ದೇವರಹಿಪ್ಪರಗಿ: ತಾಲ್ಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ೬೮ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಪಟ್ಟಣದ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಜರುಗಿದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ನೂರಾರು ವರ್ಷಗಳ ಇತಿಹಾಸ ಹೊಂದಿ, ಭವ್ಯ ಪರಂಪರೆಯ ಮೂಲಕ ಕನ್ನಡ ನಾಡಾಗಿ ಬೆಳಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಧಕರಿಗೆ ಅಭಿನಂದನೆಗಳು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಬೂಲ್ ಕೊಕಟನೂರ ಮಾತನಾಡಿ, ನಾಡು ನುಡಿಗಾಗಿ ನಮ್ಮ ಸೇವೆ ಅನನ್ಯವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಕ್ರೀಡೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಮುಂಚೆ ನಾಡದೇವಿ ಮೆರವಣಿಗೆ ಡೊಳ್ಳು, ಹಲಗೆ, ಸನಾದಿ ವಾದ್ಯಗಳೊಂದಿಗೆ ಮೊಹರೆ ಹಣಮಂತರಾಯ ವೃತ್ತದ ಮೂಲಕ ಸಾಗಿ ಶಾಲಾ ಆವರಣ ತಲುಪಿತು.
ಗಣ್ಯರಾದ ರಿಯಾಜ್ ಯಲಗಾರ, ಶಾಂತಯ್ಯ ಜಡಿಮಠ, ಬಶೀರ್‌ಅಹ್ಮದ್ ಬೇಪಾರಿ, ಉಮೇಶ ರೂಗಿ, ಕಾಶೀನಾಥ ಜಮಾದಾರ, ಕಾಶೀನಾಥ ಬಜಂತ್ರಿ, ಸುಮಂಗಲಾ ಸೆಬೇನವರ, ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಪಿಎಸೈ ಬಸವರಾಜ ತಿಪ್ಪಾರೆಡ್ಡಿ, ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಡಾ.ಆರ್.ಆರ್.ನಾಯಿಕ, ಬಾಬುಗೌಡ ಪಾಟೀಲ(ಜಿಡ್ಡಿಮನಿ), ಸೋಮು ದೇವೂರ, ಪ್ರಕಾಶ ಮಲ್ಹಾರಿ, ಬಸವರಾಜ ದೇವಣಗಾಂವ, ಎಂ.ಜಿ.ಯಂಕಂಚಿ, ಎ.ಎಚ್.ವಾಲೀಕಾರ, ವಿಜಯಲಕ್ಷ್ಮಿ ನವಲಿ, ಅಶೋಕ ಹೆಗಡೆ, ಅರುಣ ಕೋರವಾರ, ಜಗನ್ನಾಥ ಸಜ್ಜನ, ಪಿ.ಸಿ.ತಳಕೇರಿ, ಜಿ.ಪಿ.ಬಿರಾದಾರ, ರೆಹಮಾನ್ ಕಣಕಾಲ ಸೇರಿದಂತೆ ಸಿದ್ಧೇಶ್ವರ ಸ್ವಾಮೀಜಿ ಶಾಲೆ ಹಾಗೂ ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕ ಸಿಬ್ಬಂದಿ ಇದ್ದರು.
Related Posts
Add A Comment