ವಿಜಯಪುರ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜಿಲ್ಲೆಯ ೨೦ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ನವೆಂಬರ್ ೦೧ರಂದು ಜರುಗುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಸಂಗಮೇಶ ಭೀಮಣ್ಣ ಕೆರೆಪ್ಪಗೋಳ, ಸಮಾಜ ಸೇವೆ-ಕನ್ನಡ ಸೇವೆ ಕ್ಷೇತ್ರದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಬಾಳಿ ಹಾಗೂ ಸಿದ್ರಾಮಪ್ಪಾ ದುಂಡಪ್ಪಾ ಕುಮಾನಿ, ಸಂಗೀತ ಕ್ಷೇತ್ರದಲ್ಲಿ ಶ್ರೀಧರ ರಾಮಯ್ಯ ಹರಿದಾಸ, ಜಾನಪದ ಕ್ಷೇತ್ರದಲ್ಲಿ ಮೌಲಾಸಾಬ ನಾನಾಸಾಬ ಜಾಹಗೀರದಾರ, ಚಿನ್ನಪ್ಪ ಗಿರಿಮಲ್ಲಪ್ಪ ಪೂಜಾರಿ ಹಾಗೂ ಶ್ರೀಮತಿ ಶೇಖವ್ವಾ ಭೀಮಣ್ಣ ಫರನಾಕರ ಇವರನ್ನು ಆಯ್ಕೆ ಮಾಡಲಾಗಿದೆ.
ರಂಗಭೂಮಿ ಕ್ಷೇತ್ರದಲ್ಲಿ ಯಮನಪ್ಪ ಹುಪನಪ್ಪ ಅಂಗಡಗೇರಿ ಹಾಗೂ ಶ್ರೀಮತಿ ಉಮಾ ಹಣಮಂತಪ್ಪ ರಾಣೆಬೆನ್ನೂರು, ಬಯಲಾಟ ಕ್ಷೇತ್ರದಲ್ಲಿ ಶಿವಣ್ಣ ಮಾಧುರಾಯ ಬಿರಾದಾರ, ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮತಿ ವೀನಾಕ್ಷಿ ಪಾಟೀಲ (ಕಲ್ಯಾಣಿ), ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಲ್ಲಮಪ್ರಭು ಮಲ್ಲಿಕಾರ್ಜುನ ಮಠ, ಸೀತಾರಾಮ ಚಿದಂಬರ ಕುಲಕರ್ಣಿ ಹಾಗೂ ಕೆ.ಎನ್.ರಮೇಶ ಅವರನ್ನು ಆಯ್ಕೆ ಮಾಡಲಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಶ್ರೀಕಾಂತ ಬಾಬುರಾವ್ ಮಿರಜಕರ, ಸಂಘ-ಸಂಸ್ಥೆಯಲ್ಲಿ ಬೆರಗು ಪ್ರಕಾಶ ಸಂಸ್ಥೆ, ಸಂಕೀರ್ಣ ಕ್ಷೇತ್ರದಲ್ಲಿ ಶ್ರೀಧರ ಗೋವಿಂದ ಕುಲಕರ್ಣಿ (ಆಹೇರಿ) ಹಾಗೂ ಡಾ.ಆನಂದ ಜೆ.ಕುಲಕರ್ಣಿ, ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಟಿ.ಎಚ್.ಮೇಲಿನಕೇರಿ ಹಾಗೂ ಟಿವಿ ಮಾಧ್ಯಮ ಕ್ಷೇತ್ರದಲ್ಲಿ ಷಡಕ್ಷರಿ ಬಸವರಾಜ್ ಕಂಪೂನವರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Related Posts
Add A Comment