Subscribe to Updates
Get the latest creative news from FooBar about art, design and business.
Author: editor.udayarashmi@gmail.com
Udayarashmi kannada daily newspaper
ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯ | ಪಕ್ಷ ಸಂಘಟಿಸುವ ಸಾಮರ್ಥ್ಯ | ಪಕ್ಷ ಸಂಘಟಿಸಲು ಮುಂದಾಗುವ ಬಿಎಸ್ವೈ ಬೆಂಗಳೂರು: ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿಯವರು ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರನ್ನು ಘೋಷಣೆ ಮಾಡದಿರುವುದು ಅವರಿಗೆ ಬಹುದೊಡ್ಡ ಹಿನ್ನಡೆಗೂ ಕಾರಣವಾಗಿದೆ.ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಹೈಕಮಾಂಡ್ ಮಾತ್ರ ನೇಮಕಾತಿಗೆ ಮೀನಮೇಷ ಎಣಿಸುತ್ತಿದೆ. ಈ ನಿಟ್ಟಿನಲ್ಲಿ ಯಾರು ಅಧ್ಯಕ್ಷ ಆಗಬೇಕು ಎಂಬ ಬಗ್ಗೆ ಇನ್ನು ಗೊಂದಲ ಮುಂದುವರೆದಿದೆ. ಈಗಾಗಲೇ ಕೇಳಿ ಬಂದಿರುವಂತೆ ಬಿಎಸ್ ಯಡಿಯೂರಪ್ಪ ಅವರ ಮಗ ಶಾಸಕ ಬಿವೈ ವಿಜಯೇಂದ್ರ ಅವರ ಹೆಸರು ಈ ಹುದ್ದೆಗೆ ಕೇಳಿ ಬಂದಿದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಲಿಂಗಾಯತ ಸಮುದಾಯದ ಕೋಪವೇ ಕಾರಣ ಎಂಬ ಬಗ್ಗೆ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯನ್ನು ಬಿವೈ ವಿಜಯೇಂದ್ರ ಅವರಿಗೆ ನೀಡಬೇಕು ಎಂದು ಎಲ್ಲೆಡೆ ಆಗ್ರಹ ಕೇಳಿ ಬಂದಿದೆ. ಮಾಜಿ…
– ಕಾ ವಿ ರಮೇಶ್ ಕುಮಾರ್ ಮಾತು ಮನಸಿನ ಶುಭಮಿಲನಆರಂಭವು ಬದುಕಿನ ನವಜೀವನಹೃದಯಗಳ ಶ್ರುತಿಲಯ ಗಾಯನಸಂಪ್ರೀತ ಭಾವಗಳ ಪ್ರೇಮಬಂಧನ ಸ್ಮರಿಸುತ ದೇವರ ಬಯಸಿ ಕರುಣೆಬೆಸೆದಿಹ ಬೆಸುಗೆಯಲಿ ಆಕರ್ಷಣೆಒಲವಿನಲಿ ತನುಮನಗಳ ಅರ್ಪಣೆವರುಷದ ಹರುಷಕೆ ಹೊಸ ಪ್ರೇರಣೆ
– ಸುಜಾತಾ ಪ್ರಸಾದ್ ಸಂಸ್ಕೃತ ಮತ್ತು ಗ್ರೀಕ್ ಭಾಷೆಯ ನಂತರ ವಿಶ್ವದಲ್ಲೇ ನಮ್ಮ ಕನ್ನಡ ಮೂರನೇ ಪುರಾತನ ಭಾಷೆ. ಮೂರು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಭಾಷೆ ನಮ್ಮ ಕನ್ನಡ. ‘ಕನ್ನಡ ಎನೆ ಕುಣಿದಾಡುವುದೆನ್ನದೆ, ಕನ್ನಡ ಎನೆ ಕಿವಿ ನಿಮಿರುವುದು’ ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದರಲ್ಲಾಗಲಿ, ‘ ಕನ್ನಡ ಎಂದರೆ ಬರೀ ನುಡಿಯಲ್ಲ ಹಿಂದಿದೆ ಅದರ ಅರ್ಥ,’ ‘ಜಲವೆಂದರೆ ಕೇವಲ ನೀರಲ್ಲ ಅದು ಪಾವನ ತೀರ್ಥ’.. ಎಂದು ನಿತ್ಯೋತ್ಸವ ಕವಿ ನಿಸಾರ ಅಹಮದ್ ಬರದಿದ್ದರಲ್ಲಾಗಲಿ ಉತ್ಪ್ರೇಕ್ಷೆ ಇಲ್ಲ. ಏಕೆಂದರೆ ಕನ್ನಡ ಭಾಷೆಗಿರುವ ಮಹತ್ವವೇ ಅಂತಹುದು. ಅಮೋಘ ವರ್ಷ ‘ಕವಿರಾಜಮಾರ್ಗ’ ರಚಿಸುವಾಗ ಇಂಗ್ಲಿಷ್ ಭಾಷೆ ಇನ್ನೂ ತೊಟ್ಟಿಲೊಳಗಿರುವ ಕೂಸಾಗಿತ್ತು, ಹಿಂದಿ ಭಾಷೆ ಹುಟ್ಟಿರಲೇ ಇಲ್ಲವಂತೆ. ವಿಶ್ವದ ‘ಲಿಪಿಗಳ ರಾಣಿ ‘ ಎಂದರೆ ಕನ್ನಡ ಲಿಪಿ ಎಂದು ಶ್ರೀವಿನೋಭಾಭಾವೇಯವರೇ ಹೇಳಿದ್ದರು ಎಂಬುದು ಕನ್ನಡದ ಶ್ರೇಷ್ಠತೆಗೆ ಸಾಕ್ಷಿ.. ನಮ್ಮ ಕರುನಾಡು ಸಿರಿ ನಾಡು, ಇಲ್ಲಿ ಹರಿಯುವ ನದಿಗಳು, ದಟ್ಟ ಅಭಯಾರಣ್ಯಗಳು, ಗುಡಿ ಗೋಪುರಗಳು, ಇತಿಹಾಸ…
ವಿಜಯಪುರ: ಸನ್ ೨೦೨೩ರ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಮಾಜ ಸೇವೆಯಲ್ಲಿ ಗಣನೀಯ ಸೇವೆಯನ್ನು ಪರಿಗಣಿಸಿ ಜಲನಗರದಲ್ಲಿ ಎಸ್.ಡಿ. ಕುಮಾನಿ ಅವರಿಗೆ ವಾರ್ಡ ನಂ.೨೨ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಸನ್ಮಾನಿಸಿದರು.ಕುಮಾನಿ ಅವರು ವಿಜಯಪುರಕ್ಕೆ ಕಾರ್ಮಿಕರಾಗಿ ಬಂದು ಹಮಾಲಿ ಮಾಡುವ ಜನರಿಗೆ ಸಾವಿರಾರು ಮನೆಗಳನ್ನು ಮಂಜೂರು ಜನಪ್ರೀಯ ಸಮಾಜ ಸೇವಕರಾಗಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಈ ಬಾರಿ ಜಿಲ್ಲಾಡಳಿತ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಹರ್ಷವನ್ನುಂಟು ಮಾಡಿದೆ ಎಂದರು.ಕಾರ್ಮಿಕ ಮುಖಂಡ ಅಶೋಕ ಜುಗತಿ ಮಾತನಾಡಿ, ಕುಮಾನಿ ಅವರು ಸದ್ಯ ೮೨ ವರ್ಷದ ತಮ್ಮ ಇಳಿ ವಯಸ್ಸಿನಲ್ಲಿ ಯುವಕರಿಗೆ ಓಡಾಡಿ ಪ್ರಮಾಣಿಕವಾಗಿ ಕೆಲಸ ಮಾಡುತ್ತಾರೆ. ಇವರು ಜಲನಗರದಲ್ಲಿ ನಿರ್ಮಿಸಿರುವ ನೀಲೂರು ನಿಂಬೆಕ್ಕ ಮಂಗಲ ಕಾರ್ಯಾಲಯದಲ್ಲಿ ಮದುವೆ ಮಾಡಲು ಬರುವ ಕಡುಬಡವ ಜನರಿಗೆ ಉಚಿತವಾಗಿ ಮಂಗಲ ಕಾರ್ಯಾಲಯವನ್ನು ನೀಡುತ್ತಾ ಜನಪ್ರೀಯ ಸೇವೆಯನ್ನು ಮುಂದುವರೆಸಿಕೊಂಡು ಬಂದಿರುವ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ನಾನಾಗೌಡ ಬಿರಾದಾರ, ಮಲ್ಲಿಕಾರ್ಜುನ ವಾರನಾಸಿ, ಸಂತೋಷ ತೇಲಸಂಗ, ರಮೇಶ…
ವಿಜಯಪರ: ರಾಷ್ಟ್ರ ಸೇವಾದಳದ ವ್ಯಕ್ತಿ ಮತ್ತು ವಿಕಾಸ ಶಿಬಿರದ ಕಾರ್ಯಕ್ರಮವು ನ.೬ ರಿಂದ ೧೦ವರೆಗೆ ನಗರದ ಮಾತೋಶ್ರಿ ರಮಾಬಾಯಿ ಅಂಬೇಡ್ಕರ ಪ್ರೌಢಶಾಲೆ, ಸಂಯುಕ್ತ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ನವರಸಪುರ, ಸಂಗೀತ ಮಹಲ್ ಹತ್ತಿರ ಜರುಗಲಿದೆ.
ಹೂವಿನ ಹಿಪ್ಪರಗಿ: ನೀರು ಜೀವ ಜಲವಾಗಿದ್ದು, ಅದನ್ನು ಗ್ರಾಮಸ್ಥರು ನಿಯಮಿತವಾಗಿ ಬಳಕೆ ಮಾಡಬೇಕು.ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೀರು ಒದಗಿಸುವ ಉದ್ದೇಶದಿಂದ ಮನೆ ಮನೆಗೂ ಗಂಗೆ ಯೋಜನೆಯಡಿ ಕ್ಷೇತ್ರದ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹೇಳಿದರು.ಬಸವನ ಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ಪಂಚಾಯತಿ ಆವರಣದಲ್ಲಿ ನಡೆದ ಜಿಲ್ಲಾ ಪಂಚಾಯತಿ ವಿಜಯಪುರ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯಲ್ಲಿ ೨೦೨೨-೨೩ನೇ ಸಾಲಿನ ಜಲಜೀವನ ಮಿಷನ್ ಯೋಜನೆಯಲ್ಲಿ ಸುಮಾರು ೩ ಕೋಟಿ ೫೬ ಲಕ್ಷ ರೂಗಳ ವೆಚ್ಚದಲ್ಲಿ ಮನೆ ಮನೆ ನಳ ಸಂಪರ್ಕ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೀರು ಒದಗಿಸುವ ಉದ್ದೇಶದಿಂದ ಮನೆ ಮನೆಗೂ ಗಂಗೆ ಯೋಜನೆಯಡಿ ಕ್ಷೇತ್ರದ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅನಿಲಗೌಡ…
ಕಲಕೇರಿ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ವಲಯ ಸಮಿತಿ ಕಲಕೇರಿ ಇದರ ಅಡಿಯಲ್ಲಿ ಕಾಯಕ ನಿಧಿ ವಿವಿದೋದ್ದೇಶಗಳ ಸ್ವಸಹಾಯ ಸಂಘದ ವತಿಯಿಂದ ಗ್ರಾಮದ ಶ್ರೀ ಗುರು ಮರುಳಾರಾಧ್ಯ ಹಿರೇಮಠದಲ್ಲಿ ಕಲಕೇರಿಯ ಟೈಲರ್ ಬಂಧುಗಳು ಕೂಡಿಕೊಂಡು ಕರ್ನಾಟಕ ರಾಜ್ಯೋತ್ಸವವನ್ನು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು ಸಂಘದ ಅಧ್ಯಕ್ಷರಾದ ಶಾಂತಯ್ಯ ವೀರಭದ್ರಯ್ಯ ಹಿರೇಮಠ, ಉಪಾಧ್ಯಕ್ಷರಾದ ಮನೋಹರ ಪತ್ತಾರ ಕಾರ್ಯದರ್ಶಿಗಳಾದ ಸುಜಾತ ಎಸ್ ಅವಟಿ ಸಂಘದ ಸದಸ್ಯರುಗಳಾದ ವಿಮಲಾ ಹಿರೇಮಠ, ಸರೋಜಿನಿ ಹಿರೇಮಠ, ರೇಖಾ ಹಿರೇಮಠ, ಶೋಭಾ ಗದ್ದಿಗಿಮಠ, ಪೂಜಾ ಬಡಿಗೇರ, ವಿಜಯಲಕ್ಷ್ಮಿ ಬಡಿಗೇರ, ಸಾವಿತ್ರಿ ಬಡಿಗೇರ, ಕಾಶಿಬಾಯಿ ಬಡಿಗೇರ, ಜಗದೇವಿ ಗಣಾಚಾರಿ, ಶಾಂತಮ್ಮ ಗಣಾಚಾರಿ ಸೇರಿದಂತೆ ಇತರರು ಇದ್ದರು.
ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ್ ಸೂಚನೆ ವಿಜಯಪುರ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಉದ್ಭವಿಸಬಹುದಾದ ಸಮಸ್ಯೆಗಳನ್ನು ಯೋಜನಾಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ನಿರ್ವಹಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಬರ ಪರಿಸ್ಥಿತಿಯಿರುವುದರಿಂದ ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪಗಳಿಗೆ ಆಸ್ಪದ ನೀಡದೆ ಶಿಸ್ತುಬದ್ಧ-ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ಮೂಲಕ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು. ಕುಡಿಯುವ ನೀರು, ಉದ್ಯೋಗ ಇತ್ಯಾದಿ ಸಮಸ್ಯೆಗಳು ಉದ್ಭವಿಸದಂತೆ ಪೂರ್ವಸಿದ್ಧತೆಯೊಂದಿಗೆ ಕಾರ್ಯನಿರ್ವಹಿಸಬೇಕು. ಜನರಿಂದ ಬರುವ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ, ನಿಮ್ಮ ಹಂತದಲ್ಲಿಯೇ ಪರಿಹಾರ ದೊರಕಿಸಲು ಪ್ರಯತ್ನಿಸಬೇಕು. ಈ ಕುರಿತು ಮೇಲಾಧಿಕಾರಿಗಳಿಗೆ ತತಕ್ಷಣ್ ವರದಿ ಸಲ್ಲಿಸಬೇಕು. ಯಾವುದೇ ನಿರ್ಲಕ್ಷ್ಯ ವಹಿಸಬಾರದು…
ವಿಜಯಪುರ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮತದಾರರ ಪಟ್ಟಿಯ ವೀಕ್ಷಕರಾದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ್ ಅವರು ಇಂಡಿ ವಿಧಾನಸಭಾ ಮತಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶುಕ್ರವಾರ ಇಂಡಿ ತಾಲೂಕಿನ ಹೊರ್ತಿ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಭೇಟಿ ನೀಡಿದ ಅವರು, ಮಕ್ಕಳ ಹಾಜರಾತಿ ಮತ್ತು ನಿರ್ಮಾಣ ಹಂತದ ಕಟ್ಟಡ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. ನಂತರ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.ಇಂಡಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ ೧೭೮ ರಿಂದ ೧೮೪ ರವರೆಗೆ ಮತಗಟ್ಟೆಗಳಿಗೆ ಭೇಟಿ ನೀಡಿದ ಅವರು, ಮತಗಟ್ಟೆಗಳಲ್ಲಿರುವ ಮೂಲಸೌಲಭ್ಯಗಳ ಕುರಿತು ಪರಿಶೀಲನೆ, ಬಿಎಲ್‌ಓಗಳಿಗೆ ವಿಶೇಷ ಅಭಿಯಾನ ಬಗ್ಗೆ ತಿಳುವಳಿಕೆ ಮೂಡಿಸಿ, ಬಿಎಲ್‌ಓ ತಂತ್ರಾಂಶ ಪ್ರಗತಿ…
