ್ನು ಸಂಪರ್ಕಿಸಿ ಈ ವಿಮೆಗಳಿಗೆ ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅದರಂತೆ ಅಕ್ಟೋಬರ್ ೦೧ ರಿಂದ ಡಿಸೆಂಬರ್ ೩೧ರವರೆಗೆ ಘರ ಘರ ಕೆಸಿಸಿ ಅಭಿಯಾನ ಸಹ ಹಮ್ಮಿಕೊಂಡಿದ್ದು, ಯಾವುದೇ ಬ್ಯಾಂಕ್ ಅಥವಾ ಸೊಸೈಟಿಯಿಂದ ಬೆಳೆಸಾಲ ಪಡೆಯದಿರುವ ರೈತರು ಈ ಅಭಿಯಾನದಡಿ ತಮ್ಮ ಉಳಿತಾಯ ಖಾತೆ ಇರುವ ಅಥವಾ ತಮ್ಮ ಹತ್ತಿರದ ಬ್ಯಾಂಕಿಗೆ ಕೆಸಿಸಿ (ಬೆಳೆಸಾಲ) ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment