Author: editor.udayarashmi@gmail.com

ಸಿಂದಗಿ: ಪಟ್ಟಣದ ಹೊರವಲಯದ ಪ್ರೇರಣಾ ಶಾಲೆಯಲ್ಲಿ ಕನ್ನಡ ರಾಜ್ಯೊತ್ಸವವನ್ನು ಆಚರಣೆ ಮಾಡಲಾಯಿತು.ಈ ವೇಳೆ ಶ್ರೀ ಸಮರ್ಥ ವಿದ್ಯಾ ವಿಕಾಸ ಸಂಸ್ಥೆಯ ಅಧ್ಯಕ್ಷ ಆರ್.ಡಿ ಕುಲಕರ್ಣಿ, ನಿರ್ದೇಶಕ ಪಿ.ಡಿ. ಕುಲಕರ್ಣಿ, ಮುಖ್ಯ ಗುರಮಾತೆ ಎಸ್.ಐ ಅಸ್ಕಿ ಸೇರಿದಂತೆ ಸಂಸ್ಥೆಯ ನಿರ್ದೇಶಕ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು. *ಶ್ರೀ ಪದ್ಮರಾಜ ಮಹಿಳಾ ಕಾಲೇಜು*ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.ಇದೇ ವೇಳೆ ಪದವಿ ಪ್ರಾಚಾರ್ಯ ಎಮ್.ಎಸ್ ಹೈಯ್ಯಾಳಕರ, ಎಸ್.ಎಂ ಪೂಜಾರಿ, ಉಪನ್ಯಾಸಕರಾದ ಜಿ.ಎ.ನಂದಿಮಠ, ಜಿ.ಎಸ್.ಕುಲಕರ್ಣಿ, ಎಸ್.ಸಿ ದುದ್ದಗಿ, ಹೇಮಾ ಕಾಸರ, ಯು.ಸಿ ಪೂಜೇರಿ, ಪ್ರಭಾವತಿ ಮಾಲಿಪಾಟೀಲ, ಎಂ.ಕೆ ಬಿರಾದಾರ, ಶೃತಿ ಹುಗಾರ, ಸತೀಶ ಕಕ್ಕಸಗೇರಿ, ಶಂಕರ ಕುಂಬಾರ, ವಿಜಯಲಕ್ಷ್ಮಿ ಭಜಂತ್ರಿ ಸೇರಿದಂತೆ ಅನೇಕರಿದ್ದರು. *ಬ್ಲಾಕ್ ಕಾಂಗ್ರೆಸ್ ಕಛೇರಿ*ಪಟ್ಟಣದ ಎಪಿಎಂಸಿಯಲ್ಲಿರುವ ಸಿಂದಗಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರ, ಜಯಶ್ರೀ ಹದನೂರ, ಶಾರದಾ ಬೆಟಗೇರಿ, ಮಹಾನಂದ…

Read More

ಸಿಂದಗಿ: ಕನ್ನಡ ನಾಡಿನಲ್ಲಿ ಕನ್ನಡವೇ ಪ್ರಥಮ, ಪ್ರಧಾನ, ಸಾರ್ವಭೌಮವಾಗಬೇಕು. ಉಳಿದ ಅನ್ಯ ಭಾಷೆಗಳು ಕನ್ನಡ ನೆಲದಲ್ಲಿ ಸೇವಕರಾಗಿ ಕೆಲಸ ಮಾಡಬೇಕು ಎಂದು ಎಚ್.ಜಿ.ಪಪೂ ಮಹಾವಿದ್ಯಾಲಯದ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಹೇಳಿದರು.ಬುಧವಾರದಂದು ನಗರದ ಬಸವ ಮಂಟಪದಲ್ಲಿ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಕನ್ನಡ ನಾಡನ್ನು ಕನ್ನಡ ನಾಡು, ಶ್ರೀಗಂಧದ ನಾಡು, ಕರುನಾಡ ನಾಡು, ಸಾಧು-ಸಂತರು, ದಾಸರು, ಶಿವಶರಣರು ಹಾಗೂ ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ. ಕನ್ನಡ ಅನ್ನದ ಭಾಷೆ, ಜೀವದ ಭಾಷೆ, ಪವಿತ್ರ ಭಾಷೆ, ಹೃದಯ ಭಾಷೆಯಾಗಿ ನಾವು ಕಾಣಬೇಕಾಗಿದೆ. ಏಕೆಂದರೆ ಆಂಗ್ಲದಲ್ಲಿ ಅನೇಕ ತಪ್ಪುಗಳನ್ನು ಕಾಣಬಹುದು ಆದರೆ ಕನ್ನಡ ಭಾಷೆ ಅಥವಾ ಪದದಲ್ಲಿ ಯಾವುದೇ ಒಂದು ತಪ್ಪನ್ನು ಕಾಣಲು ಸಾಧ್ಯವಿಲ್ಲ. ಕಾರಣ ಕನ್ನಡದ ಪ್ರತಿಯೊಂದ ಅಕ್ಷರ ಸಂಶೋಧನೆಯಿಂದ ಮೂಡಿ ಬಂದಿರುವ ಪದಗಳು. ನಾವೆಲ್ಲರೂ ನವೆಂಬರ್ ಕನ್ನಡಿಗರಾಗದೇ ನಂ: ೦೧ ಕನ್ನಡಿಗರಾಗೋಣ. ನಂ:೦೧…

Read More

ದೇವರಹಿಪ್ಪರಗಿ: ತಾಲ್ಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ೬೮ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಪಟ್ಟಣದ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಜರುಗಿದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ನೂರಾರು ವರ್ಷಗಳ ಇತಿಹಾಸ ಹೊಂದಿ, ಭವ್ಯ ಪರಂಪರೆಯ ಮೂಲಕ ಕನ್ನಡ ನಾಡಾಗಿ ಬೆಳಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಧಕರಿಗೆ ಅಭಿನಂದನೆಗಳು ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಬೂಲ್ ಕೊಕಟನೂರ ಮಾತನಾಡಿ, ನಾಡು ನುಡಿಗಾಗಿ ನಮ್ಮ ಸೇವೆ ಅನನ್ಯವಾಗಬೇಕು ಎಂದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಕ್ರೀಡೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದ ಮುಂಚೆ ನಾಡದೇವಿ ಮೆರವಣಿಗೆ ಡೊಳ್ಳು, ಹಲಗೆ, ಸನಾದಿ ವಾದ್ಯಗಳೊಂದಿಗೆ ಮೊಹರೆ ಹಣಮಂತರಾಯ ವೃತ್ತದ ಮೂಲಕ ಸಾಗಿ ಶಾಲಾ ಆವರಣ ತಲುಪಿತು.ಗಣ್ಯರಾದ ರಿಯಾಜ್ ಯಲಗಾರ, ಶಾಂತಯ್ಯ ಜಡಿಮಠ, ಬಶೀರ್‌ಅಹ್ಮದ್ ಬೇಪಾರಿ, ಉಮೇಶ ರೂಗಿ,…

Read More

ಜಯ್ ನುಡಿಜಯಶ್ರೀ.ಜೆ.ಅಬ್ಬಿಗೇರಿಇಂಗ್ಲಿಷ್ ಉಪನ್ಯಾಸಕರುಸ ಪ ಪೂ ಕಾಲೇಜುನಾಗನೂರ ಕಾಲೇಜುತಾ: ಬೈಲಹೊಂಗಲಜಿ:ಬೆಳಗಾವಿ೯೪೪೯೨೩೪೧೪೨ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರಾದ ಹುಯಿಲಗೋಳ ನಾರಾಯಣರ ಕನ್ನಡದ ಲೇಖನಿಯಿಂದ ಹೊರ ಹೊಮ್ಮಿದ ಕರ್ನಾಟಕದ ನಾಡಗೀತೆಯೆನಿಸಿದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ರಾಷ್ಟ್ರಕವಿ ಕುವೆಂಪು ವಿರಚಿತ ಜೈ ಭಾರತ ಜನನಿಯ ತನುಜಾತೆ, ಎಲ್ಲಾದರೂ ಎಂತಾದರೂ ಇರು, ವರಕವಿ ಬೇಂದ್ರೆಯವರ ಒಂದೇ ಒಂದೇ ಒಂದೇ ಕರ್ನಾಟಕ ಒಂದೇ, ಡಿ ಎಸ್ ಕರ್ಕಿಯವರ ಹಚ್ಚೆವು ಕನ್ನಡದ ದೀಪ. ಕೆ ಎಸ್ ನಿಸ್ಸಾರ ಅಹ್ಮದರ ನಿತ್ಯೋತ್ಸವದ ಗೀತೆಗಳು ನವಂಬರ್ ತಿಂಗಳಲ್ಲಿ ಮಾತ್ರ ಕನ್ನಡಿಗರ ಕಿವಿ ಮನಗಳನ್ನು ತಂಪಾಗಿಸುವ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಕನ್ನಡಮ್ಮನ ಮುದ್ದು ಕಂದಮ್ಮಗಳಾದ ನಾವು ನಿರಭಿಮಾನಿಗಳಾಗದಿರಲಿ ಎಂದು ಹಿರಿಯ ಸಾಹಿತಿಗಳು ನಮ್ಮಲ್ಲಿ ಪ್ರೇರಕ ಶಕ್ತಿಯಂತೆ ಇಂಥ ಸಾವಿರಾರು ಗೀತೆಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಕನ್ನಡಮ್ಮನ ಏಳ್ಗೆಯನ್ನು ಬಯಸಿದ ಅನೇಕ ಚಿಂತಕರು ನಾಡನ್ನು ಸುಭದ್ರವಾಗಿ ಕಟ್ಟೋದು ಹೇಗೆ? ಕಾಯೋದು ಹೇಗೆ? ಎನ್ನುವ ಚಿತ್ರವನ್ನು ನಮ್ಮ ಕೈಗಿತ್ತು ತೆರಳಿದ್ದಾರೆ. ಆದರೆ ನಾವಿಂದು ಪರಭಾಷೆಗಳ ವ್ಯಾಮೋಹಕ್ಕೆ ಬಲಿಯಾಗಿ ನಾಡು…

Read More

ರೈತ ಸಂಘದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ ಅಭಿಮತ ವಿಜಯಪುರ: ರಾಜ್ಯದಲ್ಲಿ ಬರಪರಿಸ್ಥಿತಿ ತಲೆದೋರಿ ರೈತ ಸಮುದಾಯ ತೀವ್ರ ಸಂಕಷ್ಟಕ್ಖೆ ಸಿಲುಕಿದ್ದು, ರೈತರ ಅನುಕೂಲಕ್ಕಾಗಿ ಏಕೆ ಒಂದು ಗ್ಯಾರಂಟಿ ಯೋಜನೆ ಘೋಷಣೆ ಮಾಡಬಾರದು? ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.ನಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ತೊಳಲಾಡುತ್ತಿದ್ದಾರೆ. ರೈತರಿಗಿರುವಷ್ಟು ಸಂಕಷ್ಟ ಬೇರಾರಿಗೂ ಇಲ್ಲ. ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆಯೇನೋ ನಿಜ. ಅದೇ ರೀತಿ ರೈತರಿಗೆ ಅನುಕೂಲವಾಗುವಂತೆ ರೈತರ ಜಮೀನಿಗೆ ನೀರು ಒದಗಿಸುವ, ಪಂಪಶೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವ, ಬೆಳೆದ ಬೆಳೆಗೆ ಸರಿಯಾದ ಬೆಲೆ ಕೊಡಿಸುವ ಗ್ಯಾರಂಟಿ ಯೋಜನೆಯನ್ನು ಘೋಷಿಸಬಹುದಾಗಿತ್ತಲ್ಲ ಎಂದು ಒತ್ತಾಯಿಸಿದರು.ಚುನಾವಣೆ ಬಂದಾಗ ರೈತರು, ನೀರಾವರಿ ಯೋಜನೆಗಳು ರಾಜಕಾರಣಿಗಳ ನೆನಪಿಗೆ ಬರುತ್ತವೆ. ಚುನಾವಣೆಯಾದ ನಂತರ…

Read More

ಮುದ್ದೇಬಿಹಾಳ: ನ.೧ ರಂದು ಸಂಜೆ ೬ಕ್ಕೆ ಪಟ್ಟಣದ ಪುರಸಭೆ ಕಾರ್ಯಾಲಯದ ಎದುರಿಗೆ ಟ್ರಾö್ಯಕ್ಸ್ ನಿಲ್ದಾಣದಲ್ಲಿ ಕಲಾವಿದರ ಬಳಗದಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ವಹಿಸಲಿದ್ದು, ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಉದ್ಘಾಟಿಸಲಿದ್ದಾರೆ. ಸಮಾಜ ಸೇವಕ ಸಿ.ಬಿ.ಅಸ್ಕಿ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ಮಾಜಿ ಸಮಸದಸ್ಯ ಕಾಮರಾಜ ಬಿರಾದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಪುನೀತ ಅಭಿಮಾನಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಕಲಾವಿದರು, ಪುನೀತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಆಯೋಜಕರು ಕೋರಿದ್ದಾರೆ

Read More

ಮುದ್ದೇಬಿಹಾಳ: ಏಕತೆಯ ಕೊರತೆ ಉಂಟಾಗದಂತೆ ನಡೆದುಕೊಂಡಲ್ಲಿ ಮಾತ್ರವೇ ದೇಶ ವಿಕಸಿತಗೊಳ್ಳಲು ಸಾಧ್ಯವೆಂದು ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಸರ್ದಾರ್ ವಲ್ಲಭಬಾಯಿಯವರ ಜನ್ಮ ದಿನಾಚರಣೆ ಪ್ರಯುಕ್ತ ಆಚರಿಸಿರುವ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ಭಾರತದಲ್ಲಿ ಎಲ್ಲರಲ್ಲಿ ನಾವು ಭಾರತೀಯರು ಎನ್ನುವ ಒಗ್ಗಟ್ಟಿನ ಭಾವನೆ ಬಂದಲ್ಲಿ ಮಾತ್ರವೇ ದೇಶ ಪ್ರಗತಿಯ ಉತ್ತುಂಗಕ್ಕೆ ಏರಲು ಸಾಧ್ಯ. ಮಕ್ಕಳು ಕಲಿವಿನ ಹಂತದಲ್ಲಿ ಸಂಕುಚಿತ ಮನೋಭಾವ ಮೂಡಿಸಿಕೊಂಡು ವೈಯಕ್ತಿಕ ಬೆಳವಣಿಗೆಯನ್ನು ಹಾಳುಮಾಡಿಕೊಳ್ಳುವುದಲ್ಲದೇ ದೇಶದ ಅಭಿವೃದ್ಧಿಗೆ ಮಾರಕ ಶಕ್ತಿಯಾಗಿ ಪರಿಣಮಿಸಬಾರದು. ಮಕ್ಕಳು ತಮ್ಮ ಪ್ರಾರಂಭಿಕ ಹಂತದಿಂದಲೇ ದೇಶಾಭಿಮಾನ ರೂಢಿಸಿಕೊಳ್ಳುವುದರ ಮೂಲಕ ದೇಶದ ಪ್ರಗತಿಗೆ ತನ್ನ ಕೊಡುಗೆಗಳನ್ನು ನೀಡಬೇಕು ಎಂದರು.ದೈಹಿಕ ಶಿಕ್ಷಕ ಬಿ.ಟಿ.ಭಜಂತ್ರಿಯವರು ಮಕ್ಕಳಿಗೆ ರಾಷ್ಟ್ರೀಯ ಏಕತಾ ದಿವಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕಿ ಶಬಾನಾ ಲೈನ್ ಸ್ವಾಗತಿಸಿದರು. ರಮೇಶ ಮಡಿವಾಳರ ವಂದಿಸಿದರು.

Read More

ವಿಜಯಪುರ: ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿರುವ ಶಿವಾನುಭವ ಮಂಟಪದಲ್ಲಿ ಮಂಗಳವಾರ ದೀಪಾವಳಿ ಉಡುಗೊರೆ ಕಿಟ್ ವಿತರಣೆಗೆ ಕರ್ನಾಟಕ ರಾಜ್ಯ ಸಹಕಾರಿ ನಿಯಮಿತ ಬೆಂಗಳೂರು ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ವಿಜಯಪುರ ನಗರ ಮತಕ್ಷೇತ್ರದ ಬಡ ಕುಟುಂಬದವರು ಹಿಂದೂಗಳ ದೊಡ್ಡ ಹಬ್ಬವಾದ ದೀಪಾವಳಿಯನ್ನು ಅತ್ಯಂತ ಖುಷಿಯಿಂದ ಆಚರಿಸಬೇಕು. ಎಲ್ಲರ ಮನೆಯಲ್ಲಿ ನಂದಾ ದೀಪ ಬೆಳಗಲೆಂದು ಶಾಸಕರು ಹಾಗೂ ತಂದೆಯವರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು, ನಗರದ 11 ಸಾವಿರ ಬಡ ಕುಟುಂಬಗಳಿಗೆ ದೀಪಾವಳಿ ಉಡುಗೊರೆಯಾಗಿ ಎರಡು ಸಾವಿರ (₹2,000) ಕಿಟ್ ನೀಡಲು ಘೋಷಿಸಿದಂತೆ ಅರ್ಹ ಬಡ ಕುಟುಂಬಗಳಿಗೆ ಕಿಟ್ ವಿತರಣೆಗೆ ಚಾಲನೆ ನೀಡಿದೆ.ಕಿಟ್ ದಲ್ಲಿ ಬೆಲ್, ಕಡಲೆ ಬೆಳೆ, ಪಾಮ್ ಐಲ್, ಗೋಧಿ ಹಿಟ್ಟು, ಬದಾಮಿ, ಕಿಸ್ ಮಿಸ್, ಅಕ್ಕಿ, ದೀಪ, ವಿಭೂತಿ ಹಾಗೂ ಬಟ್ಟೆಗಳು ಒಳಗೊಂಡಿವೆ. ನಗರದ ಜನತೆ ಖುಷಿ ಮತ್ತು ಶ್ರದ್ಧಾಭಕ್ತಿಯಿಂದ ಹಬ್ಬ ಆಚರಿಸಲಿ. ಮಹಾಲಕ್ಷ್ಮಿ ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿ…

Read More

ಆರೋಗ್ಯ ತಪಾಸಣಾ ಉಚಿತ ಶಿಬಿರದಲ್ಲಿ ಐಆರ್‌ಬಿ ಸಿಬ್ಬಂದಿ ಅಭಿಮತ ವಿಜಯಪುರ: ಸಿದ್ಧೇಶ್ವರ ಶ್ರೀಗಳ ಹೆಸರಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದಕ್ಕೂ ಸಾರ್ಥಕ ಎನಿಸುತ್ತದೆ. ಇಲ್ಲಿರುವ ಸುಂದರ ಪರಿಸರ, ಅದ್ಭುತವಾದ ವಾತಾವರಣ, ಪರಿಸರ ಸ್ನೇಹಿ ವ್ಯವಸ್ಥೆ, ಸುಚಿತ್ವ ಹಾಗೂ ನಗುಮೊಗದ ಸೇವೆಯನ್ನು ಕಂಡರೆ ಅರ್ಧ ಆರೋಗ್ಯದ ಸಮಸ್ಯೆ ವೈದ್ಯರನ್ನು ಕಾಣುವ ಮೊದಲೇ ಸರಿ ಹೋಗುತ್ತದೆ. ಹೀಗಾಗಿ ಇದನ್ನು ಆಸ್ಪತ್ರೆ ಎನ್ನುವುದಕ್ಕಿಂತಲೂ ಆಧ್ಯಾತ್ಮಿಕ ಅನುಭೂತಿಯ ತಾಣ ಎಂದರೂ ತಪ್ಪಾಗುವುದಿಲ್ಲ ಎನ್ನುವ ಭಾವನೆಯನ್ನು ವ್ಯಕ್ತ ಪಡಿಸಿದ ಇಂಡಿಯನ್ ರಿಸರ್ವ ಬೆಟಾಲಿಯನ್‌ನ ಸಿಬ್ಬಂಧಿಗಳು ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಂಡು ಮನಸಾರೆ ಹೊಗಳಿದರು.ಮುಂಬರಲಿರುವ ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ ಚುನಾವಣೆಗಳಿಗೆ ಕಾನೂನು ಸೂವ್ಯವಸ್ಥೆಯನ್ನು ಕಾಪಾಡಲು ಸಿದ್ಧಗೊಂಡಿರುವ ೨ ಕಂಪನಿ ಅಂದರೆ ೨೦೦ ಜನರಿರುವ ಇಂಡಿಯನ್ ರಿಸರ್ವ ಬೆಟಾಲಿಯನ್ ಸಿಬ್ಬಂಧಿಗಳಿಗೆಂದು ನಗರದ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡ ಸಿಬ್ಬಂಧಿವರ್ಗ ಆಸ್ಪತ್ರೆಯ ಸಹೃದಯದ ಸೇವೆಯನ್ನು ಕಂಡು ಸಂತಸ ವ್ಯಕ್ತ ಪಡಿಸಿದರು. ನಮ್ಮಲ್ಲಿ…

Read More