ವಿಜಯಪುರ: ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿರುವ ಶಿವಾನುಭವ ಮಂಟಪದಲ್ಲಿ ಮಂಗಳವಾರ ದೀಪಾವಳಿ ಉಡುಗೊರೆ ಕಿಟ್ ವಿತರಣೆಗೆ ಕರ್ನಾಟಕ ರಾಜ್ಯ ಸಹಕಾರಿ ನಿಯಮಿತ ಬೆಂಗಳೂರು ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ವಿಜಯಪುರ ನಗರ ಮತಕ್ಷೇತ್ರದ ಬಡ ಕುಟುಂಬದವರು ಹಿಂದೂಗಳ ದೊಡ್ಡ ಹಬ್ಬವಾದ ದೀಪಾವಳಿಯನ್ನು ಅತ್ಯಂತ ಖುಷಿಯಿಂದ ಆಚರಿಸಬೇಕು. ಎಲ್ಲರ ಮನೆಯಲ್ಲಿ ನಂದಾ ದೀಪ ಬೆಳಗಲೆಂದು ಶಾಸಕರು ಹಾಗೂ ತಂದೆಯವರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು, ನಗರದ 11 ಸಾವಿರ ಬಡ ಕುಟುಂಬಗಳಿಗೆ ದೀಪಾವಳಿ ಉಡುಗೊರೆಯಾಗಿ ಎರಡು ಸಾವಿರ (₹2,000) ಕಿಟ್ ನೀಡಲು ಘೋಷಿಸಿದಂತೆ ಅರ್ಹ ಬಡ ಕುಟುಂಬಗಳಿಗೆ ಕಿಟ್ ವಿತರಣೆಗೆ ಚಾಲನೆ ನೀಡಿದೆ.
ಕಿಟ್ ದಲ್ಲಿ ಬೆಲ್, ಕಡಲೆ ಬೆಳೆ, ಪಾಮ್ ಐಲ್, ಗೋಧಿ ಹಿಟ್ಟು, ಬದಾಮಿ, ಕಿಸ್ ಮಿಸ್, ಅಕ್ಕಿ, ದೀಪ, ವಿಭೂತಿ ಹಾಗೂ ಬಟ್ಟೆಗಳು ಒಳಗೊಂಡಿವೆ. ನಗರದ ಜನತೆ ಖುಷಿ ಮತ್ತು ಶ್ರದ್ಧಾಭಕ್ತಿಯಿಂದ ಹಬ್ಬ ಆಚರಿಸಲಿ. ಮಹಾಲಕ್ಷ್ಮಿ ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿ ಕರುಣಿಸಲೆಂದು ಪ್ರಾರ್ಥಿಸುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸೂಪರ್ ಬಜಾರ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ಉಮೇಶ ಕೋರೆ, ವಿಜಯಕುಮಾರ ಡೋಣಿ, ಮಧುಸೂದನ ಯಲಗುದ್ರಿ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ವಿಠ್ಠಲ ಹೊಸಪೇಟೆ, ಮುಖಂಡರಾದ ಅಶೋಕ ಬೆಲ್ಲದ, ಪ್ರವೀಣ ಬಿಜ್ಜರಗಿ, ನಾಗೇಶ ಬಿರಾದಾರ ಸೇರಿದಂತೆ ಸೂಪರ್ ಬಜಾರ್ ಬಜಾರ್ ಸಿಬ್ಬಂದಿ ವರ್ಗದವರು ಇದ್ದರು.
Related Posts
Add A Comment