ಮುದ್ದೇಬಿಹಾಳ: ಏಕತೆಯ ಕೊರತೆ ಉಂಟಾಗದಂತೆ ನಡೆದುಕೊಂಡಲ್ಲಿ ಮಾತ್ರವೇ ದೇಶ ವಿಕಸಿತಗೊಳ್ಳಲು ಸಾಧ್ಯವೆಂದು ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಸರ್ದಾರ್ ವಲ್ಲಭಬಾಯಿಯವರ ಜನ್ಮ ದಿನಾಚರಣೆ ಪ್ರಯುಕ್ತ ಆಚರಿಸಿರುವ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಭಾರತದಲ್ಲಿ ಎಲ್ಲರಲ್ಲಿ ನಾವು ಭಾರತೀಯರು ಎನ್ನುವ ಒಗ್ಗಟ್ಟಿನ ಭಾವನೆ ಬಂದಲ್ಲಿ ಮಾತ್ರವೇ ದೇಶ ಪ್ರಗತಿಯ ಉತ್ತುಂಗಕ್ಕೆ ಏರಲು ಸಾಧ್ಯ. ಮಕ್ಕಳು ಕಲಿವಿನ ಹಂತದಲ್ಲಿ ಸಂಕುಚಿತ ಮನೋಭಾವ ಮೂಡಿಸಿಕೊಂಡು ವೈಯಕ್ತಿಕ ಬೆಳವಣಿಗೆಯನ್ನು ಹಾಳುಮಾಡಿಕೊಳ್ಳುವುದಲ್ಲದೇ ದೇಶದ ಅಭಿವೃದ್ಧಿಗೆ ಮಾರಕ ಶಕ್ತಿಯಾಗಿ ಪರಿಣಮಿಸಬಾರದು. ಮಕ್ಕಳು ತಮ್ಮ ಪ್ರಾರಂಭಿಕ ಹಂತದಿಂದಲೇ ದೇಶಾಭಿಮಾನ ರೂಢಿಸಿಕೊಳ್ಳುವುದರ ಮೂಲಕ ದೇಶದ ಪ್ರಗತಿಗೆ ತನ್ನ ಕೊಡುಗೆಗಳನ್ನು ನೀಡಬೇಕು ಎಂದರು.
ದೈಹಿಕ ಶಿಕ್ಷಕ ಬಿ.ಟಿ.ಭಜಂತ್ರಿಯವರು ಮಕ್ಕಳಿಗೆ ರಾಷ್ಟ್ರೀಯ ಏಕತಾ ದಿವಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕಿ ಶಬಾನಾ ಲೈನ್ ಸ್ವಾಗತಿಸಿದರು. ರಮೇಶ ಮಡಿವಾಳರ ವಂದಿಸಿದರು.
Related Posts
Add A Comment